TNPL 2023 ದುಬಾರಿ ಎಸೆತ: ಒಂದು ಎಸೆತದಲ್ಲಿ 18 ರನ್‌ ಚಚ್ಚಿಸಿಕೊಂಡ ಬೌಲರ್‌..! ವಿಡಿಯೋ ವೈರಲ್‌

By Naveen Kodase  |  First Published Jun 14, 2023, 12:46 PM IST

TNPL ಇತಿಹಾಸದಲ್ಲೇ ದುಬಾರಿ ಎಸೆತ ಹಾಕಿದ ಅಭಿಷೇಕ್ ತನ್ವಾರ್
ಸಲೀಂ ಸ್ಪಾರ್ಟಾನ್ ತಂಡದ ನಾಯಕನಿಂದ ಕೊನೆಯ ಎಸೆತದಲ್ಲಿ 18 ರನ್ ದುಬಾರಿ ಎಸೆತ
ಕಳೆದ ಆವೃತ್ತಿಯ ಯಶಸ್ವಿ ಬೌಲರ್, ಈ ಬಾರಿ ಸಾಕಷ್ಟು ದುಬಾರಿ


ಚೆನ್ನೈ(ಜೂ.14): ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯ ಚೆಪಾಕ್‌ ಸೂಪರ್ ಗಿಲ್ಲೀಸ್‌ ಹಾಗೂ ಸಲೀಂ ಸ್ಪಾರ್ಟಾನ್ ನಡುವಿನ ಪಂದ್ಯದಲ್ಲಿ ಇತಿಹಾಸ ನಿರ್ಮಾಣವಾಗಿದೆ. ಸಲೀಂ ಸ್ಪಾರ್ಟಾನ್ ತಂಡದ ನಾಯಕ ಅಭಿಷೇಕ್‌ ತನ್ವಾರ್ 20ನೇ ಓವರ್‌ನ ಕೊನೆಯ ಎಸೆತದಲ್ಲಿ ಬರೋಬ್ಬರಿ 18 ರನ್ ಬಿಟ್ಟುಕೊಡುವ ಮೂಲಕ ದುಬಾರಿ ಎಸೆತ ಎಸೆದ ಬೌಲರ್ ಎನ್ನುವ ಕುಖ್ಯಾತಿಗೆ ಒಳಗಾಗಿದ್ದಾರೆ.  

ಹೌದು, 2022ನೇ ಸಾಲಿನ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಭಿಷೇಕ್ ತನ್ವಾರ್ ಅತಿಹೆಚ್ಚು ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಆದರೆ ಇದೀಗ 2023ನೇ ಸಾಲಿನ ಟಿಎನ್‌ಪಿಎಲ್‌ ಟೂರ್ನಿಯಲ್ಲಿ ಲಯ ಕಳೆದುಕೊಂಡಂತೆ ಕಂಡುಬಂದಿದ್ದು, ಕೊನೆಯ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟಿದ್ದಾರೆ. ಅಭಿಷೇಕ್ ತನ್ವಾರ್, ಕೊನೆಯ ಓವರ್‌ನಲ್ಲಿ 26 ರನ್ ಬಿಟ್ಟುಕೊಟ್ಟ ಪರಿಣಾಮ ಎದುರಾಳಿ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 217 ರನ್ ಕಲೆಹಾಕಿತು.

Latest Videos

undefined

ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಅಭಿಷೇಕ್ ತನ್ವಾರ್ 18 ರನ್ ಗಳಿಸಿದ್ದು ಹೇಗೆ?

* 19ನೇ ಓವರ್‌ನ ಕೊನೆಯ ಎಸೆತ ಅಭಿಷೇಕ್ ತನ್ವಾರ್ ಎದುರಾಳಿ ಬ್ಯಾಟರ್‌ನನ್ನು ಕ್ಲೀನ್‌ ಬೌಲ್ಡ್ ಮಾಡಿ ಸಂಭ್ರಮಿಸಿದರು. ಆದರೆ ಆ ಎಸೆತ ನೋ ಬಾಲ್ ಆಗಿತ್ತು. ಹೀಗಾಗಿ ಒಂದು ರನ್ ಸೇರ್ಪಡೆಯಾಯಿತು.

