
ಮುಂಬೈ(ಜ.24): ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಹೊಸ ಮುಖ್ಯಸ್ಥರ ನೇಮಿಸಲು ಬಿಸಿಸಿಐ ಕಸರತ್ತು ನಡೆಸುತ್ತಿದೆ. ಎಂ.ಎಸ್.ಕೆ ಪ್ರಸಾದ್ ಅಧಿಕಾರವದಿ ಮುಕ್ತಾಯಗೊಂಡಿದೆ. ಪ್ರಸಾದ್ ಮುಂದುವರಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಒಲವು ತೋರಿಲ್ಲ. ಹೀಗಾಗಿ ಬಿಸಿಸಿಐ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಅಹ್ವಾನಿಸಿತ್ತು.
ಇದನ್ನೂ ಓದಿ: ಕ್ರಿಕೆಟ್ ಸಲಹಾ ಸಮಿತಿಗೆ ಗಂಭೀರ್, ಮದನ್ ಲಾಲ್!.
ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಮುಂದಿನ ಆಯ್ಕೆ ಸಮಿತಿ ಮುಖ್ಯಸ್ಥ ಎಂದೇ ಹೇಳಲಾಗುತ್ತಿತ್ತು. ಆದರೆ ಇದೀಗ ಈ ರೇಸ್‌ನಲ್ಲಿ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಹೆಸರು ಮುಂಚೂಣಿಯಲ್ಲಿದೆ. ಬಹುತೇಕ ಅಜಿತ್ ಅಗರ್ಕರ್ ಮುಂದಿನ ಆಯ್ಕೆ ಸಮಿತಿ ಮುಖ್ಯಸ್ಥರಾಗುವು ಎಲ್ಲಾ ಸಾಧ್ಯತೆಗಳಿವೆ.
ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಬಂದಿರುವ ಅರ್ಜಿಗಳ ಪೈಕಿ ಅಜಿತ್ ಅಗರ್ಕರ್ ಹಾಗೂ ಶಿವರಾಮಕೃಷ್ಣನ್ ಹೊರತು ಪಡಿಸಿದರೆ, ಮಾಜಿ ವಿಕೆಟ್ ಕೀಪರ್ ನಯನ್ ಮೋಂಗಿಯಾಾ, ಚೇಚನ್ ಶರ್ಮಾ, ಹಾಗೂ ರಾಜೇಶ್ ಚೌಹ್ಹಾನ್ ಅರ್ಜಿ ಹಾಕಿದ್ದಾರೆ.
ಇದನ್ನೂ ಓದಿ: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಧೋನಿಗಿಲ್ಲ ಸ್ಥಾನ..!
2013ರಲ್ಲಿ ಅಜಿತ್ ಅಗರ್ಕರ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 1998ರಿಂದ 2007ರ ವರೆಗೆ ಟೀಂ ಇಂಡಿಯಾ ಪ್ರಮುಖ ವೇಗಿಯಾಗಿ ಗುರಿತಿಸಿಕೊಂಡ ಅಜಿತ್ ಅಗರ್ಕರ್ ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದು ಅಬ್ಬರಿಸಿದ್ದಾರೆ. ಏಕದಿನದಲ್ಲಿ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತದ 3ನೇ ಬೌಲರ್ ಅನ್ನೋ ಹೆಗ್ಗಳಿಕೆಗೆ ಅಗರ್ಕರ್ ಪಾತ್ರರಾಗಿದ್ದಾರೆ. ಅಗರ್ಕರ್ ಏಕದಿನದಲ್ಲಿ 288 ವಿಕೆಟ್ ಕಬಳಿಸಿದ್ದಾರೆ.
23 ಏಕದಿನದಲ್ಲಿ ಪಂದ್ಯದಲ್ಲಿ 50 ವಿಕೆಟ್ ಕಬಳಿಸಿ ಅತೀ ವೇಗವಾಗಿ 50 ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿರುವ ಅಗರ್ಕರ್, ಏಕದಿನದಲ್ಲಿ 21 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.