
ಢಾಕಾ[ನ.21]: ಭಾರತ ಅಂಡರ್-23 ಕ್ರಿಕೆಟ್ ತಂಡ ಇಲ್ಲಿ ನಡೆಯುತ್ತಿರುವ ಉದಯೋನ್ಮುಖ ತಂಡಗಳ ಟೂರ್ನಿಯ ಸೆಮಿಫೈನಲ್ನಲ್ಲಿ ಬದ್ಧವೈರಿ ಪಾಕಿಸ್ತಾನದ ವಿರುದ್ಧ 3 ರನ್‌ಗಳ ವೀರೋಚಿತ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.
ಟ್ವೀಟ್ ಮಾಡಿ ಧೋನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 50 ಓವರಲ್ಲಿ 7 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿತು. ಕಠಿಣ ಗುರಿ ಬೆನ್ನತ್ತಿದ ಭಾರತ ಸನ್ವಿರ್ ಸಿಂಗ್ (76) ಹೋರಾಟದ ಹೊರತಾಗಿಯೂ ಗೆಲುವು ಸಾಧಿಸಲು ಆಗಲಿಲ್ಲ. ಕೊನೆ ಓವರಲ್ಲಿ ಭಾರತದ ಗೆಲುವಿಗೆ 8 ರನ್‌ಗಳು ಬೇಕಿದ್ದವು. ಆದರೆ ತಂಡ ಗಳಿಸಿದ್ದು ಕೇವಲ 4 ರನ್ ಮಾತ್ರ. ತಂಡವನ್ನು ಮುನ್ನಡೆಸಿದ ಕರ್ನಾಟಕದ ಬಿ.ಆರ್.ಶರತ್ (47) ಹಾಗೂ ಅರ್ಮಾನ್ ಜಾಫರ್ (46) ಉಪಯುಕ್ತ ರನ್ ಕೊಡುಗೆ ನೀಡಿದರೂ, ಭಾರತ ಗೆಲುವಿನ ದಡ ಮುಟ್ಟಲಿಲ್ಲ. 50 ಓವರಲ್ಲಿ 8 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಲಷ್ಟೇ ಶಕ್ತವಾಯಿತು.
KPL ಕ್ರಿಕೆಟ್ ಫಿಕ್ಸಿಂಗ್; ಪುತ್ರನ ಮೇಲಿನ ಆರೋಪಕ್ಕೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯೆ!
ಪಾಕಿಸ್ತಾನ ಆರಂಭಿಕ ಒಮೈರ್ ಯೂಸುಫ್ (66)ರ ಅರ್ಧಶತಕ, ಸೈಫ್ ಬದರ್(47)ರ ಆಕರ್ಷಕ ಆಟದ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತು. ಗುರುವಾರ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ನ.23ರಂದು ಫೈನಲ್ ಪಂದ್ಯ ನಡೆಯಲಿದೆ. ಕಳೆದ ಆವೃತ್ತಿಯಲ್ಲಿ ಭಾರತ ತಂಡ ರನ್ನರ್-ಅಪ್ ಆಗಿತ್ತು.
ಸ್ಕೋರ್:
ಪಾಕಿಸ್ತಾನ 267/7 (ಯೂಸುಫ್ 66, ಸೈಫ್ 47, ಶಿವಂ ಮಾವಿ 2-53)
ಭಾರತ 264/8 (ಸನ್ವಿರ್ 76, ಶರತ್ 47, ಸೈಫ್ 2-57)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.