ಅಂತಿಮ ದಿನದಲ್ಲಿ ರೋಚಕ ಘಟ್ಟದತ್ತ ಲಾರ್ಡ್ಸ್ ಟೆಸ್ಟ್, ಭಾರತದ ದಾಳಿಗೆ ಕುಸಿದ ಇಂಗ್ಲೆಂಡ್!

By Suvarna NewsFirst Published Aug 16, 2021, 8:21 PM IST
Highlights
  • ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ
  • ಅಂತಿಮ ದಿನದಲ್ಲಿ ಬಿಗಿ ಹಿಡಿತ ಸಾಧಿಸಿದ ಟೀಂ ಇಂಡಿಯಾ
  • ದಿಢೀರ್ ಕುಸಿತ ತಂಡ ಇಂಗ್ಲೆಂಡ್‌ಗೆ ಸೋಲಿನ ಭೀತಿ
     

ಲಂಡನ್(ಆ.16):  ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಇದೀಗ ರೋಚಕ ಘಟ್ಟ ತಲುಪಿದೆ. ಅಂತಿಮ ದಿನದಾಟದಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ ಇಂಗ್ಲೆಂಡ್ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 2ನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ನೆರವಿನಿಂದ ಕೊಹ್ಲಿ ಸೈನ್ಯ ಇಂಗ್ಲೆಂಡ್ ತಂಡಕ್ಕೆ 272 ರನ್ ಟಾರ್ಗೆಟ್ ನೀಡಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಬೌಲರ್‌ಗಳು ಶಾಕ್ ನೀಡಿದ್ದಾರೆ.

Ind vs Eng ಶಮಿ ಆಕರ್ಷಕ ಅರ್ಧಶತಕ; ಭಾರತದ ಹಿಡಿತದಲ್ಲಿ ಲಾರ್ಡ್ಸ್‌ ಟೆಸ್ಟ್

ಸುಲಭ ಟಾರ್ಗೆಟ್ ನಿರೀಕ್ಷಿಸಿದ್ದ ಇಂಗ್ಲೆಂಡ್ ತಂಡದ ಲೆಕ್ಕಾಚಾರ ಉಲ್ಟಾ ಆಗಿತ್ತು. ಇದೇ ಒತ್ತಡದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರೋರಿ ಬರ್ನ್ಸ್ ಹಾಗೂ ಡೋಮಿನಿಕ್ ಸಿಬ್ಲೆ ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿದರು.

ಹಸೀಬ್ ಹಮೀದ್ ಕೇವಲ 9 ರನ್ ಸಿಡಿಸಿ ಔಟಾದರು. 44 ರನ್‌ಗಳಿಗೆ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋ ದಿಢೀರ್ ಕುಸಿತ ತಪ್ಪಿಸಿದ್ದಾರೆ. 

Tokyo 2020: ಒಲಿಂಪಿಕ್ಸ್‌ ಸಾಧಕರನ್ನು ಮನೆಗೆ ಕರೆಸಿ ಐಸ್‌ ಕ್ರೀಂ ಪೇ ಚರ್ಚಾ ಮಾಡಿದ ಪ್ರಧಾನಿ ಮೋದಿ..!

ಎರಡನೇ ಇನ್ನಿಂಗ್ಸ್‌ನಲ್ಲಿ ಇಶಾಂತ್ ಶರ್ಮಾ 2 ವಿಕೆಟ್ ಉರುಳಿಸಿದರೆ, ಜಸ್ಪ್ರೀತ್ ಬುಮ್ರಾ 1 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಕಬಳಿಸಿದರು. 

ಭಾರತ 2ನೇ ಇನ್ನಿಂಗ್ಸ್:
ನಾಲ್ಕನೇ ದಿನದಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಟೀಂ ಇಂಡಿಯಾ ಅಂತಿಮ ದಿನದಲ್ಲಿ ತಿರುಗೇಟು ನೀಡಿತು. ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ದಾಖಲೆಯ ಜೊತೆಯಾಟ ನೀಡಿದರು. ಮೊಹಮ್ಮದ್ ಶಮಿ ಅರ್ಧಶತಕ ಸಿಡಿಸಿ ಮಿಂಚಿದರು. ಇತ್ತ ಬುಮ್ರಾ ಕೂಡ ಉತ್ತಮ ಸಾಥ್ ನೀಡಿದರು. ಶಮಿ ಅಜೇಯ 56 ರನ್ ಸಿಡಿಸಿದರೆ, ಬುಮ್ರಾ ಅಜೇಯ 34 ರನ್ ಸಿಡಿಸಿ ಮಿಂಚಿದರು. ಈ ಮೂಲಕ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 298 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. 
 

click me!