ಸೆಕ್ಷನ್ 144: ಬಾರ್ ಓಪನ್ ಮಾಡಿದ್ರೆ ಲೈಸೆನ್ಸ್‌ ರದ್ದು..!

By Kannadaprabha News  |  First Published Mar 24, 2020, 9:03 AM IST

ಬಾರ್‌ಗಳನ್ನು ಬಂದ್‌ ಮಾಡುವಂತೆ ಸರ್ಕಾರ ನೀಡಿದ ಆದೇಶವನ್ನು ಉಲ್ಲಂಘಿಸಿದಲ್ಲಿ ಬಾರ್‌ಗಳ ಪರವಾನಗಿ ರದ್ದಾಗಲಿದೆ. ಈಗಾಗಲೇ ಮೂರು ಬಾರ್‌ಗಳ ಪರವಾನಗಿ ರದ್ದುಪಡಿಸಲಾಗಿದೆ.


ಬೆಂಗಳೂರು(ಮಾ.24): ಬಾರ್‌ಗಳನ್ನು ಬಂದ್‌ ಮಾಡುವಂತೆ ಸರ್ಕಾರ ನೀಡಿದ ಆದೇಶವನ್ನು ಉಲ್ಲಂಘಿಸಿದ ಮೂರು ಬಾರ್‌ಗಳ ಪರವಾನಗಿ ರದ್ದುಪಡಿಸಲಾಗಿದೆ. ಮಾ.31ರ ರಾತ್ರಿಯವರೆಗೆ ಎಲ್ಲ ಮಾದರಿಯ ಮದ್ಯ ಮಾರಾಟ ಮಳಿಗಳ ಬಂದ್‌ಗೆ ಸೂಚನೆ ನೀಡಲಾಗಿದೆ ಎಂದರು.

ಕೊರೋನಾ ವೈರಸ್‌ ಹರಡದಂತೆ ತಡೆಯಲು ಮಾಚ್‌ರ್‍ 31ರವರೆಗೆ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ಔಷಧಿ ಹೊರತು ಪಡಿಸಿ ಉಳಿದೆಲ್ಲ ಸರಕು ಸಾಗಾಣಿಕೆ ವಾಹನಗಳ ನಗರಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

Latest Videos

undefined

ಕೊರೋನಾ ಕಾಲದಲ್ಲಿ ಬೆಂದಕಾಳೂರು; ಹೀಗಿದೆ ನೋಡಿ!

ಜನರ ಆರೋಗ್ಯ ಕಾಪಾಡುವ ಮತ್ತು ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ಮಾ.23ರ ಮಧ್ಯರಾತ್ರಿಯಿಂದ ಮಾ.31ರವರೆಗೆ ಐಪಿಸಿ 144 ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದೇಶದನ್ವಯ 5ಕ್ಕಿಂತ ಹೆಚ್ಚಿನ ಜನರು ಒಂದೆಡೆ ಸೇರುವುದು, ವಾಕಿಂಗ್‌ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಹಾಗೂ ನಗರ ಪೊಲೀಸ್‌ ಆಯುಕ್ತ ಎಸ್‌. ಭಾಸ್ಕರ್‌ರಾವ್‌ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಕ್ವಾರಂಟೈನ್‌ಗೆ ಒಳಗಾದವರ ಮನೆಗೆ ನೋಟಿಸ್‌, ಹೊರ ಬಂದ್ರೆ ಹುಷಾರ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ, ನಗರದಲ್ಲಿ ಮಾ.31ರವರೆಗೆ ಅಗತ್ಯವಸ್ತು ಮಾರಾಟ ಮಳಿಗೆ ಹೊರತು ಪಡಿಸಿ ಉಳಿದೆಲ್ಲಾ ಮಳಿಗೆಗಳನ್ನು ಬಂದ್‌ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ಹೂವು ಇತ್ಯಾದಿಗಳನ್ನು ಅಧಿಕ ಬೆಲೆಗಳಲ್ಲಿ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಂಕ್ರಾಮಿಕ ರೋಗಗಳು ಹರಡಬಹುದಾದ ಸಾಧ್ಯತೆ ಇರುವುದರಿಂದ ಹಣ್ಣು, ಹೂವು, ತರಕಾರಿ ಮುಂತಾದ ದಿನಬಳಕೆ ವಸ್ತುಗಳನ್ನು ರಸ್ತೆ ಬದಿ, ತೆರೆದ ಸ್ಥಳಗಳಲ್ಲಿ ಮಾರಾಟ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

click me!