IPL Retention: ಪಂಜಾಬ್‌ ಕಿಂಗ್ಸ್‌ಗೆ ಧವನ್‌ ಕ್ಯಾಪ್ಟನ್‌, ಮಯಾಂಕ್‌ ರಿಲೀಸ್‌!

By Santosh Naik  |  First Published Nov 15, 2022, 7:44 PM IST

2023ರ ಐಪಿಎಲ್‌ ಹರಾಜಿಗೆ ಪಂಜಾಬ್‌ ಕಿಂಗ್ಸ್‌ ತಂಡ ತನ್ನ ನಾಯಕ ಮಯಾಂಕ್‌ ಅಗರ್ವಾಲ್‌ ಅವರನ್ನು ರಿಲೀಸ್‌ ಮಾಡಿದೆ. ಅದಕ್ಕೂ ಮುನ್ನ ಶಿಖರ್‌ ಧವನ್‌ ಅವರನ್ನು ಮುಂದಿನ ಆವೃತ್ತಿಯ ನಾಯಕರನ್ನಾಗಿ ಘೋಷಣೆ ಮಾಡಿದೆ.


ಮೊಹಾಲಿ (ನ.15): 2023ರ ಐಪಿಎಲ್‌ಗೆ ರಿಲೀಸ್‌ ಆದ ಫ್ರಾಂಚೈಸಿಯ 2ನೇ ನಾಯಕ ಮಯಾಂಕ್‌ ಅಗರ್ವಾಲ್‌. ಸನ್‌ರೈಸರ್ಸ್‌ ಹೈದರಾದ್‌ ತಂಡ ತನ್ನ ನಾಯಕ ಕೇನ್‌ ವಿಲಿಯಮ್ಸನ್‌ ಅವರನ್ನು ಹರಾಜಿಗೆ ಬಿಡುಗಡೆ ಮಾಡಿದ ಬೆನ್ನಲ್ಲಿಯೇ ಪಂಜಾಬ್‌ ಕಿಂಗ್ಸ್‌ ಕೂಡ ಇದೇ ನಿರ್ಧಾರ ಮಾಡಿತು. ಕರ್ನಾಟಕದ ಮಯಾಂಕ್‌ ಅಗರ್ವಾಲ್‌ ಅವರನ್ನು ತಂಡಕ್ಕೆ ಉಳಿಸುಕೊಳ್ಳುವ ನಿಟ್ಟಿನಲ್ಲಿ ತಂಡದಲ್ಲಿ ಸಾಕಷ್ಟು ದೊಡ್ಡ ಚರ್ಚೆಗಳಾಗಿದ್ದವು. ಕೊನೆಗೆ ಅವರನ್ನು ಬಿಡುಗಡೆ ಮಾಡಲು ನಿರ್ಧಾರ ಮಾಡಿತು. ಅದಕ್ಕೂ ಮುನ್ನ ರಿಟೆನ್ಷನ್‌ ಡೆಡ್‌ಲೈನ್‌ ಕೊನೆಯಾಗುವ ವೇಳೆಗೆ 2023ರ ಐಪಿಎಲ್‌ಗೆ ಶಿಖರ್‌ ಧವನ್‌ ತನ್ನ ನಾಯಕ ಎಂದು ಪಂಜಾಬ್‌ ಕಿಂಗ್ಸ್‌ ಪ್ರಕಟ ಮಾಡಿತು. ಇದು ಪಂಜಾಬ್‌ ಫ್ಯಾನ್ಸ್‌ಗಳ ಪಾಲಿಗೆ ನಿರೀಕ್ಷಿತವೂ ಆಗಿತ್ತು. ಗಾಯಾಳುವಾಗಿರುವ ಜಾನಿ ಬೇರ್‌ಸ್ಟೋ ಹಾಗೂ ಕೆಳ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್‌ಮನ್‌ ಶಾರುಖ್‌ ಖಾನ್‌ ಅವರನ್ನು ರಿಟೇನ್‌ ಮಾಡಿಕೊಳ್ಳಲಾಗಿದೆ.

