
ಸಿಡ್ನಿ(ಡಿ.07): ಭಾರತ ಟೆಸ್ಟ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ, ಡಿ.17ರಿಂದ ಆರಂಭಗೊಳ್ಳಲಿರುವ ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಉತ್ತಮ ತಯಾರಿ ನಡೆಸಿದ್ದಾರೆ.
ಭಾನುವಾರದಿಂದ ಇಲ್ಲಿ ಆರಂಭಗೊಂಡ ಆಸ್ಪ್ರೇಲಿಯಾ ‘ಎ’ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ಪರ ಆಡುತ್ತಿರುವ ಇವರಿಬ್ಬರು ಉತ್ತಮ ಪ್ರದರ್ಶನ ತೋರಿದರು. ತಂಡ ಮುನ್ನಡೆಸುತ್ತಿರುವ ರಹಾನೆ ಆಕರ್ಷಕ ಶತಕ (ಅಜೇಯ 108 ರನ್) ಬಾರಿಸಿದರೆ, ಪೂಜಾರ ಅರ್ಧಶತಕ (54) ಗಳಿಸಿದರು. ಮೊದಲ ದಿನದಂತ್ಯಕ್ಕೆ ಭಾರತ 8 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು.
ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯ ಗೆದ್ದು ಹಲವು ದಾಖಲೆ ಬರೆದ ಕೊಹ್ಲಿ ಸೈನ್ಯ!
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ‘ಎ’ ಆರಂಭಿಕರಿಬ್ಬರನ್ನೂ ಬೇಗನೆ ಕಳೆದುಕೊಂಡಿತು. ಪೃಥ್ವಿ ಶಾ (0), ಶುಭ್‌ಮನ್ ಗಿಲ್ (0) ಖಾತೆ ತೆರೆಯಲಿಲ್ಲ. ಹನುಮ ವಿಹಾರಿ (15), ವೃದ್ಧಿಮಾನ್ ಸಾಹ (0), ಅಶ್ವಿನ್ (05) ವೈಫಲ್ಯ ಅನುಭವಿಸಿದರು. ಉಮೇಶ್ ಯಾದವ್ (24) ನಾಯಕ ರಹಾನೆ ಜೊತೆ ಸೇರಿ ತಂಡ 200 ರನ್ ದಾಟಲು ನೆರವಾದರು.
ಸ್ಕೋರ್: ಭಾರತ ‘ಎ’ :237/8 (ರಹಾನೆ 108*, ಪೂಜಾರ 54, ಪ್ಯಾಟಿನ್ಸನ್ 3-58)
(ಮೊದಲ ದಿನದಂತ್ಯಕ್ಕೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.