ICC T20 World Cup ಟೂರ್ನಿಗೆ ಆಫ್ಘಾನಿಸ್ತಾನ ತಂಡ ಪ್ರಕಟ; ನಬಿಗೆ ನಾಯಕ ಪಟ್ಟ

By Naveen Kodase  |  First Published Sep 15, 2022, 4:38 PM IST

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಆಫ್ಘಾನಿಸ್ತಾನ ತಂಡ ಪ್ರಕಟ
* ಮೊಹಮ್ಮದ್ ನಬಿಗೆ ಆಫ್ಘಾನ್ ತಂಡದ ನಾಯಕ ಪಟ್ಟ
* ಅಕ್ಟೋಬರ್ 16ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿ


ಕಾಬೂಲ್(ಸೆ.15): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಆಫ್ಘಾನಿಸ್ತಾನ ತಂಡ ಪ್ರಕಟವಾಗಿದ್ದು, ಸ್ಟಾರ್ ಆಲ್ರೌಂಡರ್ ಮೊಹಮ್ಮದ್ ನಬಿ ನಾಯಕನಾಗಿ ಆಫ್ಘಾನಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. 

ಮೊಹಮ್ಮದ್ ನಬಿ, ಇತ್ತೀಚೆಗಷ್ಟೇ ಏಷ್ಯಾಕಪ್ ಟೂರ್ನಿಯಲ್ಲಿ ನಾಯಕನಾಗಿ ಆಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. ಆಫ್ಘಾನಿಸ್ತಾನ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಹಂತವನ್ನಷ್ಟೇ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಏಷ್ಯಾಕಪ್ ಟೂರ್ನಿಯ ವೇಳೆ ಆಫ್ಘಾನ್ ತಂಡದಲ್ಲಿ ಸ್ಥಾನ ಪಡೆದಿದ್ದ ಸಮಿವುಲ್ಲಾ ಶೆನ್ವಾರಿ, ಹಸ್ಮತುಲ್ಲಾ ಶಾಹಿದಿ, ಅಪ್ಸರ್ ಝಝೈ, ಕರೀಂ ಜನತ್ ಹಾಗೂ ನೂರ್ ಅಹಮ್ಮದ್ ಅವರನ್ನು ಟಿ20 ವಿಶ್ವಕಪ್ ಟೂರ್ನಿಗೆ ಆಫ್ಘಾನ್ ತಂಡದಿಂದ ಕೈಬಿಡಲಾಗಿದೆ. ಇನ್ನು ಇದೇ ವೇಳೆ ದರ್ವೀಸ್  ರಸೋಲಿ, ಕ್ವಾಯ್ಸ್‌ ಅಹಮ್ಮದ್ ಹಾಗೂ ಸಲೀಂ ಶಫಿ, ಆಫ್ಘಾನ್ ಪ್ರಕಟಿಸಿದ 15 ಆಟಗಾರರನ್ನೊಳಗೊಂಡ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Tap to resize

Latest Videos

undefined

2022ರ ಮಾರ್ಚ್‌ನಲ್ಲಿ ಕೊನೆಯ ಬಾರಿಗೆ ಆಫ್ಘಾನಿಸ್ತಾನ ತಂಡದ ಪರ ಟಿ20 ಪಂದ್ಯವನ್ನಾಡಿದ್ದ ಕ್ವಾಯ್ಸ್‌ ಅಹಮದ್, ಟಿ20 ವಿಶ್ವಕಪ್ ಟೂರ್ನಿಗೆ ಆಫ್ಘಾನ್ ತಂಡ ಕೂಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸಲೀಂ ಶಫಿ, ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡ ಕೂಡಿಕೊಳ್ಳಲು ಬುಲಾವ್ ಬಂದಿದೆ.

🚨 BREAKING NEWS 🚨

Afghanistan Cricket Board today announced its 15-member squad for the ICC 2022, which will be played from 16th October to 13th November in Australia.

More: https://t.co/1x7it7hx5w pic.twitter.com/ToTKvyCzM4

— Afghanistan Cricket Board (@ACBofficials)

ICC T20 World Cup ಟೂರ್ನಿಗೆ ವೆಸ್ಟ್‌ ಇಂಡೀಸ್ ತಂಡ ಪ್ರಕಟ, ರಸೆಲ್, ನರೈನ್‌ಗಿಲ್ಲ ಸ್ಥಾನ..!

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಏಷ್ಯಾಕಪ್ ಟೂರ್ನಿಯು ನಮ್ಮ ತಂಡವನ್ನು ಬಲಿಷ್ಠ ಕಟ್ಟಲು ಒಳ್ಳೆಯ ಅವಕಾಶವಾಗಿತ್ತು ಎಂದು ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಮುಖ್ಯಸ್ಥ ನೂರ್ ಮಲಿಕ್ ಝೈ ತಿಳಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಫ್ಘಾನಿಸ್ತಾನ ತಂಡ ಹೀಗಿದೆ ನೋಡಿ

ಮೊಹಮ್ಮದ್ ನಬಿ(ನಾಯಕ), ನಜಿಬುಲ್ಲಾ ಜದ್ರಾನ್(ಉಪನಾಯಕ), ರೆಹಮನ್ನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ಅಜ್ಮತುಲ್ಲಾ ಒಮರ್‌ಝೈ, ದರ್ವಿಸ್ ರಸೋಲಿ, ಫರಿದ್ ಅಹಮ್ಮದ್ ಮಲಿಕ್, ಫಜಲ್ ಹಕ್ ಫಾರೂಕಿ, ಹಜರುತ್ತುಲ್ಲಾ ಝಝೈ, , ಇಬ್ರಾಹಿಂ ಜದ್ರಾನ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ಕ್ವಾಯ್ಸ್‌ ಅಹಮದ್, ರಶೀದ್ ಖಾನ್, ಸಲೀಂ ಶಫಿ, ಉಸ್ಮಾನ್ ಘನಿ.

ಮೀಸಲು ಆಟಗಾರರು: ಅಪ್ಸರ್ ಝಝೈ, ಶೌರಫುದ್ದೀನ್ ಅಶ್ರಫ್, ರೆಹಮತ್ ಶಾ, ಗುಲ್ಬದ್ದೀನ್ ನೈಬ್.

click me!