ಕೊರೋನಾ ವೈರಸ್ ಗಾಳಿ ಮೂಲಕ ಹರಡುತ್ತಾ? ವಿಶ್ವಸಂಸ್ಥೆ ಹೇಳೋದೇನು?

By Kannadaprabha News  |  First Published Mar 24, 2020, 9:02 AM IST

ಶೀತದಿಂದ ಸಿಡಿಯುವ ಹನಿಗಳು ಹಾಗೂ ತೀರಾ ಒಡನಾಟಗಳಿಂದ ಮಾರಕ ಕೊರೋನಾ ಹರಡುತ್ತಿದೆ| ಗಾಳಿಯಲ್ಲಿ ಹರಡುತ್ತಾ ಕೊರೋನಾ? ಮುಂದಿದೆ ವಿವರ


ನವದೆಹಲಿ(ಮಾ.24): ಶೀತದಿಂದ ಸಿಡಿಯುವ ಹನಿಗಳು ಹಾಗೂ ತೀರಾ ಒಡನಾಟಗಳಿಂದ ಮಾರಕ ಕೊರೋನಾ ಹರಡುತ್ತಿದೆ. ಆದರೆ, ಈವರೆಗೂ ಗಾಳಿಯ ಮುಖಾಂತರವಾಗಿ ಕೊರೋನಾ ಹಬ್ಬಿರುವುದು ವರದಿಯಾಗಿಲ್ಲ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ನೈಋುತ್ಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಖೇತರ್ಪಲ್‌ ಸಿಂಗ್‌, ಸಾಮಾನ್ಯವಾಗಿ ಕೊರೋನಾ ಪೀಡಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಸಿಡಿಯುವ ಹನಿಗಳಿಂದ ಹಾಗೂ ಆತ್ಮೀಯ ಒಡನಾಟಗಳಿಂದಲೂ ಕೊರೋನಾ ಹರಡುತ್ತದೆ. ಇದಕ್ಕಾಗಿಯೇ, ಜನರು ತಮ್ಮ ಕೈಗಳು ಹಾಗೂ ಮೂಗನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಡಬ್ಲ್ಯುಎಚ್‌ಒ ಪ್ರತಿಪಾದಿಸುತ್ತಿದೆ ಎಂದಿದ್ದಾರೆ.

Tap to resize

Latest Videos

ಗಾಳಿಯ ಮುಖಾಂತರ ಕೊರೋನಾ ವ್ಯಾಪಿಸುತ್ತಿದೆ ಎಂಬ ಆತಂಕ ಸೃಷ್ಟಿಸುವ ಗಾಳಿಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

click me!