ಸೋತರೂ ಶೋಕಿಗೇನೂ ಕಮ್ಮಿಯಿಲ್ಲ: ಹಾಂಗ್‌ಕಾಂಗ್ ಸಿಕ್ಸಸ್ ಟ್ರೋಫಿ ಜತೆ ಫೋಸ್ ಕೊಟ್ಟ ಪಾಕ್ ಕ್ರಿಕೆಟಿಗ ಅಫ್ರಿದಿ ಫುಲ್ ಟ್ರೋಲ್

Published : Nov 02, 2026, 04:29 PM IST
Abbas Afridi

ಸಾರಾಂಶ

ಹಾಂಗ್‌ಕಾಂಗ್‌ ಸಿಕ್ಸಸ್‌ ಟೂರ್ನಿಯಲ್ಲಿ ಪಾಕಿಸ್ತಾನ 5ನೇ ಸ್ಥಾನ ಪಡೆದರೂ, ಆಟಗಾರ ಅಬ್ಬಾಸ್‌ ಅಫ್ರಿದಿ ಟ್ರೋಫಿಯೊಂದಿಗೆ ಮಲಗಿರುವ ಫೋಟೋ ಹಂಚಿಕೊಂಡು ಟ್ರೋಲ್‌ಗೆ ಗುರಿಯಾಗಿದ್ದಾರೆ. ನೆಟ್ಟಿಗರು ಈ ಫೋಟೋವನ್ನು ಸೂರ್ಯಕುಮಾರ್‌ ಯಾದವ್‌ ಅವರ ಟಿ20 ವಿಶ್ವಕಪ್‌ ಸಂಭ್ರಮಕ್ಕೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.

ಹಾಂಗ್‌ಕಾಂಗ್‌(ನ.02): ಪಾಕಿಸ್ತಾನದ ಕ್ರಿಕೆಟಿಗ ಅಬ್ಬಾಸ್‌ ಅಫ್ರಿದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗೆ ಗುರಿಯಾಗಿದ್ದಾರೆ. ಹಾಂಗ್‌ಕಾಂಗ್‌ ಸಿಕ್ಸಸ್‌ 2026 ಟೂರ್ನಿಯಲ್ಲಿ ತಾವು ಗೆದ್ದ ಟ್ರೋಫಿಗಳೊಂದಿಗೆ ಮಲಗಿರುವ ಫೋಟೋವೊಂದನ್ನು ಹಂಚಿಕೊಂಡ ಬಳಿಕ ಕ್ರಿಕೆಟ್‌ ಅಭಿಮಾನಿಗಳು ಅವರನ್ನು ಕಾಲೆಳೆಯುತ್ತಿದ್ದಾರೆ. ಈ ಫೋಟೋ ಭಾರತ ತಂಡದ ಟಿ20 ವಿಶ್ವಕಪ್‌ ಗೆಲುವಿನ ಸಂಭ್ರಮವನ್ನು ನೆನಪಿಸಿದ್ದು, ವಿಶೇಷವಾಗಿ ನಾಯಕ ಸೂರ್ಯಕುಮಾರ್‌ ಯಾದವ್‌ ಟ್ರೋಫಿಯೊಂದಿಗೆ ಹಂಚಿಕೊಂಡಿದ್ದ ಫೋಟೋಗೆ ಹೋಲಿಕೆ ಮಾಡಲಾಗುತ್ತಿದೆ.

ಅಬ್ಬಾಸ್‌ ಅಫ್ರಿದಿ ಹಂಚಿಕೊಂಡ ಸಂಭ್ರಮದ ಫೋಟೋಗೆ ಕ್ರಿಕೆಟ್‌ ಅಭಿಮಾನಿಗಳಿಂದ ವ್ಯಂಗ್ಯಭರಿತ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೂ, ಇಷ್ಟೊಂದು ಸಂಭ್ರಮದ ಅಗತ್ಯವೇನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ.

ಅಬ್ಬಾಸ್ ಅಫ್ರಿದಿ ಫುಲ್ ಟ್ರೋಲ್

2026ರ ಟಿ20 ವಿಶ್ವಕಪ್‌ ಗೆದ್ದ ಬಳಿಕ ಭಾರತ ತಂಡದ ಆಟಗಾರರು ಸಂಭ್ರಮಿಸಿದ್ದ ರೀತಿಯನ್ನು ಈ ಫೋಟೋ ನೆನಪಿಸಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಟ್ರೋಫಿಯೊಂದಿಗೆ ಸೂರ್ಯಕುಮಾರ್‌ ಯಾದವ್‌ ಹಂಚಿಕೊಂಡಿದ್ದ ಫೋಟೋವನ್ನು ಉಲ್ಲೇಖಿಸಿ, ಅಬ್ಬಾಸ್‌ ಅಫ್ರಿದಿ ಅವರ ಸಂಭ್ರಮವನ್ನು ನೆಟ್ಟಿಗರು ಹೋಲಿಕೆ ಮಾಡಿದ್ದಾರೆ.

