ದೇಶದಿಂದ ಪರಾರಿಗೆ ತಬ್ಲೀಘಿಗಳ ಪ್ರಯತ್ನ!

Published : Apr 06, 2020, 09:55 AM IST
ದೇಶದಿಂದ ಪರಾರಿಗೆ ತಬ್ಲೀಘಿಗಳ ಪ್ರಯತ್ನ!

ಸಾರಾಂಶ

ದೇಶದಿಂದ ಪರಾರಿಗೆ  ತಬ್ಲೀಘಿಗಳ ಪ್ರಯತ್ನ| ಚೆನ್ನೈಲ್ಲಿ 10, ದಿಲ್ಲಿಯಲ್ಲಿ 8 ಮಂದಿ ವಶ

ನವದೆಹಲಿ/ಚೆನ್ನೈ(ಏ.06):  ಭಾರತದಲ್ಲಿ ಕೊರೋನಾ ಸೋಂಕು ಹರಡುವಿಕೆಯ ತಾಣಗಳಲ್ಲಿ ಒಂದಾದ ತಬ್ಲೀಘಿ ಜಮಾತ್‌ ಸಂಘಟನೆಯ ಧರ್ಮಸಭೆಯಲ್ಲಿ ಪಾಲ್ಗೊಂಡು ಮಲೇಷ್ಯಾಗೆ ಪರಾರಿಯಾಗಲು ಯತ್ನಿಸಿದ 18 ಮಂದಿ ಮಲೇಷ್ಯಾ ನಾಗರಿಕರನ್ನು ಚೆನ್ನೈ ಹಾಗೂ ದಿಲ್ಲಿ ವಿಮಾನ ನಿಲ್ದಾಣಗಳಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಲಾಕ್‌ಡೌನ್‌ ಕಾರಣ ದಿಲ್ಲಿ ಹಾಗೂ ತಮಿಳುನಾಡಿನ ವಿವಿಧೆಡೆ ಅನೇಕ ಮಲೇಷ್ಯಾ ನಾಗರಿಕರು ಸಿಲುಕಿದ್ದರು. ಇವರನ್ನು ಸ್ವದೇಶಕ್ಕೆ ಮರಳಿಸುವ ಉದ್ದೇಶದಿಂದ ಮಲೇಷ್ಯಾ ಸರ್ಕಾರದ ಕೋರಿಕೆಯ ಮೇರೆಗೆ ಭಾರತ ಸರ್ಕಾರ ಮಲೇಷ್ಯಾಗೆ 2 ವಿಶೇಷ ವಿಮಾನಗಳನ್ನು ಭಾನುವಾರ ಚೆನ್ನೈ ಹಾಗೂ ದಿಲ್ಲಿಯಿಂದ ಕಳಿಸಿತು.

ಈ ವೇಳೆ ದಿಲ್ಲಿಯಿಂದ 8 ಮಂದಿ ಹಾಗೂ ಚೆನ್ನೈನಿಂದ 10 ಮಂದಿ ತಬ್ಲೀಘಿಗಳು ಮಲೇಷ್ಯಾಗೆ ಪರಾರಿಯಾಗಲು ಯತ್ನಿಸಿದ್ದರು, ಅವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಪ್ರವಾಸಿ ವೀಸಾ ಅಡಿ ಭಾರತಕ್ಕೆ ಬಂದು ಅಕ್ರಮವಾಗಿ ತಬ್ಲೀಘಿ ಸಭೆಯಲ್ಲಿ ಪಾಲ್ಗೊಂಡ ಆರೋಪ ಹೊತ್ತಿದ್ದಾರೆ.

PREV
click me!

Recommended Stories

ಬಾವಲಿಗಳಿಂದ ಜನರಿಗೆ ಕೊರೋನಾ ವೈರಸ್..! WHO-ಚೀನಾ ಜಂಟಿ ಅಧ್ಯಯನ ವರದಿ
ಕೊನೆಗೂ ಕೊರೋನಾ ಕೊಲ್ಲಲು ಸರಳ ಅಸ್ತ್ರ ಸಿಕ್ತು.. ಶಬ್ದ ಸಾಕು!