ನಾಯಕ ಧೋನಿ ಜತೆಗಿನ ವಾಗ್ವದದ ಬಗ್ಗೆ ಮೊದಲ ಬಾರಿ ತುಟಿಬಿಟ್ಟಿದ ಎರಡು ವಿಶ್ವಕಪ್ ವಿಜೇತ ತಂಡದ ವೇಗಿ..!

By Naveen Kodase  |  First Published Sep 22, 2023, 12:13 PM IST

ಕ್ರಿಕೆಟ್‌ನಿಂದ ದೂರವಾದ ಬಳಿಕ 40 ವರ್ಷದ ಮಾಜಿ ವೇಗಿ ಎಸ್ ಶ್ರೀಶಾಂತ್, ಇದೀಗ ಕಳೆದ ವರ್ಷದಿಂದ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಎಸ್ ಶ್ರೀಶಾಂತ್ ತಾವು ಹಾಗೂ ಧೋನಿ ಜತೆಗಿನ ವಾಗ್ವಾದದ ಕುರಿತಂತೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.


ನವದೆಹಲಿ(ಸೆ.22): ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಎಸ್ ಶ್ರೀಶಾಂತ್, ಮೈದಾನದೊಳಗೆ ಹಾಗೂ ಮೈದಾನದಾಚೆಗೆ ವಿವಾದಾತ್ಮಕ ವೃತ್ತಿಬದುಕನನ್ನು ಹೊಂದಿದ್ದಾರೆ. ಆದರೆ ಎಸ್ ಶ್ರೀಶಾಂತ್ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರೂ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡವು ಎರಡು ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಕ್ರಿಕೆಟ್‌ನಿಂದ ದೂರವಾದ ಬಳಿಕ 40 ವರ್ಷದ ಮಾಜಿ ವೇಗಿ ಎಸ್ ಶ್ರೀಶಾಂತ್, ಇದೀಗ ಕಳೆದ ವರ್ಷದಿಂದ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಎಸ್ ಶ್ರೀಶಾಂತ್ ತಾವು ಹಾಗೂ ಧೋನಿ ಜತೆಗಿನ ವಾಗ್ವಾದದ ಕುರಿತಂತೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.

Tap to resize

Latest Videos

ICC ODI Rankings: ಏಷ್ಯಾಕಪ್‌ನಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್‌ ಮತ್ತೆ ನಂ.1 ಬೌಲರ್‌!

Sportskeeda ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಎಸ್ ಶ್ರೀಶಾಂತ್, "ನನಗೆ ಧೋನಿ ಭಾಯ್ ಜತೆಗೆ ಸಾಕಷ್ಟು ವಿರೋಧಗಳಿದ್ದವು. ಆದರೆ ಈಗ ಹೊರಗೆ ನಿಂತು ಆಲೋಚಿಸುವುದಾದರೇ, ಧೋನಿ ಆಟಗಾರರನ್ನು ಸಪೋರ್ಟ್‌ ಮಾಡುತ್ತಿರಲಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಹಲವಾರು ಸಂದರ್ಭಗಳಲ್ಲಿ ನಾಯಕ ಆಲೋಚಿಸುವ ಅಥವಾ ತೆಗೆದುಕೊಳ್ಳುವ ನಿರ್ಧಾರಗಳು ನಮಗಿಂತಲೂ ಭಿನ್ನವಾಗಿರುತ್ತವೆ. ಇದೇ ಅಲ್ಲವೇ ಜೀವ ಎಂದು ಶ್ರೀಶಾಂತ್ ಹೇಳಿದ್ದಾರೆ.

ಭಾರತ ತಂಡದ ಪರ 169 ವಿಕೆಟ್ ಕಬಳಿಸಿ ಮಿಂಚಿರುವ ಎಸ್ ಶ್ರೀಶಾಂತ್, ಬಹುತೇಕ ಪಂದ್ಯಗಳನ್ನು ಎಂ ಎಸ್ ಧೋನಿ ನಾಯಕತ್ವದಡಿಯಲ್ಲಿಯೇ ಆಡಿದ್ದಾರೆ. ಧೋನಿ ಯಾವಾಗಲೂ ತಂಡದ ಯಶಸ್ಸು ಮೊದಲು ಎನ್ನುವ ತತ್ವಕ್ಕೆ ಬದ್ದರಾಗಿದ್ದರು. ಅವರು ಯುವ ಕ್ರಿಕೆಟಿಗರಿಗೆ ಟ್ರೋಫಿ ಎತ್ತಲು ಅವಕಾಶ ಮಾಡಿಕೊಡುತ್ತಿದ್ದರು ಎಂದು ಶ್ರೀಶಾಂತ್ ಹೇಳಿದ್ದಾರೆ.

ಏಕದಿನ ವಿಶ್ವಕಪ್‌ಗೆ ಭಾರತ ಕೊನೆ ಸುತ್ತಿನ ಅಭ್ಯಾಸ..! ಟೀಂ ಇಂಡಿಯಾಗಿಂದು ಆಸೀಸ್ ಸವಾಲು

ಜನರು ಯಾವಾಗಲೂ ಭಾರತ ತಂಡದ ಯಶಸ್ಸಿನ ಶ್ರೇಯವನ್ನು ಧೋನಿಗೆ ನೀಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇವೆ. ನನ್ನ ಪ್ರಕಾರ ಅದರ ಶ್ರೇಯ ಧೋನಿಗೆ ಸಲ್ಲಬೇಕು. ನಾಯಕನಾಗಿ ಅವರು ಹಡಗನ್ನು ಮುನ್ನಡೆಸುವಂತೆ ತಂಡವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದ್ದರು ಎಂದು ಶ್ರೀಶಾಂತ್ ಹೇಳಿದ್ದಾರೆ.

ನಾವು ವಿಶ್ವಕಪ್ ಗೆದ್ದಿದ್ದು ಪ್ರತಿಯೊಬ್ಬರ ಪರಿಶ್ರಮದಿಂದ ಎನ್ನುವುದಲ್ಲಿ ಯಾವುದೇ ಅನುಮಾನವಿಲ್ಲ. ಒಂದು ಹಡಗಿನಲ್ಲಿ ಸಾಕಷ್ಟು ಜನರಿರುತ್ತಾರೆ. ಅವರನ್ನು ಒಂದು ದಿಕ್ಕಿನಿಂದ ಸರಿಯಾದ ಮತ್ತೊಂದು ದಿಕ್ಕಿಗೆ ತಲುಪಿಸುವುದು ನಾಯಕನಾದವನ ಕೆಲಸ. ವಿಮಾನದಲ್ಲಿ ಎಷ್ಟೇ ಹೊತ್ತು ಆಟೋಪೈಲೇಟ್ ಇಟ್ಟರೂ, ಕೊನೆಗೂ ನಿಮಗೆ ಪೈಲೇಟ್‌ ಬೇಕೇ ಬೇಕು ಎಂದು ಶ್ರೀಶಾಂತ್ ಹೇಳಿದ್ದಾರೆ.
 

click me!