
ನವದೆಹಲಿ(ಸೆ.15): ಭಾರತದ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ, ಗುರುವಾರವಾದ ಇಂದು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ, ಟ್ಯಾಕ್ಸಿ ಸರ್ವಿಸ್ ಆ್ಯಪ್ ಉಬರ್ ಇಂಡಿಯಾ ವಿರುದ್ದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಉಬರ್ ಸಂಸ್ಥೆಯದ್ದು, ಸರಿಯಾದ ಹೊಣೆಗಾರಿಕೆಯನ್ನು ಹೊಂದಿಲ್ಲ ಎಂದು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಉಬರ್ ಬಾಯ್ಕಾಟ್ ಅಭಿಯಾನ ಮಾಡೋಣವೇ ಎಂದು ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಚಿನ್ನದಂತಹ ಉತ್ತರ ನೀಡಿ ಗಮನ ಸೆಳೆದಿದ್ದಾರೆ.
ಉಬರ್ ಡ್ರೈವರ್‌ವೊಬ್ಬರು ತಾವು ಪ್ರೀ ಬುಕ್ಕಿಂಗ್ ಮಾಡಿದ ಬುಕ್ಕಿಂಗ್‌ಗೆ ಬರುವುದಿಲ್ಲ ಎಂದು ಆರ್ಡರ್ ನಿರಾಕರಿಸಿದ್ದಾರೆ. ಆದರೆ ನನಗೆ ಬೇರೆ ಆಯ್ಕೆಯೇ ಇರಲಿಲ್ಲ. ನಾನು ಉಬರ್ ಸಂಸ್ಥೆಗೆ ನೇರ ಮೆಸೇಜ್ ಮಾಡಿದರೂ ಸಹ ಸರಿಯಾದ ಸ್ಪಂದನೆ ದೊರೆಯಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ಹರ್ಷಾ ಬೋಗ್ಲೆ, ಮತ್ತೊಂದು ಕಾರು ಬಂದು ನಿಂತಿದೆ. ಆದರೆ ಈ ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಲು ಸಾಧ್ಯವಾಗುತ್ತಿಲ್ಲ. ಸೀಟ್ ಬೆಲ್ಟ್‌ನ ಪ್ಲಗ್ ಮುಚ್ಚಿದೆ. ಬಹುರಾಷ್ಟ್ರೀಯ ಕಂಪನಿಯೊಂದು ಈ ರೀತಿಯ ಮಾನದಂಡಗಳನ್ನು ಅನುಸರಿಸುತ್ತಿದೆಯೇ ಎಂದು ಯೋಚಿಸಬೇಕಿದೆ ಎಂದು ಬೋಗ್ಲೆ ಟ್ವೀಟ್ ಮಾಡಿ ತಮ್ಮ ಬೇಸರ ಹೊರಹಾಕಿದ್ದರು.
'ICC T20 World Cup ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ವಿದಾಯ ಘೋಷಿಸಬಹುದು..!'
ಹರ್ಷಾ ಬೋಗ್ಲೆ ಅವರ ಈ ನಿರಂತರ ಸರಣಿ ಟ್ವೀಟ್ ಗಮನಿಸಿದ ನೆಟ್ಟಿಗನೊಬ್ಬ, ಉಬರ್ ಬಾಯ್ಕಾಟ್ ಮಾಡೋಣವೇ ಸರ್ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಹರ್ಷಾ ಬೋಗ್ಲೆ, ಬೇಡ, ಹಾಗೆಲ್ಲ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.
ಇದೆಲ್ಲ ಆದ ಬಳಿಕ ಹರ್ಷ ಬೋಗ್ಲೆ ಮತ್ತೊಮ್ಮೆ ಟ್ವೀಟ್ ಮಾಡಿ, ಇನ್ನೂ ಉಬರ್ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಇದಷ್ಟೇ ಅಲ್ಲ ಡೈರೆಕ್ಟ್ ಮೆಸೇಜ್‌ಗೂ ಯಾವುದೇ ರೆಸ್ಪಾನ್ಸ್ ಬಂದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.