ವೆಸ್ಟ್‌ ಇಂಡೀಸ್‌ನ ಆಲ್ರೌಂಡರ್‌ ಒಡೆಯನ್‌ ಸ್ಮಿತ್‌ ಅವರನ್ನು ತಂಡ ರಿಲೀಸ್‌ ಮಾಡಿದೆ. ಅದರೊಂದಿಗೆ ಪ್ರೇರಕ್‌ ಮಂಕಡ್‌, ವೃತ್ತಿಕ್‌ ಚಟರ್ಜಿ ಹಾಗೂ ಇಶಾನ್‌ ಪೊರೆಲ್‌ಗೂ ವಿದಾಯ ಹೇಳಿದೆ. ವೈಭವ್‌ ಅರೋರಾ, ಬೆನ್ನಿ ಹೋವೆಲ್‌ ಹಾಗೂ ಸಂದೀಪ್‌ ಶರ್ಮ ಕೂಡ ನಿರ್ಗಮನ ಕಂಡಿದ್ದಾರೆ.

ಒಡಿಯನ್‌ ಸ್ಮಿತ್‌ ಹಾಗೂ ಸಂದೀಪ್‌ ಶರ್ಮರನ್ನು ರಿಲೀಸ್‌ ಮಾಡುವುದು ಪಂಜಾಬ್‌ ಕಿಂಗ್ಸ್‌ ಪಾಲಿಗೆ ಕಠಿಣ ಕೆಲಸವಾಗಿತ್ತು. ಒಡಿಯನ್‌ ಸ್ಮಿತ್‌ ಮ್ಯಾಚ್‌ ವಿನ್ನಿಂಗ್‌ ಪ್ಲೇಯರ್‌. ಡೆತ್‌ ಓವರ್‌ಗಳಲ್ಲಿ ಆಕರ್ಷಕ ಬೌಲಿಂಗ್‌ ಮಾಡುವುದರೊಂದಿಗೆ ಸ್ಫೋಟಕ ಬ್ಯಾಟಿಂಗ್‌ಗೂ ಹೆಸರುವಾಸಿಯಾಗಿದ್ದಾರೆ. ಆದರೆ, ಕಳೆದ ಋತುವಿನಲ್ಲಿ ಓವರ್‌ಗೆ ಅಂದಾಜು 12 ರನ್‌ಗಳಂತೆ ದಾಳಿ ನಡೆಸಿದ್ದೇ, ತಂಡದಿಂದ ಹೊರಹಾಕಲು ಕಾರಣವಾಗಿದೆ. ಇನ್ನು ಸಂದೀಪ್‌ ಶರ್ಮ ವಿಚಾರಕ್ಕೆ ಬರುವುದಾದರೆ, ಹೊಸ ಚೆಂಡಿನಲ್ಲಿ ಅವರ ದಾಳಿ ಮೊದಲಿನಷ್ಟು ಮೊನಚಾಗಿರಲಿಲ್ಲ. ಕಳೆದ ಋತುವಿನಲ್ಲಿ ಆಡಿದ ಐದು ಪಂದ್ಯಗಳಿಂದ ಕೇವಲ 2 ವಿಕೆಟ್‌ ಉರುಳಿಸಿದ್ದರು. ಕೊನೆಗೆ ತಮ್ಮ ಆರಂಭಿಕ ಓವರ್‌ಗಳ ದಾಳಿಯನ್ನು ಆರ್ಶದೀಪ್‌ ಸಿಂಗ್‌ಗೆ ಬಿಟ್ಟುಕೊಟ್ಟಿದ್ದರು. ಅದರೊಂದಿಗೆ ಕಗೀಸೋ ರಬಾಡ ಹಾಗೂ ಲಿಯಾಮ್‌ ಲಿವಿಂಗ್‌ ಸ್ಟೋನ್‌ ಅವರನ್ನು ಆರಂಭಿಕ ದಾಳಿಯಲ್ಲಿ ಹೊಂದಿದ್ದಾರೆ. ಒಡಿಯನ್‌ ಸ್ಮಿತ್‌ ಹಾಗೂ ಮಯಾಂಕ್‌ ಅಗರ್ವಾಲ್‌ ನಿರ್ಗಮನದಿಂದ ಪಂಜಾಬ್‌ ಕಿಂಗ್ಸ್‌ ಖಾತೆಗೆ 18 ಕೋಟಿ ರೂಪಾಯಿ ಮರಳಿದೆ.

IPL Retention ಐವರ ಬಿಡುಗಡೆ ಮಾಡಿ, ಕನ್ನಡಿಗನ ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್!

