ಭಾರತದಲ್ಲಿರುವ ಅಮೆರಿಕನ್ನರನ್ನು ಹಿಂದಕ್ಕೆ ಕರೆಸಿಕೊಳ್ಳಲು ಮುಂದಾದ ಅಮೆರಿಕ/ ವಿಮಾನ ಸೌಲಭ್ಯ ಕಲ್ಪಿಸಲು ಮುಂದಾದ ದೊಡ್ಡಣ್ಣ/ ದೆಹಲಿ ಮತ್ತು ಮುಂಬೈನಿಂದ ಅಮೆರಿಕಕ್ಕೆ ವಿಮಾನ
ನವದೆಹಲಿ(ಏ. 07) ಕೊರೋನಾ ಹಾವಳಿಗೆ ಅಮೆರಿಕ ಸಹ ತತ್ತರಿಸಿ ಹೋಗಿದೆ. ಸಂದಿಗ್ಧಕ್ಕೆ ಸಿಲುಕಿರುವ ಯುಎಸ್ ಎ ಭಾರತ ದಲ್ಲಿರುವ ಅಮೆರಿಕನ್ನರನ್ನು ಹಿಂದಕ್ಕೆ ಕರೆಸಿಕೊಳ್ಳಲು ಶುರುಮಾಡಿದೆ.
ಅಮೆರಿಕ್ಕೆ ತೆರಳುವ ವಿಮಾನ ಹಿಡಿಯಲು ಅಮೃತಸರದಿಂದ ನವದೆಹಲಿಗೆ 96 ಜನ ವಿಮಾನದ ಮೂಲಕವೇ ಆಗಮಿಸಿದ್ದಾರೆ. ಚಾರ್ಟೆಡ್ ವಿಮಾನಗಳು ನವದೆಹಲಿಯಿಂದ ಸಾನ್ ಫ್ರಾನ್ಸಿಸ್ಕೋ ಮತ್ತು ಮುಂಬೈನಿಂದ ಅಟ್ಲಾಂಟಾಕ್ಕೆ ಹಾರಲಿವೆ.
ಕೊರೋನಾ ಲಾಕ್ ಡೌನ್ ವಿಸ್ತರಣೆ ಆಗುತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್
ಅಮೆರಿಕದ ನಾರ್ಥನ್ ಮತ್ತು ಈಸ್ಟನ್ ಸ್ಟೇಟ್ ನವರಿಗೆ ನವದೆಹಲಿಯಿಂದ ವಿಮಾನ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿದೆ. ಸಾನ್ ಫ್ರಾನ್ಸಿಸ್ಕೋ ವಿಮಾನ ಹಿಡಿಯಲು ಕೋಲ್ಕತ್ತಾ, ನವದೆಹಲಿ, ಅಮೃತ್ ಸರ ಮತ್ತು ಚಂಢಿಗಡದಿಂದ ಸಹ ವಿಮಾನ ಕಲ್ಲಿಸುವ ಸಾಧ್ಯತೆಯಿದೆ.
ಅಮೆರಿಕದಲ್ಲಿಯೂ ಕೊರೋನಾ ಪರಿಸ್ಥಿತಿ ಕೈ ಮೀರಿ ಹೋಗಿದೆ. ಲಾಕ್ ಡೌನ್ ಘೋಷಣೆ ಮಾಡಿದ್ದರೂ ಭಾರತದಲ್ಲಿರುವ ಅಮೆರಿಕನ್ನರನ್ನು ಕರೆಸಿಕೊಳ್ಳುವ ಸಾಹಸಕ್ಕೆ ಮುಂದಾಗಿದೆ.