ಇನ್ನೆರಡು ವಾರದಲ್ಲಿ 10,000 ಮಂದಿಗೆ ಕೊರೋನಾ ವೈರಸ್‌?

By Suvarna News  |  First Published Apr 3, 2020, 11:50 AM IST

ಭಾರತದಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ ಎರಡು ವಾರಗಳಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಲಿದೆ ಎನ್ನುತ್ತಿವೆ ವರದಿಗಳು.


ನವದೆಹಲಿ(ಏ.03): ಭಾರತದಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಕೇವಲ 2 ದಿನಗಳ ಅಂತರದಲ್ಲಿ ಶೇ.47ರಷ್ಟು ಹೆಚ್ಚಳವಾಗಿರುವ ಅತ್ಯಂತ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. 

ಇದೇ ರೀತಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಹೋದರೆ, ಮುಂದಿನ 13 ದಿನಗಳಲ್ಲಿ ಕೊರೋನಾಪೀಡಿತರ ಸಂಖ್ಯೆ ದೇಶದಲ್ಲಿ 10 ಸಾವಿರದ ಗಡಿ ದಾಟುವ ಸಂಭವವಿದೆ ಎಂಬ ಆತಂಕಕಾರಿ ಮಾಹಿತಿಯೂ ಬೆಳಕಿಗೆ ಬಂದಿದೆ.

Tap to resize

Latest Videos

ಭಾರತದಲ್ಲಿ ಕೊರೋನಾ ಬಲಿ ಸಂಖ್ಯೆ 72ಕ್ಕೆ, 2000 ಗಡಿ ದಾಟಿದ ಸೋಂಕಿತರು

48 ತಾಸುಗಳ ಅವಧಿಯಲ್ಲಿ ಕೊರೋನಾಪೀಡಿತರ ಸಂಖ್ಯೆ ದೇಶದಲ್ಲಿ ಶೇ.37ರಷ್ಟು ಹೆಚ್ಚಳವಾಗಿ, 1,251ಕ್ಕೆ ಮುಟ್ಟಿದ್ದೇ ಈವರೆಗಿನ ಅತ್ಯಧಿಕ ಏರಿಕೆ ಪ್ರಮಾಣವಾಗಿತ್ತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಸೋಂಕಿತರ ಸಂಖ್ಯೆ 1,834ಕ್ಕೆ ಏರಿಕೆಯಾದ ಸಂದರ್ಭದಲ್ಲಿ ಎರಡು ದಿನಗಳ ಅಂತರದಲ್ಲಿ ಕೊರೋನಾಪೀಡಿತರ ಪ್ರಮಾಣದಲ್ಲಿ ಶೇ.47ರಷ್ಟು ಹೆಚ್ಚಳ ಕಂಡುಬಂದಿದೆ.

'ಕೊರೋನಾ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ'

ಸದ್ಯ ಜಾಗತಿಕ ಕೊರೋನಾ ಕೇಂದ್ರ ಬಿಂದುವಾಗಿರುವ ಅಮೆರಿಕಕ್ಕೆ ಹೋಲಿಸಿದರೆ ಭಾರತದ ಕೊರೋನಾ ಪ್ರಕರಣಗಳು ಕಡಿಮೆ ಇವೆ. ಆದರೆ ವಿವಿಧ ಕ್ರಮಗಳನ್ನು ಕೈಗೊಂಡು ಕೊರೋನಾ ಸೋಂಕು ನಿಗ್ರಹಿಸಿದ ಸಿಂಗಾಪುರ ಅಥವಾ ದಕ್ಷಿಣ ಕೊರಿಯಾದಂತಹ ದೇಶಗಳಿಗೆ ಹೋಲಿಸಿದರೆ ಭಾರತದ ಗ್ರಾಫ್‌ ಏರುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

click me!