* ಫ್ರೀ ಹಿಟ್ ಎಸೆತವನ್ನು ಸಂಜಯ್ ಯಾದವ್ ಸಿಕ್ಸರ್ ಸಿಡಿಸಿದರು. ಫ್ರಿ ಹಿಟ್ ಎಸೆತವೂ ಕೂಡಾ ನೋ ಬಾಲ್ ಆಯಿತು. ಅಲ್ಲಿಗೆ 8 ರನ್‌ಗಳಾದವು.

* ಮತ್ತೆ ಎಸೆದ ಫ್ರಿ ಹಿಟ್ ಎಸೆತ ಕೂಡಾ ನೋಬಾಲ್ ಆಯಿತು. ಆ ಎಸೆತದಲ್ಲಿ ಸಂಜಯ್ ಯಾದವ್ 2 ರನ್ ಗಳಿಸಿದರು. 2+1+8= 11 ರನ್ ಆಯಿತು.

* ಇನ್ನು ಮರು ಎಸೆತವನ್ನು ಅಭಿಷೇಕ್ ತನ್ವಾರ್ ವೈಡ್ ಎಸೆದರು. ಹೀಗಾಗಿ 11+1= 12 ರನ್‌ಗಳಾದವು

* ಇನ್ನು ಕೊನೆಯ ಲೀಗಲ್ ಎಸೆತವನ್ನು ಸಂಜಯ್ ಯಾದವ್ ಸಿಕ್ಸರ್ ಸಿಡಿಸಿದರು. ಈ ಮೂಲಕ ಕೊನೆಯ ಎಸೆತದಲ್ಲಿ ಸಂಜಯ್ ಯಾದವ್ ಸಿಕ್ಸರ್‌ಗಟ್ಟುವ ಮೂಲಕ ಕೊನೆಯ ಎಸೆತದಲ್ಲಿ ಬರೋಬ್ಬರಿ 18 ರನ್ ಗಳಿಸಿದರು.

ಹೀಗಿತ್ತು ನೋಡಿ ಆ ಕ್ಷಣ:

The most expensive delivery ever? 1 Ball 18 runs pic.twitter.com/U95WNslHav

— FanCode (@FanCode)

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಅಭಿಷೇಕ್‌ ತನ್ವಾರ್, "ಕೊನೆಯ ಓವರ್‌ನಲ್ಲಿ 4 ನೋ ಬಾಲ್ ಹಾಕಿದ್ದು, ಓರ್ವ ಹಿರಿಯ ಬೌಲರ್ ಆಗಿ ನನಗೆ ನಿರಾಸೆಯನ್ನುಂಟು ಮಾಡಿತು. ಗಾಳಿ ಕೂಡಾ ನಮ್ಮ ನೆರವಿಗೆ ಬರಲಿಲ್ಲ. ಹೀಗಾಗಿ ದುಬಾರಿ ಬೌಲಿಂಗ್ ಮಾಡಿದ್ದಕ್ಕಾಗಿ ಬೇಸರವಾಯಿತು ಎಂದು ಅಭಿಷೇಕ್ ತನ್ವಾರ್ ಹೇಳಿದ್ದಾರೆ.

2 ರನ್‌ಗೆ 5 ಬಲಿ ಪಡೆದ ಶ್ರೇಯಾಂಕ ಪಾಟೀಲ್‌; ಭಾರತಕ್ಕೆ ಗೆಲುವು ತಂದಿತ್ತ ಕನ್ನಡತಿ..!

ಇನ್ನು ಕಠಿಣ ಗುರಿ ಬೆನ್ನತ್ತಿದ ಚೆಪಾಕ್‌ ಸೂಪರ್ ಗಿಲ್ಲೀಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸಲೀಂ ಸ್ಪಾರ್ಟಾನ್ ತಂಡವು 52 ರನ್ ಅಂತರದ ಹೀನಾಯ ಸೋಲು ಅನುಭವಿಸಿತು.

click me!