ಆಟಗಾರರನ್ನು ರಿಲೀಸ್‌ ಮಾಡಿದ ಬಳಿಕ ತಂಡದ ನೋಟದ ಬಗ್ಗೆ ಹೇಳುವುದಾದರೆ, ಈಗಲೂ ಪಂಜಾಬ್‌ ಟೀಮ್‌ ಬ್ಯಾಟಿಂಗ್‌ ಬಲಾಢ್ಯವಾಗಿ ಕಂಡಿದೆ. ಜಾನಿ ಬೇರ್‌ಸ್ಟೋ, ಭಾನುಕ ರಾಜಪಕ್ಷ ಹಾಗೂ ಲಿಯಾಮ್‌ ಲಿವಿಂಗ್‌ ಸ್ಟೋನ್‌ ಇನ್ನೂ ತಂಡದಲ್ಲಿದ್ದಾರೆ. ಅಗರ್ವಾಲ್‌ ನಿರ್ಗಮನದಿಂದಾಗಿ ಬೈರ್‌ಸ್ಟೋ ಹಾಗೂ ಶಿಖರ್‌ ಧವನ್‌ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯಲಿದೆ. ಬೌಲಿಂಗ್‌ ವಿಭಾಗದ ಬಗ್ಗೆ ನೋಡುವುದಾದರೆ, ಆರ್ಶ್‌ದೀಪ್‌ ಸಿಂಗ್‌ ಹಾಗೂ ರಬಾಡರಂಥ ಸೂಪರ್‌ ಜೋಡಿಯನ್ನು ಹೊಂದಿದೆ. ಆರ್ಶ್‌ದೀಪ್‌ ಸಿಂಗ್‌ ಟೀಮ್‌ ಇಂಡಿಯಾದಲ್ಲಿ ಉತ್ತಮ ನಿರ್ವಹಣೆ ತೋರಿದ ಬಲ ಹೊಂದಿದ್ದಾರೆ. ಆಟಗಾರರ ಬಿಡುಗಡೆಯಿಂದಾಗಿ ತಂಡದಲ್ಲಿ ಒಟ್ಟಾರೆ 32.2 ಕೋಟಿ ರೂಪಾಯಿ ಮೊತ್ತವಿದೆ. 3 ವಿದೇಶಿ ಆಟಗಾರರನ್ನು ಆಯ್ಕೆ ಮಾಡಬೇಕಿದೆ.

Tap to resize

Latest Videos

IPL Retention: ಸನ್‌ ರೈಸರ್ಸ್‌ನಿಂದ ವಿಲಿಯಮ್ಸನ್‌, ಪಂಜಾಬ್‌ನಿಂದ ಮಯಾಂಕ್‌ ಔಟ್‌!

ಪಂಜಾಬ್‌ ಕಿಂಗ್ಸ್‌ ತಂಡ
ಬಿಡುಗಡೆಯಾದ ಆಟಗಾರರು:
ಮಯಾಂಕ್ ಅಗರ್ವಾಲ್, ಓಡಿಯನ್ ಸ್ಮಿತ್, ವೈಭವ್ ಅರೋರಾ, ಬೆನ್ನಿ ಹೋವೆಲ್, ಇಶಾನ್ ಪೊರೆಲ್, ಅನ್ಶ್ ಪಟೇಲ್, ಪ್ರೇರಕ್ ಮಂಕಡ್, ಸಂದೀಪ್ ಶರ್ಮಾ, ವೃತ್ತಿಕ್ ಚಟರ್ಜಿ.
ಟ್ರೇಡಿಂಗ್‌ ಮೂಲಕ ತಂಡಕ್ಕೆ ಆಯ್ಕೆ: ಯಾರೂ ಇಲ್ಲI ತಂಡದಲ್ಲಿ ಇರುವ ಹಣ: 32.2 ಕೋಟಿ ರೂಪಾಯಿI ಬಾಕಿ ಉಳಿದಿರುವ ವಿದೇಶಿ ಆಟಗಾರರ ಸ್ಥಾನ: 3
ಹಾಲಿ ತಂಡ: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಜಾನಿ ಬೈರ್‌ಸ್ಟೋವ್, ಪ್ರಬ್‌ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಶ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್‌

click me!