ಕೊರೋನಾ ಅಟ್ಟಹಾಸ: ಅಮೆರಿಕದಲ್ಲಿ ಒಂದು ಲಕ್ಷ ಶವಬ್ಯಾಗ್‌ ಸಿದ್ಧತೆ..!

By Kannadaprabha NewsFirst Published Apr 3, 2020, 4:31 PM IST
Highlights

ಕೊರೋನಾ ರಣ ಭೀಕರತೆಯನ್ನು ಅರ್ಥಮಾಡಿಕೊಂಡಿರುವ ಅಮೆರಿಕ ಈಗಾಗಲೇ 1 ಲಕ್ಷ ಶವ ತುಂಬುವ ಬ್ಯಾಗ್‌ ಪೂರೈಸುವಂತೆ ಮನವಿ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

ವಾಷಿಂಗ್ಟನ್(ಏ.03)‌: ಕೊರೋನಾ ಸೋಂಕಿಗೆ ಅಮೆರಿಕದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪುವ ಆತಂಕದ ಬೆನ್ನಲ್ಲೇ, ಮೃತದೇಹಗಳ ಸುರಕ್ಷಿತ ವಿಲೇವಾರಿಗಾಗಿ 1 ಲಕ್ಷ ಬ್ಯಾಗ್‌ಗಳನ್ನು ಪೂರೈಸುವಂತೆ ಅಮೆರಿಕದ ವಿಪತ್ತು ನಿರ್ವಹಣಾ ದಳ(ಫೆಮಾ)ವು ಭದ್ರತಾ ಇಲಾಖೆಗೆ ಕೋರಿಕೆ ಸಲ್ಲಿಸಿದೆ. 

ಹಸುಗೂಸಿನ ಶವ ಸಂಸ್ಕಾರಕ್ಕೂ ತಟ್ಟಿದ ಲಾಕ್‌ಡೌನ್‌ ಬಿಸಿ

ಫೆಮಾ ಕೋರಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯ ತತ್ಪರಾಗಿದ್ದಾಗಿ ಪೆಂಟಾಗನ್‌(ಅಮೆರಿಕ ಭದ್ರತಾ ಕೇಂದ್ರ ಕಚೇರಿ) ತಿಳಿಸಿದೆ. ಈಗಾಗಲೇ ಕೊರೋನಾ ಸೋಂಕಿಗೆ 5,300ಕ್ಕೂ ಹೆಚ್ಚು ಮಂದಿ ಅಮೆರಿಕದಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಕೊರೋನಾ ವಿರುದ್ಧ ಎಷ್ಟೇ ಹೋರಾಟ ನಡೆಸಿದರೂ, 1 ಲಕ್ಷದಿಂದ 2.40 ಲಕ್ಷ ಮಂದಿ ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಶ್ವೇತ ಭವನದ ತಜ್ಞರೇ ಒಪ್ಪಿಕೊಂಡಿದ್ದಾರೆ.

ದೀಪ ಹಚ್ಚಿ ಭಾರತ ಗೆಲ್ಲಿಸಿ: ಪ್ರಧಾನಿ ನರೇಂದ್ರ ಮೋದಿ ಸಂದೇಶ

ಇಟಲಿಯಲ್ಲಿ 10 ಸಾವಿರ ವೈದ್ಯಕೀಯ ಸಿಬ್ಬಂದಿಗೆ ಸೋಂಕು, 60 ಸಾವು

ರೋಮ್‌: ಕೊರೋನಾ ಮಾರಿ ಬೀಸಿರುವ ಸಾವಿನ ಬಲೆಗೆ ವಿಶ್ವದಲ್ಲೇ ಅತೀ ಹೆಚ್ಚು ಸಾವು ಸಂಭವಿಸಿರುವ ಇಟಲಿಯಲ್ಲಿ 10 ಸಾವಿರ ವೈದ್ಯಕೀಯ ಸಿಬ್ಬಂದಿಗಳು ಸೋಂಕಿಗೆ ತುತ್ತಾಗಿದ್ದಾರೆ ಎಂದು ಇಟಲಿ ಆರೋಗ್ಯ ಹಾಗೂ ವೈದ್ಯರ ರಾಷ್ಟ್ರೀಯ ಸಂಘ ಹೇಳಿದೆ. 

ಈಗಾಗಲೇ 69 ವೈದ್ಯರು ಬಲಿಯಾಗಿದ್ದಾರೆ. ವೈದ್ಯರ ಸಾವು ಏರುಗತಿಯಲ್ಲಿ ಸಾಗಿದ್ದು ಅಲ್ಲಿನ ಸರ್ಕಾರಕ್ಕೆ ಭಾರೀ ತಲೆನೋವಾಗಿ ಪರಿಣಮಿಸಿದೆ. ಇಟಲಿಯಲ್ಲಿ ಈ ವರೆಗೆ 13,915 ಮಂದಿ ಕೋವಿಡ್‌ನಿಂದಾಗಿ ಮೃತರಾಗಿದ್ದು, 1,15,242 ಮಂದಿಗೆ ಸೋಂಕು ತಟ್ಟಿದೆ. 4,053 ಮಂದಿ ತೀವ್ರ ಸೋಂಕಿತರಿದ್ದು, ಈ ವರೆಗೆ 10,265 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇಟಲಿಯಲ್ಲಿ ನಿನ್ನೆ 760 ಬಲಿ: ಕೊರೋನಾ ವಿಷ ವ್ಯೂಹಕ್ಕೆ ಗುರುವಾರ ಇಟಲಿಯಲ್ಲಿ ಮತ್ತೆ 760 ಮಂದಿ ಉಸಿರು ಚೆಲ್ಲಿದ್ದಾರೆ. ಆ ಮೂಲಕ ಸತ್ತವರ ಸಂಖ್ಯೆ 13,915ಕ್ಕೇರಿದೆ. ಹೊಸದಾಗಿ 4,668 ಮಂದಿಗೆ ಸೋಂಕು ತಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,15,242ಕ್ಕೆ ಏರಿಕೆಯಾಗಿದೆ.

click me!