ಈ ಪೈಕಿ, “ವಿಕ್ಟರಿ ಪರೇಡ್‌ ಯಾವಾಗ?” ಎಂಬ ವ್ಯಂಗ್ಯದ ಕಾಮೆಂಟ್‌ ಹೆಚ್ಚು ಗಮನ ಸೆಳೆದಿದೆ. ಟೂರ್ನಿಯ ಮುಖ್ಯ ಟ್ರೋಫಿ ಗೆಲ್ಲದಿದ್ದರೂ ಅಬ್ಬಾಸ್‌ ಅಫ್ರಿದಿ ಸಂಭ್ರಮಿಸುತ್ತಿರುವುದನ್ನು ಗುರಿಯಾಗಿಸಿಕೊಂಡು ಹಲವರು ತಮಾಷೆ ಮಾಡಿದ್ದಾರೆ.

ಹಾಲಿ ಚಾಂಪಿಯನ್‌ ಆಗಿದ್ದ ಪಾಕ್‌ಗೆ ಐದನೇ ಸ್ಥಾನ!

ಪಾಕಿಸ್ತಾನ ತಂಡ ಹಾಂಗ್‌ಕಾಂಗ್‌ ಸಿಕ್ಸಸ್‌ 2026 ಟೂರ್ನಿಗೆ ಹಾಲಿ ಚಾಂಪಿಯನ್‌ ಆಗಿ ಕಣಕ್ಕಿಳಿದಿತ್ತು. ಆದರೆ ಈ ಬಾರಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ ಐದನೇ ಸ್ಥಾನ ಪಡೆದ ಪಾಕಿಸ್ತಾನ ತಂಡ ಅಗ್ರ ನಾಲ್ಕರೊಳಗೂ ಸ್ಥಾನ ಪಡೆಯಲು ವಿಫಲವಾಯಿತು. ಆದರೆ, ತಂಡದ ಒಟ್ಟಾರೆ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರದಿದ್ದರೂ ಅಬ್ಬಾಸ್‌ ಅಫ್ರಿದಿ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ, ಅವರ ಸಂಭ್ರಮದ ಫೋಟೋ ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ.

ಚೊಚ್ಚಲ ಬಾರಿಗೆ ಹಾಂಗ್‌ಕಾಂಗ್ ಸಿಕ್ಸರ್ ಟ್ರೋಫಿ ಗೆದ್ದ ಆಫ್ಘಾನಿಸ್ತಾನ:

ಇನ್ನು 2026ರ ಹಾಂಗ್‌ಕಾಂಗ್ ಸಿಕ್ಸರ್ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿತ್ತು. 116 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಫರ್ಮಾನುಲ್ಲಾ ಸಫಿ ಮತ್ತು ಇಮ್ರಾನ್‌ ಮಿರ್‌ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಇನ್ನೂ 5 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಈ ಮೂಲಕ ಗುಲ್ಬದ್ದೀನ್ ನೈಬ್ ನೇತೃತ್ವದ ಆಫ್ಘಾನಿಸ್ತಾನ ತಂಡವು ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿ ಚೊಚ್ಚಲ ಬಾರಿಗೆ ಹಾಂಗ್‌ಕಾಂಗ್ ಸಿಕ್ಸಸ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಿತ್ತ ಟೀಂ ಇಂಡಿಯಾ ಸ್ಟಾರ್; ದೇಸಿಯ ಟೂರ್ನಿಯಲ್ಲಿ ಮಿಂಚು, ಬೆರಗಾದ ಕ್ರಿಕೆಟ್ ಜಗತ್ತು
ACC Rising Stars ಏಷ್ಯಾ ಕಪ್‌ಗೆ ಭಾರತ A ತಂಡ ಪ್ರಕಟ, ಆರ್‍‌ಸಿಬಿ ಹೀರೋ ಪಾಟೀದಾರ್‍‌ಗೆ ವಿಶೇಷ ಜವಾಬ್ದಾರಿ