Zero. Zero. Zero.. ಬದಲಾಗದ ಅಭಿಷೇಕನ ಅದೃಷ್ಟ!

Published : Feb 18, 2026, 07:52 PM IST
abhishek sharma

ಸಾರಾಂಶ

ವಿಶ್ವದ ನಂಬರ್ 1 ಟಿ20 ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮ, ಹಾಲಿ ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ತೀವ್ರ ಕಳಪೆ ಫಾರ್ಮ್ ಪ್ರದರ್ಶಿಸಿದ್ದಾರೆ. ಈ ಮೂಲಕ ಅವರು ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಡಕ್‌ಗಳಂತಹ ಹಲವಾರು ಅನಪೇಕ್ಷಿತ ದಾಖಲೆಗಳನ್ನು ಸರಿಗಟ್ಟಿದ್ದಾರೆ.

ಅಹಮದಾಬಾದ್‌ (ಫೆ.18): ವಿಶ್ವದ ನಂಬರ್‌.1 ಟಿ20 ಬ್ಯಾಟ್ಸ್‌ಮನ್‌ ಎನಿಸಿಕೊಂಡಿರುವ ಅಭಿಷೇಕ್‌ ಶರ್ಮ ಹಾಲಿ ಟಿ20 ವಿಶ್ವಕಪ್‌ನಲ್ಲಿ ಅದೆಂಥ ಕೆಟ್ಟ ಫಾರ್ಮ್‌ನಲ್ಲಿದ್ದಾರೆ ಎಂದರೆ, ಸತತ ಮೂರನೇ ಬಾರಿಗೆ ಅವರು ಡಕ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ಲೀಗ್‌ ಹಂತದಲ್ಲಿ ಆದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಆಡಿರುವ ಅಭಿಷೇಕ್‌ ಶರ್ಮ ಈ ಮೂರೂ ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದಾರೆ. ಬುಧವಾರ ನಡೆದ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ನೆದರ್ಲೆಂಡ್‌ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಅಭಿಷೇಕ್‌ ಶರ್ಮ ಮೂಲಕ ನಿರಾಸೆ ಎದುರಿಸಿತು.

ಟಾಪ್‌ ಆರ್ಡರ್‌ ಬ್ಯಾಟಿಂಗ್‌ನಲ್ಲಿ ಮೂವರು ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಭಾರತ ಹೊಂದಿದ್ದರಿಂದ ನೆದರ್ಲೆಂಡ್‌ ತಂಡ ನಿರೀಕ್ಷೆಯಂತೇ ಆರ್ಯನ್‌ ದತ್‌ ಮೂಲಕ ಬೌಲಿಂಗ್‌ ಆರಂಭಿಸಿತು. ಆದರೆ, ಅಭಿಷೇಕ್‌ಗೆ ಇವರ ವಿರುದ್ಧ ರನ್‌ ಗಳಿಸುವ ಅವಕಾಶವೇ ಸಿಗಲಿಲ್ಲ. ಎರಡು ಎಸೆತ ವೇಸ್ಟ್‌ ಮಾಡಿದ ಅಭಿಷೇಕ್‌, ಮೂರನೇ ಎಸೆತವನ್ನು ಮಿಡ್‌ಆನ್‌ನಲ್ಲಿ ಆಡುವ ಯತ್ನ ಮಾಡಿದರು. ಆದರೆ, ಚೆಂಡು ಮಿಸ್‌ ಆಗಿದ್ದರಿಂದ ಬೌಲ್ಡ್‌ ಆಗಿ ವಿಕೆಟ್‌ ಒಪ್ಪಿಸಿದರು.

ಇದು ಒಂದೇ ಟಿ20 ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ವೊಬ್ಬರ ಜಂಟಿ ಗರಿಷ್ಠ ಶೂನ್ಯದ ಕುಖ್ಯಾತಿ ಎನಿಸಿದೆ. ಅದಲ್ಲದೆ, ಟಿ20ಯಲ್ಲಿ ಭಾರತದ ಕ್ರಿಕೆಟಿಗನೊಬ್ಬ ವರ್ಷದಲ್ಲಿ ಪಡೆದ ಜಂಟಿ ಗರಿಷ್ಠ ಶೂನ್ಯ ಎನಿಸಿದೆ. ಈ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್‌ ಅವರೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಸಂಜು ಸ್ಯಾಮ್ಸನ್‌ 2024ರಲ್ಲಿ ಈ ಕುಖ್ಯಾತಿ ಪಡೆದಿದ್ದರು.

ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಬಾರಿ ಸೊನ್ನೆಗೆ ಔಟಾದ ಕುಖ್ಯಾತಿ ಪಡೆದವರಿಲ್ಲಿ ಭಾರತ ಆಶಿಶ್‌ ನೆಹ್ರಾ, ವೆಸ್ಟ್‌ ಇಂಡೀಸ್‌ನ ಆಂಡ್ರೆ ಫ್ಲೆಚರ್‌, ಉಗಾಂಡದ ರೋಜರ್‌ ಮುಕಾಸಾ ಅವರೊಂದಿಗೆ ಅಭಿಷೇಕ್‌ ಶರ್ಮ ಸ್ಥಾನ ಪಡೆದಿದ್ದಾರೆ.

ಗಾವಸ್ಕರ್‌ ಸಲಹೆ ಕೂಡ ಕೇಳದ ಅಭಿಷೇಕ್‌

ಇನ್ನು ಅಭಿಷೇಕ್‌ ಶರ್ಮ ಸುನೀಲ್‌ ಗಾವಸ್ಕರ್‌ ಅವರ ಸಲಹೆಯನ್ನೂ ಕೇಳಿಲ್ಲ ಅನ್ನೋದು ಇದರಲ್ಲಿ ಅರ್ಥವಾಗಿದೆ. ಸತತ 2ನೇ ಬಾರಿ ಶೂನ್ಯಕ್ಕೆ ಔಟಾದ ಬಳಿಕ ಸುನೀಲ್‌ ಗಾವಸ್ಕರ್‌, ಅಭಿಷೇಕ್‌ ಶರ್ಮ ಮೊದಲು ಕನಿಷ್ಠ 1 ರನ್‌ ಬಾರಿಸಲು ಪ್ರಯತ್ನಿಸಬೇಕು ಎಂದಿದ್ದರು. ಆದರೆ, ಮೂರೂ ಬಾರಿಯೂ ಅವರು ಬೌಂಡರಿ ಬಾರಿಸುವ ಯತ್ನದಲ್ಲಿಯೇ ವಿಫಲವಾಗಿ ಶೂನ್ಯಕ್ಕೆ ಔಟಾಗಿದ್ದಾರೆ.

ಅಂತಾರಾಷ್ಟ್ರೀಯ ಟಿ20ಯ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಗರಿಷ್ಠ ಬಾರಿ ಶೂನ್ಯಕ್ಕೆ ಔಟಾದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಭಿಷೇಕ್‌ ಶರ್ಮ ಈಗ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಸೈಮ್‌ ಅಯೂಬ್‌ 2025ರಲ್ಲಿ 6 ಬಾರಿ ಶೂನ್ಯಕ್ಕೆ ಔಟಾಗಿದ್ದು ವಿಶ್ವದಾಖಲೆ ಎನಿಸಿದೆ. ಉಳಿದಂತೆ ಚಲೋಮ್‌ವಾಂಗ್ ಚಾಟ್‌ಫೈಸನ್ (ಥೈಲ್ಯಾಂಡ್, 2024), ಕುಶಾಲ್ ಭುರ್ಟೆಲ್ (ನೇಪಾಳ, 2024), ಧರ್ಮ ಕೇಸುಮಾ (ಇಂಡೋನೇಷಿಯಾ, 2025) ಹಾಗೂ ಪರ್ವೇಜ್ ಹೊಸೈನ್ ಎಮನ್ (ಬಾಂಗ್ಲಾದೇಶ, 2025) ಕೂಡ ತಲಾ 5 ಬಾರಿ ಒಂದೇ ವರ್ಷದಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಅಭಿಷೇಕ್‌ ಶರ್ಮ ಹಾಲಿ ವರ್ಷದಲ್ಲಿ ಒಟ್ಟು 5 ಬಾರಿ ಟಿ20ಯಲ್ಲಿ ಸೊನ್ನೆ ಸುತ್ತಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ಯಾರು? ಅವರ ಬ್ಯುಸಿನೆಸ್ ಏನು ಗೊತ್ತಾ?
ಟಿ20 ವಿಶ್ವಕಪ್: ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಮ್ಯಾಚ್! ಪಂದ್ಯ ರದ್ದಾದ್ರೆ ಭಾರತ ಜತೆ ಸೂಪರ್-8 ಹಂತಕ್ಕೇರೋದು ಯಾರು?