'ಕೊರೋನಾ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ'

Kannadaprabha News   | Asianet News
Published : Apr 03, 2020, 11:46 AM ISTUpdated : Apr 03, 2020, 12:33 PM IST
'ಕೊರೋನಾ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡ್ತಿದೆ'

ಸಾರಾಂಶ

ಕೊರೋನಾ ವೈರಸ್‌ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡಿಲ್ಲ| ಪೂರ್ವ ತಯಾರಿ ಇಲ್ಲದೇ 21 ದಿನಗಳ ಲಾಕ್‌ಡೌನ್‌ ಘೋಷಣೆ| ಅಧಿವೇಶನ ಮುಂದೂಡಲು ಹೇಳಿದರೂ ಮುಂದೂಡಲಿಲ್ಲ. ಜನತಾ ಕರ್ಫ್ಯೂ ಬಳಿಕ ಚಪ್ಪಾಳೆ ತಟ್ಟಿಸಿದ್ದು ಯಾರು: ಸಿದ್ದರಾಮಯ್ಯ| 

ಬೆಂಗಳೂರು(ಏ.03): ಕೊರೋನಾ ವೈರಸ್‌ ವಿಚಾರದಲ್ಲಿ ರಾಜಕೀಯ ಲಾಭ ಹುಡುಕಿದವರು ಬಿಜೆಪಿಯವರು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಪಾದಿಸಿದ್ದಾರೆ. 

 

ಈ ಬಗ್ಗೆ ಗುರುವಾರ ರಾತ್ರಿ ಸರಣಿ ಟ್ವೀಟ್‌ ಮಾಡಿರುವ ಅವರು, ಈ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡಿಲ್ಲ. ಪೂರ್ವ ತಯಾರಿ ಇಲ್ಲದೇ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಯಿತು. ಅಧಿವೇಶನ ಮುಂದೂಡಲು ಹೇಳಿದರೂ ಮುಂದೂಡಲಿಲ್ಲ. ಜನತಾ ಕರ್ಫ್ಯೂ ಬಳಿಕ ಚಪ್ಪಾಳೆ ತಟ್ಟಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

 

ಕೊರೋನಾ ಆತಂಕ: ಸಂಸದರ ನಿಧಿ ಪಿಎಂ ಫಂಡ್‌ಗೆ ಸಿದ್ದರಾಮಯ್ಯ ಆಕ್ರೋಶ

ವಿಮಾನ ನಿಲ್ದಾಣಗಳಲ್ಲಿ ಹೊರದೇಶದಿಂದ ಬರುವವರ ನಿಗಾ ಇಡಲಿಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಚನಾತ್ಮಕ ಟೀಕೆ ಮಾಡಿದ್ದಾರೆ. ಅದನ್ನು ಸಹಿಸಿಕೊಳ್ಳುವ ಶಕ್ತಿ ಬಿಜೆಪಿಗೆ ಇಲ್ಲ ಎಂದು ಅವರು ಹರಿಹಾಯ್ದಿದ್ದಾರೆ.


 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?