ಹರಿಣಗಳ ನಾಡಲ್ಲಿ ಲಂಕಾ ಟೆಸ್ಟ್‌ ಸವಾಲು

Suvarna News   | Asianet News
Published : Dec 26, 2020, 11:21 AM IST
ಹರಿಣಗಳ ನಾಡಲ್ಲಿ ಲಂಕಾ ಟೆಸ್ಟ್‌ ಸವಾಲು

ಸಾರಾಂಶ

ಕ್ವಿಂಟನ್ ಡಿ ಕಾಕ್ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ ತವರಿನಲ್ಲೇ ಶ್ರೀಲಂಕಾ ಚಾಲೆಂಜ್ ಎದುರಿಸಲು ಸಜ್ಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸೆಂಚೂರಿಯನ್(ಡಿ.26)‌: ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಣ ಮೊದಲ ಟೆಸ್ಟ್‌ ಪಂದ್ಯ ಶನಿವಾರದಿಂದ ಇಲ್ಲಿನ ಸೂಪರ್‌ಸ್ಪೋರ್ಟ್‌ ಪಾರ್ಕ್ನಲ್ಲಿ ಆರಂಭವಾಗಲಿದೆ. 2 ಪಂದ್ಯಗಳ ಸರಣಿ ಇದಾಗಿದೆ. 

ಕಳೆದ 2 ವರ್ಷಗಳಿಂದಲೂ ಶ್ರೀಲಂಕಾ, ದ.ಆಫ್ರಿಕಾ ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧನೆ ಮಾಡುತ್ತಿದೆ. ಈ ವರ್ಷ ಕೂಡ ಅದೇ ಉತ್ಸಾಹದಲ್ಲಿ ಲಂಕಾ ತಂಡವಿದೆ. 2018, 2019ರಲ್ಲಿ ಲಂಕಾ, ಆಫ್ರಿಕಾ ವಿರುದ್ಧ 2-0 ಯಿಂದ ಸರಣಿ ಗೆದ್ದಿದೆ. ಈ ವರ್ಷ ಕೂಡ ಗೆದ್ದು ಹ್ಯಾಟ್ರಿಕ್‌ ಸರಣಿ ಜಯಿಸುವ ವಿಶ್ವಾಸದಲ್ಲಿ ಲಂಕಾ ತಂಡವಿದೆ.

ವಿಕೆಟ್‌ ಖಾತೆ ತೆರೆದ ಸಿರಾಜ್; ಭಾರತದ ಹಿಡಿತದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್

ದಿಮುತ್‌ ಕರುಣರತ್ನೆ ಲಂಕಾ ತಂಡವನ್ನು ಮುನ್ನಡೆಸುತ್ತಿದ್ದರೆ, ಕ್ವಿಂಟನ್‌ ಡಿಕಾಕ್‌ ದಕ್ಷಿಣ ಆಫ್ರಿಕಾದ ನಾಯಕರಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ತವರಿನಲ್ಲೇ ಅಗ್ನಿ ಪರೀಕ್ಷೆ ಎದುರಾಗಿದೆ.

ಸ್ಥಳ: ಸೆಂಚೂರಿಯನ್‌ 
ಆರಂಭ: ಮಧ್ಯಾಹ್ನ: 1.30ಕ್ಕೆ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ
U19 ಏಷ್ಯಾಕಪ್, 150 ರನ್‌ಗೆ ಪಾಕಿಸ್ತಾನ ಆಲೌಟ್ ಮಾಡಿದ ಟೀಂ ಇಂಡಿಯಾಗೆ 90 ರನ್ ಗೆಲುವು