'ವಿರಾಟ್ ಕೊಹ್ಲಿಯಲ್ಲ...!': ಅನುಷ್ಕಾ ಶರ್ಮಾ ಮೊಬೈಲ್ ಸ್ಕ್ರೀನ್‌ ವಾಲ್‌ ಪೇಪರ್‌ ಫೋಟೋ ವೈರಲ್..!

Published : Jun 03, 2026, 01:41 PM IST
Anushka Sharma Virat Kohli

ಸಾರಾಂಶ

ಐಪಿಎಲ್ ಗೆಲುವಿನ ನಂತರ ವೃಂದಾವನಕ್ಕೆ ಭೇಟಿ ನೀಡಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಪ್ರೇಮಾನಂದ್ ಮಹಾರಾಜರ ಆಶೀರ್ವಾದ ಪಡೆದರು. ಈ ವೇಳೆ, ಅನುಷ್ಕಾ ಅವರ ಮೊಬೈಲ್ ವಾಲ್‌ಪೇಪರ್‌ನಲ್ಲಿ ಪತಿ ವಿರಾಟ್ ಬದಲಿಗೆ ಪ್ರೇಮಾನಂದ್ ಮಹಾರಾಜರ ಫೋಟೋ ಇರುವುದು ಬಹಿರಂಗಗೊಂಡು ವೈರಲ್ ಆಗಿದೆ.

Anushka Sharma Phone Wallpaper Viral: ಬಾಲಿವುಡ್ ನಟಿ ಹಾಗೂ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕುರಿತಾಗಿ ದಿನನಿತ್ಯ ಒಂದಲ್ಲಾ ಒಂದು ಸುದ್ದಿ ಚಾಲ್ತಿಯಲ್ಲಿರುವುದು ಸರ್ವೇ ಸಾಮಾನ್ಯ ಎನಿಸಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ವಿರಾಟ್ ಕೊಹ್ಲಿ ತಮ್ಮ ಪತ್ನಿ ಜತೆ ವೃಂದಾವನಕ್ಕೆ ಭೇಟಿ ಕೊಟ್ಟಿದ್ದರು.

ವಿರುಷ್ಕಾ ದಂಪತಿ ಸಮಯ ಸಿಕ್ಕಾಗಲೆಲ್ಲಾ ವೃಂದಾವನದ ಪ್ರೇಮಾನಂದ್ ಮಹಾರಾಜ್ ಗುರೂಜಿ ಅವರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆಯುತ್ತಾರೆ. ಅದರಂತೆ ಸತತ ಎರಡನೇ ಬಾರಿ ಆರ್‌ಸಿಬಿ ಐಪಿಎಲ್ ಟ್ರೋಫಿ ಜಯಿಸುತ್ತಿದ್ದಂತೆಯೇ ವಿರುಷ್ಕಾ ದಂಪತಿ ವೃಂದಾವನಕ್ಕೆ ಭೇಟಿ ನೀಡಿ ಪ್ರೇಮಾನಂದ್ ಮಹಾರಾಜರ ಆಶೀರ್ವಾದ ಪಡೆದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಗಿವೆ. ಇನ್ನು ಇದೆಲ್ಲದರ ನಡುವೆ ಅನುಷ್ಕಾ ಶರ್ಮಾ ಅವರ ಮೊಬೈಲ್ ಫೋನ್‌ನಲ್ಲಿರುವ ವಾಲ್‌ ಪೇಪರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅನುಷ್ಕಾ ಶರ್ಮಾ ಮೊಬೈಲ್ ವಾಲ್‌ ಪೇಪರ್ ವೈರಲ್:

