
ನವದೆಹಲಿ(ಮಾ.28): ಲಾಕ್‌ಡೌನ್‌ನಿಂದ ಟೀಂ ಇಂಡಿಯಾ ಕ್ರಿಕೆಟಿಗರು ಮನೆಯೊಳಗೆ ಕೂತ ಅಭಿಮಾನಿಗಳು ಹಾಗೂ ಭಾರತೀಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸುರಕ್ಷತೆ ಹಾಗೂ ಆರೋಗ್ಯಕ್ಕಾಗಿ ಮನೆಯೊಳಗೆ ಇರಲು ಮನವಿ ಮಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅಭಿಮಾನಿಗಳಲ್ಲಿ ಹಲವು ಮನವಿ ಮಾಡಿಕೊಂಡಿದ್ದಾರೆ. ಇದೀಗ ಇವರು ತಮ್ಮ ವಿಶ್ರಾಂತಿ ಸಮಯದಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಲಾಕ್‌ಡೌನ್‌ನಿಂದ ಎಲ್ಲವೂ ಕ್ಲೂಸ್, ಹೀಗಾಗಿ ಕೊಹ್ಲಿಯ ಹೇರ್‌ಕಟ್ಟಿಂಗ್ ಮಾಡಿದ್ದಾರೆ.
ಅನುಷ್ಕಾ ಶರ್ಮಾ ಅಡುಗೆ ಮನೆ ಕತ್ತರಿ ಹಿಡಿದು ಕೊಹ್ಲಿ ಹೇರ್ ಕಟ್ ಮಾಡಿದ್ದಾರೆ. ಇನ್ನು ಕೊಹ್ಲಿ ನನ್ನ ಪತ್ನಿಯಿಂದ ಉತ್ತಮ ಹೇರ್ ಸ್ಟೈಲ್ ಎಂದಿದ್ದಾರೆ. ಅನುಷ್ಕಾ ಶರ್ಮಾ, ಕೊಹ್ಲಿ ಹೇರ್ ಕಟ್ಟಿಂಗ್ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಕೆಲ ಕ್ಷಣಗಳಲ್ಲೇ ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಹಾಗೂ ಕಮೆಂಟ್ ಮಾಡಿದ್ದಾರೆ.
ಹೇರ್ ಕಟ್ಟಿಂಗ್ ವಿಡಿಯೋ ಮೂದಲು ಕೊಹ್ಲಿ ಭಾರತೀಯ ಜನತೆಯಲ್ಲಿ ಮನೆಯಲ್ಲೇ ಇರಲು ಮನವಿ ಮಾಡಿದ್ದರು. ನಾನು ಕ್ರಿಕೆಟಿಗನಾಗಿ ಈ ಮಾತನ್ನು ಹೇಳುತ್ತಿಲ್ಲ, ಈ ದೇಶದ ಪ್ರಜೆಯಾಗಿ ಹೇಳುತ್ತಿದ್ದೇನೆ. ಲಾಕ್‌ಡೌನ್ ಆದೇಶವಿದ್ದರೂ, ಕರ್ಫ್ಯೂ ಇದ್ದರೂ ಹೆಚ್ಚಿನವರು ಪಾಲಿಸುತ್ತಿಲ್ಲ. ಗುಂಪುಗುಂಪಾಗಿ ಓಡಾಡುತ್ತಿದ್ದಾರೆ. ನಾವು ವೈರಸ್ ಹರಡುವಿಕೆ ತಡೆಯುವ ಕುರಿತು ಗಂಭೀರವಾಗಿ ಆಲೋಚಿಲ್ಲ. ಕೊರೋನಾ ವೈರಸ್ ಸುಲಭವಾಗಿ ತೊಲಗುವುದಿಲ್ಲ. ಎಲ್ಲರೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.