Covid 19 Pandemic: ವೈರಸ್‌ ಅಂತ್ಯವಾಗಿಲ್ಲ, ಇನ್ನಷ್ಟು ರೂಪಾಂತರಿ ಸಾಧ್ಯತೆ ಇದ್ದೇ ಇದೆ: WHO

By Kannadaprabha News  |  First Published Feb 12, 2022, 7:28 AM IST

*ವೈರಸ್‌ ಅಂತ್ಯವನ್ನೂ ಯಾರೂ ಊಹಿಸಲು ಸಾಧ್ಯವಿಲ್ಲ: ಡಬ್ಲುಎಚ್‌ಒ
*ಮುಂಜಾಗ್ರತಾ ಕ್ರಮ, ಮಾರ್ಗಸೂಚಿ ಕೈಬಿಡುವುದು ಮೂರ್ಖತನ
*ಕೋವಿಡ್‌ 2ನೇ ಡೋಸ್‌ ಪ್ರತಿಕೂಲ ಪರಿಣಾಮ: 167 ಜನರ ಸಾವು


ನವದೆಹಲಿ (ಫೆ. 12): ಜಗತ್ತಿನಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಇನ್ನೂ ಕೊನೆಯಾಗಿಲ್ಲ. ಕೋವಿಡ್‌-19 ವೈರಸ್‌ ಇನ್ನೂ ಹೆಚ್ಚಿನ ರೂಪಾಂತರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌  (soumya swaminathan) ಎಚ್ಚರಿಸಿದ್ದಾರೆ. ಮಹಾಮಾರಿ ವೈರಸ್‌ ವಿಕಾಸ ಮತ್ತು ಬೆಳವಣಿಗೆಯನ್ನು ಇಡೀ ಜಗತ್ತು ಕಂಡಿದೆ. ಹಾಗಾಗಿ ಇನ್ನೂ ಹೆಚ್ಚಿನ ರೂಪಾಂತರಿಗಳು, ಅತಿ ಅಪಾಯಕಾರಿ ರೂಪಾಂತರಿಗಳು ರೂಪುಗೊಳ್ಳಬಹುದು. 

ಹಾಗಾಗಿ ಇದು ಸಾಂಕ್ರಾಮಿಕದ ಅಂತ್ಯ ಅಲ್ಲ. ವೈರಸ್‌ನ ಅಂತ್ಯವನ್ನೂ ಯಾರೂ ಊಹಿಸಲು ಸಾಧ್ಯವಿಲ್ಲ. ವೈರಸ್‌ ಅಂತ್ಯವಾಯಿತು ಎಂದು ಎಲ್ಲಾ ಮುಂಜಾಗ್ರತಾ ಕ್ರಮ ಮತ್ತು ಮಾರ್ಗಸೂಚಿಗಳನ್ನು ಕೈಬಿಡುವುದು ಮೂರ್ಖತನ ಎಂದು ತಿಳಿಸಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: Covid Crisis: 2 ದಿನದಲ್ಲಿ ಪಾಸಿಟಿವಿಟಿ ಭಾರಿ ಇಳಿಕೆ: ಕೋವಿಡ್‌ ತಹಬದಿಗೆ

ಎಲ್ಲಾ ಮಾರ್ಗಸೂಚಿ ಮತ್ತು ಮುಂಜಗ್ರತಾ ಕ್ರಮಗಳನ್ನು 2022ರ ಅಂತ್ಯದ ವರೆಗೂ ಮುಂದುವರೆಸಿದರೆ ವೈರಸ್‌ ನಿಗ್ರಹಿಸುವಲ್ಲಿ ಬಹುಶಃ ಯಶಸ್ವಿಯಾಗಬಹುದು. ಯಾವುದೇ ದೇಶದ ಯಾವುದೇ ಭಾಗದಲ್ಲಿ ರೂಪಾಂತರಿಯ ಉಗಮವಾಗಹುದು. ಹಾಗಾಗಿ ಸದಾ ಜಾಗರೂಕರಾಗಿರಬೇಕು. ವೈರಸ್‌ ಜೊತೆಜೊತೆಗೇ ಹೇಗೆ ಬದುಕಬೇಕೆಂದು ಜಗತ್ತು ಕಲಿತಿದೆ. 