ಪ್ರೇಮಾನಂದ್ ಮಹರಾಜ್ ಅವರ ಭೇಟಿಯ ಬಳಿಕ ವಿರುಷ್ಕಾ ಜೋಡಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು. ಈ ವೇಳೆ ಅನುಷ್ಕಾ ಶರ್ಮಾ ಅಭಿಮಾನಿಗಳು, ಅನುಷ್ಕಾ ಅವರ ಮೊಬೈಲ್ ಫೋನ್ ವಾಲ್‌ ಪೇಪರ್ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಪ್ರೀತಿಪಾತ್ರರಾದ ತಮ್ಮ ಪತಿ, ಪತ್ನಿಯರ ಫೋಟೋಗಳನ್ನು ಅಥವಾ ಮಕ್ಕಳ ಫೋಟೋಗಳನ್ನು ಮೊಬೈಲ್‌ ಫೋನ್‌ನ ವಾಲ್‌ಪೇಪರ್‌ನಲ್ಲಿ ಹಾಕಿಕೊಳ್ಳುತ್ತಾರೆ. ಅದರಂತೆ ಅನುಷ್ಕಾ ಶರ್ಮಾ ಕೂಡಾ ತಮ್ಮ ಮೊಬೈಲ್‌ನಲ್ಲಿ ವಿರಾಟ್ ಕೊಹ್ಲಿಯ ವಾಲ್‌ಪೇಪರ್ ಇರಬಹುದು ಎನ್ನುವ ಫ್ಯಾನ್ಸ್ ನಿರೀಕ್ಷೆ ಹುಸಿಯಾಗಿದೆ. ಅಂದಹಾಗೆ ಅನುಷ್ಕಾ ಶರ್ಮಾ ಅವರ ಮೊಬೈಲ್ ವಾಲ್‌ಪೇಪರ್‌ನಲ್ಲಿರುವುದು ವೃಂದಾವನದ ಪ್ರೇಮಾನಂದ್ ಮಹಾರಾಜ್ ಅವರದ್ದು.

 

ಪ್ರೇಮಾನಂದ್ ಮಹಾರಾಜ್ ಮೇಲೆ ಅಪಾರ ನಂಬಿಕೆಯಿಟ್ಟಿರುವ ವಿರುಷ್ಕಾ ದಂಪತಿ!

ಅಂದಹಾಗೆ ಈಗಾಗಲೇ ಭಾರತ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ, ಸದ್ಯ ಏಕದಿನ ಮಾದರಿಯಲ್ಲಿ ಮಾತ್ರ ಟೀಂ ಇಂಡಿಯಾ ಪರ ಮೈದಾನಕ್ಕಿಳಿಯುತ್ತಿದ್ದಾರೆ. ಹೀಗಾಗಿ ತಮ್ಮ ಖಾಸಗಿತನಕ್ಕೆ ಒತ್ತುಕೊಡುವ ಉದ್ದೇಶದಿಂದ ಏಕದಿನ ಕ್ರಿಕೆಟ್ ಹಾಗೂ ಐಪಿಎಲ್ ಇಲ್ಲದೇ ಇರುವ ಸಮಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಕುಟುಂಬದ ಜತೆ ಹೆಚ್ಚಿನ ಸಮಯವನ್ನು ಲಂಡನ್‌ನಲ್ಲಿ ಕಾಲ ಕಳೆಯುತ್ತಾರೆ. ಇನ್ನು ವಿರುಷ್ಕಾ ದಂಪತಿ ಭಾರತಕ್ಕೆ ಬಂದಾಗಲೆಲ್ಲಾ ಪ್ರೇಮಾನಂದ್ ಮಹಾರಾಜರೆದುರು ಮಂಡಿಯೂರಿ ಕುಳಿತು ಅವರ ಹಿತವಚನಗಳನ್ನು ಆಲಿಸುತ್ತಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸತತ 2ನೇ ಐಪಿಎಲ್‌ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್‌ಸಿಬಿಗೆ ಶಾಕ್‌, ನಿವೃತ್ತಿ ಪ್ರಕಟಿಸಿದ ಸ್ಟಾರ್‌
ರೋ-ಕೊ ಫ್ಯಾನ್ಸ್‌ಗೆ ಗುಡ್ ನ್ಯೂಸ್! ಬರೋಬ್ಬರಿ 7 ವರ್ಷಗಳ ನಂತರ 5 ಪಂದ್ಯಗಳ ಏಕದಿನ ಸರಣಿ ಆಡಲಿದೆ ಟೀಂ ಇಂಡಿಯಾ!