ರೇಪ್‌ ಕೇಸ್‌ ಮೇಲೆ ಜೈಲು ಸೇರಿದ ಖ್ಯಾತ ನಿರ್ದೇಶಕನಿಗೆ ಕೊರೋನಾ ವೈರಸ್!

Suvarna News   | Asianet News
Published : Mar 24, 2020, 01:10 PM ISTUpdated : Mar 24, 2020, 02:52 PM IST
ರೇಪ್‌ ಕೇಸ್‌ ಮೇಲೆ ಜೈಲು ಸೇರಿದ ಖ್ಯಾತ ನಿರ್ದೇಶಕನಿಗೆ ಕೊರೋನಾ ವೈರಸ್!

ಸಾರಾಂಶ

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಹಾಲಿವುಡ್ ಖ್ಯಾತ ನಿರ್ಮಾಪಕ ಹಾರ್ವಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. 

ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ಮೇಲೆ ಜೈಲು ಪಾಲಾದ ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ಹಾರ್ವಿ ವೀನ್‌ಸ್ಟೀನ್‌ಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಇದೀಗ ಪರೀಕ್ಷೆ ವರದಿ ಬಂದಿದ್ದು, ಈತನಿಗೂ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. 

ಕೆಲವು ದಿನಗಳ ಹಿಂದೆ ನ್ಯೂ ಯಾರ್ಕ್‌ನಿಂದ ಅಮೆರಿಕದ ಬಫಲೋ ನಗರದ ಕಾರಾಗೃಹಕ್ಕೆ ಹಾರ್ವಿಯನ್ನು ಶಿಫ್ಟ್ ಮಾಡಲಾಗಿತ್ತು.  ಮಾರ್ಚ್‌ 22ರಂದು ಆರೋಗ್ಯ ತಪಾಸಣೆಯನ್ನೂ ಮಾಡಲಾಗಿತ್ತು. ತಪಾಸಣೆ ವರದಿ ಬಂದ ನಂತರ ಕೊರೀನಾ ಸೋಂಕು ಇರುವುದು ದೃಢಪಟ್ಟಿದೆ. ಈಗಾಗಿ ಕಾರಾಗೃಹ ಪ್ರತ್ಯೇಕ ವಾರ್ಡ್‌ನಲ್ಲಿ ಹಾರ್ವಿನ್ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. 

ಕನ್ನಿಕಾ ಕಪೂರ್ ಇದ್ದ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು ಆಫ್ರಿಕಾ ಕ್ರಿಕೆಟಿಗರು..!

ಹಾರ್ವಿಗೆ 68 ವರ್ಷವಾಗಿದ್ದು, ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡುತ್ತಲೇ ಇದ್ದಾರೆ ಎಂದು ಹೇಳಲಾಗಿದೆ. ಆದರೆ ಸೋಂಕು ಕಾಣಿಸಿಕೊಂಡಿರುವುದರ ಬಗ್ಗೆ ಅವರ ವಕೀಲರು ಎಲ್ಲಿಯೂ ಬಹಿರಂಗ ಮಾಹಿತಿ ನೀಡಿಲ್ಲ.  ಇದೇ ಕಾರಾಗೃಹದಲ್ಲಿ ಇಬ್ಬರು ಕೈದಿಗಳಿಗೆ ಕೋವಿಡ್‌-19 ಇರುವುದು ಖಚಿತವಾಗಿದೆ ಎಂದು ಮಾತ್ರ ಕಾರಾಗೃಹ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

PREV
click me!

Recommended Stories

ಬಾವಲಿಗಳಿಂದ ಜನರಿಗೆ ಕೊರೋನಾ ವೈರಸ್..! WHO-ಚೀನಾ ಜಂಟಿ ಅಧ್ಯಯನ ವರದಿ
ಕೊನೆಗೂ ಕೊರೋನಾ ಕೊಲ್ಲಲು ಸರಳ ಅಸ್ತ್ರ ಸಿಕ್ತು.. ಶಬ್ದ ಸಾಕು!