ಕೊರೋನಾ ತಡೆಗೆ ಡೆಟಾಲ್ ಕುಡಿಸಿ 59 ಜನರನ್ನು ಕೊಂದ!

Published : Mar 24, 2020, 04:25 PM IST
ಕೊರೋನಾ ತಡೆಗೆ ಡೆಟಾಲ್ ಕುಡಿಸಿ 59 ಜನರನ್ನು ಕೊಂದ!

ಸಾರಾಂಶ

ಕೊರೋನಾ ಗುಣಪಡಿಸಲು ಡೆಟಾಲ್ ಕುಡಿಸಿದ ಪಾದ್ರಿ| ಡೆಟಾಲ್ ಕುಡಿದವರ ಪೈಕಿ 59 ಮಂದಿ ಸಾವನ್ನಪ್ಪಿದ್ದು, ಇತರ ನಾಲ್ವರ ಆರೋಗ್ಯ ಸ್ಥಿತಿ ಗಂಭೀರ

ಕೇಪ್‌ಟೌನ್(ಮಾ24): : ಕೊರೋನಾ ಗುಣಪಡಿಸುವುದಾಗಿ ನಂಬಿಸಿ ಕ್ರೈಸ್ತ ಪಾದ್ರಿಯೊಬ್ಬರು ಚರ್ಚ್ ನ ಹಲವು ಸದಸ್ಯರಿಗೆ ಡೆಟಾಲ್ ಕುಡಿಸಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಡೆಟಾಲ್ ಕುಡಿದವರ ಪೈಕಿ 59 ಮಂದಿ ಸಾವನ್ನಪ್ಪಿದ್ದು, ಇತರ ನಾಲ್ವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 

ಈ ಸಂಬಂಧ ಇಲ್ಲಿನ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲ್ಲಿನ ಚರ್ಚ್ ಒಂದರ ಪಾದ್ರಿಯಾಗಿರುವ ರುಫಸ್ ಫಾಲಾ ಎಂಬುವವರು, ಮನುಷ್ಯನ ಕಾಯಿಲೆ ಗುಣಮುಖಪಡಿಸಲು ಡೆಟಾಲ್ ಅನ್ನು ಬಳಸುವಂತೆ ಆ ದೇವರೇ ನನಗೆ ಸೂಚಿಸಿದ್ದಾನೆ. 

ಹೀಗಾಗಿ, ನಾನೇ ಮೊದಲಿಗೆ ಡೆಟಾಲ್ ಕುಡಿಯುತ್ತೇನೆ. ಆ ನಂತರ ನೀವು ಕುಡಿಯಿರಿ. ಅಲ್ಲದೆ, ಡೆಟಾಲ್ ಅನ್ನು ಸೇವಿಸಿದ ಹಲವರು ತಾವು ಬಳಲುತ್ತಿದ್ದ ಹಲವು ಕಾಯಿಲೆಗಳಿಂದ ಗುಣವಾಗಿದ್ದಾಗಿ ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ ಎಂದೆಲ್ಲಾ ನಂಬಿಸಿದ್ದ. ಇದನ್ನು ನಂಬಿದ ಹಲವರು ಡೆಟಾಲ್ ಕುಡಿದಿದ್ದರು.

PREV
click me!

Recommended Stories

ಬಾವಲಿಗಳಿಂದ ಜನರಿಗೆ ಕೊರೋನಾ ವೈರಸ್..! WHO-ಚೀನಾ ಜಂಟಿ ಅಧ್ಯಯನ ವರದಿ
ಕೊನೆಗೂ ಕೊರೋನಾ ಕೊಲ್ಲಲು ಸರಳ ಅಸ್ತ್ರ ಸಿಕ್ತು.. ಶಬ್ದ ಸಾಕು!