ವೈರಸ್‌ ವಿರುದ್ಧ ಹೋರಾಡುವ ವ್ಯವಸ್ಥೆ ಬಲಿಷ್ಠವಾಗಿದೆ. ಸಾಮಾನ್ಯ ಸಾಂಕ್ರಾಮಿಕ ಜ್ವರವಾಗಿದ್ದರೂ, ಸೋಂಕಾಗಿದ್ದರೂ ಮಾಸ್ಕ್‌ ಧರಿಸುವುದು ಒಳ್ಳೆಯದು. ಅದನ್ನು ಭವಿಷ್ಯದಲ್ಲೂ ಮುಂದುವರೆಸಬೇಕಿದೆ’ ಎಂದು ತಿಳಿಸಿದರು.

ಇದನ್ನೂ ಓದಿ: Covid Crisis: ಮಾಸ್ಕ್‌ ಕಡ್ಡಾಯ ನಿಯಮ ರದ್ದತಿಗೆ ಮಹಾರಾಷ್ಟ್ರ ಚಿಂತನೆ

58077 ಕೋವಿಡ್‌ ಕೇಸ್‌, 657 ಮಂದಿ ಬಲಿ: ಶುಕ್ರವಾರ ಬೆಳಗ್ಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 58,077 ಕೋವಿಡ್‌ ಕೇಸ್‌ಗಳು ದೃಢಪಟ್ಟಿದ್ದು, 657 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.35 ಕೋಟಿಗೆ ಮತ್ತು ಒಟ್ಟು ಸಾವಿನ ಸಂಖ್ಯೆ 5.07 ಲಕ್ಷಕ್ಕೆ ತಲುಪಿದೆ. ಸೋಂಕಿನ ಪ್ರಮಾಣವು ಕಳೆದ 38 ದಿನಗಳಲ್ಲೇ ಕನಿಷ್ಠ. 

ಜ.4ರಂದು 58097 ಪ್ರಕರಣ ದಾಖಲಾಗಿತ್ತು. ಸೋಂಕಿನ ಪ್ರಮಾಣ ಇಳಿಕೆ ಬೆನ್ನಲ್ಲೇ ಸಕ್ರಿಯ ಸೋಂಕಿತರ ಸಂಖ್ಯೆ 6,97,802ಕ್ಕೆ ಇಳಿದಿದೆ. ಇನ್ನು ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ.3.89ಕ್ಕೆ ಮತ್ತು ವಾರದ ಪಾಸಿಟಿವಿಟಿ ದರ ಶೇ.5.76ಕ್ಕೆ ಇಳಿದಿದೆ. ದೇಶದಲ್ಲಿ ಕೋವಿಡ್‌ ಕಾಲ ಅಂತ್ಯವಾಗುವ ಮತ್ತಷ್ಟುಸುಳಿವುಗಳಿವು ಎಂದು ವಿಶ್ಲೇಷಿಸಲಾಗಿದೆ. ಏತನ್ಮಧ್ಯೆ, ಈವರೆಗೆ ದೇಶಾದ್ಯಂತ ಕೋವಿಡ್‌ ಲಸಿಕೆಯ 171.79 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.

ಕೋವಿಡ್‌ 2ನೇ ಡೋಸ್‌ ಪ್ರತಿಕೂಲ ಪರಿಣಾಮ: 167 ಜನರ ಸಾವು: ಕೋವಿಡ್‌ 2ನೇ ಡೋಸಿನ ಪ್ರತಿಕೂಲ ಪರಿಣಾಮದಿಂದಾಗಿ ದೇಶದಲ್ಲಿ 167 ಸಾವುಗಳು ಸಂಭವಿಸಿದೆ ಎಂದು ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ ಪವಾರ್‌ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಈ ಪೈಕಿ ಕೇರಳದಲ್ಲಿ 43, ಮಹಾರಾಷ್ಟ್ರದಲ್ಲಿ 15, ಪಶ್ಚಿಮ ಬಂಗಾಳದಲ್ಲಿ 14 ಹಾಗೂ ಮಧ್ಯಪ್ರದೇಶ ಹಾಗೂ ಓಡಿಶಾದಲ್ಲಿ ತಲಾ 12 ಸಾವುಗಳಾಗಿವೆ.

click me!