ಕ್ರಿಕೆಟ್‌ ಮೈದಾನದಲ್ಲಿ ದುರಂತ: ಬ್ಯಾಟಿಂಗ್ ಮಾಡಿ ಡ್ರೆಸ್ಸಿಂಗ್‌ ರೂಮ್‌ಗೆ ಬಂದಾಗ ಎದೆನೋವು,ಯುವ ಕ್ರಿಕಟಿಗ ಸಾವು

Published : Nov 25, 2026, 09:25 AM IST
Cricket Death

ಸಾರಾಂಶ

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಕ್ರಿಕೆಟ್ ಪಂದ್ಯದ ವೇಳೆ 30 ವರ್ಷದ ಮಿಲಿಂದ್ ಪಡ್ಯಾರ್ ಎಂಬ ಯುವಕ ಬ್ಯಾಟಿಂಗ್ ಮುಗಿಸಿ ಮರಳಿದಾಗ ತೀವ್ರ ಎದೆನೋವಿನಿಂದ ಮೃತಪಟ್ಟಿದ್ದಾರೆ. ವಾಲಿವ್ ಪೊಲೀಸ್ ಠಾಣೆಯಲ್ಲಿ ಈ ದುರಂತದ ಬಗ್ಗೆ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

ಮುಂಬೈ (ನ.25): ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಪೂರ್ವದ ಮಧುಬನ್ ಪ್ರದೇಶದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಬ್ಯಾಟಿಂಗ್ ಮಾಡಿ ಡ್ರೆಸ್ಸಿಂಗ್ ರೂಮ್‌ಗೆ ಮರಳಿದ 30 ವರ್ಷದ ಯುವ ಕ್ರಿಕೆಟಿಗ ತೀವ್ರ ಎದೆನೋವಿನಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಮಿಲಿಂದ್ ಮನೋಹರ್ ಪಡ್ಯಾರ್ (30) ಎಂದು ಗುರುತಿಸಲಾಗಿದೆ!

ಮಿಲಿಂದ್ ಪಡ್ಯಾರ್ ಅವರು ಮುಂಬೈನ ಮಲಾಡ್‌ನಲ್ಲಿ (Malad) ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಅವರು ಮತ್ತು ಅವರ ಸಹೋದರ ಇಬ್ಬರೂ ನಲಸೋಪಾರ ಪೂರ್ವದ ಸಂಕೇಶ್ವರ ನಗರದ (Sankeshwar Nagar) ಕ್ರಿಕೆಟ್ ತಂಡದ ಪರವಾಗಿ ಆಡುತ್ತಿದ್ದರು. ನವೆಂಬರ್ 22ರಂದು ಸಂಜೆ ಸುಮಾರು 6 ಗಂಟೆಗೆ, ಈ ಇಬ್ಬರೂ ಸಹೋದರರು ವಸಾಯಿ ಪೂರ್ವದ ಬಾಕ್ಸ್ ಸ್ಟ್ರೀಟ್ (Box Street) ಬಳಿಯ ಖಾಸಗಿ ಮೈದಾನದಲ್ಲಿ ಕ್ರಿಕೆಟ್ ಆಡಲು ಬಂದಿದ್ದರು.

ಬ್ಯಾಟಿಂಗ್ ಮಾಡಿ ಡ್ರೆಸ್ಸಿಂಗ್ ರೂಮ್‌ಗೆ ಮರಳುತ್ತಿದ್ದಂತೆಯೇ ಕಾಣಿಸಿಕೊಂಡ ತೀವ್ರ ಎದೆನೋವು

ಪಂದ್ಯದ ವೇಳೆ ಮಿಲಿಂದ್ ಪಡ್ಯಾರ್ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಇಳಿದಿದ್ದರು. ಮೊದಲ ಓವರ್‌ನಲ್ಲಿ ಕೇವಲ ಮೂರು ಎಸೆತಗಳನ್ನು ಎದುರಿಸಿದ ಮಿಲಿಂದ್, ಕ್ಯಾಚ್ ಔಟ್ ಆಗಿ ಡ್ರೆಸ್ಸಿಂಗ್ ರೂಮ್‌ಗೆ ಮರಳಿದರು. ಡ್ರೆಸ್ಸಿಂಗ್ ರೂಮ್‌ಗೆ ಮರಳಿದ ಕೆಲವೇ ಕ್ಷಣಗಳಲ್ಲಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ತಮ್ಮ ಸಹ ಆಟಗಾರ ಮತ್ತು ಸಹೋದರ ಮಕರಂದ್ ಪಡ್ಯಾರ್ (Makarand Padyar) ಅವರಿಗೆ ವಿಷಯ ತಿಳಿಸಿದ್ದಾರೆ. ಯಾವುದೇ ವಿಳಂಬ ಮಾಡದೆ, ಸಹೋದರ ಮತ್ತು ಸಹ ಆಟಗಾರರು ಮಿಲಿಂದ್ ಅವರನ್ನು ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ ನಲಸೋಪಾರ ಪೂರ್ವದ ಓಝೋನ್ ಆಸ್ಪತ್ರೆಗೆ (Ozone Hospital) ಕರೆದೊಯ್ದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ (Dead on arrival) ಎಂದು ವೈದ್ಯರು ಘೋಷಿಸಿದರು.

ಘಟನೆಯ ಮಾಹಿತಿ ತಿಳಿದ ವಾಲಿವ್ ಪೊಲೀಸರು (Waliv police) ಮೃತದೇಹವನ್ನು ವಶಕ್ಕೆ ಪಡೆದು, ಮಹಜರು (Inquest) ನಡೆಸಿ ಮರಣೋತ್ತರ ಪರೀಕ್ಷೆಗಾಗಿ (Post-mortem examination) ರವಾನಿಸಿದ್ದಾರೆ. ಈ ದುರಂತಕ್ಕೆ ಸಂಬಂಧಿಸಿದಂತೆ ವಾಲಿವ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು (Accidental death) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮಿಲಿಂದ್ ಮತ್ತು ಅವರ ಸಹೋದರ ಈ ಹಿಂದೆ ನಲಸೋಪಾರದಲ್ಲಿ ವಾಸಿಸುತ್ತಿದ್ದರು; ಅದೇ ಕಾರಣಕ್ಕಾಗಿ ಅವರು ಅಲ್ಲಿನ ಸ್ಥಳೀಯ ತಂಡದ ಪರವಾಗಿ ಕ್ರಿಕೆಟ್ ಆಡುತ್ತಿದ್ದರು ಎಂದು ವಾಲಿವ್ ಪೊಲೀಸ್ ಠಾಣೆ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ನಿತಿನ್ ನಲವಡೆ ತಿಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆತ 15 ವರ್ಷದ ಕ್ರಿಕೆಟಿಗನೇ ಅಲ್ಲ, ವೈಭವ್‌ ಸೂರ್ಯವಂಶಿ ವಯಸ್ಸಿಗೆ ಅನುಮಾನ ವ್ಯಕ್ತಪಡಿಸಿದ ಪಾಕ್‌ ಮಾಜಿ ವೇಗಿ
IPL ಹರಾಜಿಗೆ ಸೆಹ್ವಾಗ್‌ ಮಗ ಎಂಟ್ರಿ, ಮೂಲ ಬೆಲೆ ಎಷ್ಟು? ದ್ರಾವಿಡ್‌ ಪುತ್ರರ ನಡೆ ಕುತೂಹಲ