ಕೊರೋನಾ ವೈರಸ್ ವಿರುದ್ಧ ಹೋರಾಡಲು ಚೀನಾ ಭಾರತಕ್ಕೆ ನೆರವಿನ ಹಸ್ತ ಚಾಚಿದೆ. ಜೊತೆಗೇ ಕೊರೋನಾ ವೈರಸ್ ಹರಡಿರುವುದಕ್ಕೆ ಚೀನಾವನ್ನು ದೋಷಿಸಬೇಡಿ ಎಂದೂ ಕೇಳಿಕೊಂಡಿದೆ.
ನವದೆಹಲಿ(ಮಾ.26): ಕೊರೋನಾ ವೈರಸ್ ವಿರುದ್ಧ ಹೋರಾಡಲು ಚೀನಾ ಭಾರತಕ್ಕೆ ನೆರವಿನ ಹಸ್ತ ಚಾಚಿದೆ. ಜೊತೆಗೇ ಕೊರೋನಾ ವೈರಸ್ ಹರಡಿರುವುದಕ್ಕೆ ಚೀನಾವನ್ನು ದೋಷಿಸಬೇಡಿ ಎಂದೂ ಕೇಳಿಕೊಂಡಿದೆ.
ವಿದೇಶಾಂಗ ಸಚಿವ ಎಸ್ ಜಯಶಂಕರ್ ಅವರ ಜೊತೆ ಮಂಗಳವಾರ ನಡೆದ ಮಾತುಕತೆಯಲ್ಲಿ ಅಲ್ಲಿನ ಕೌನ್ಸಿಲರ್ ಹಾಗೂ ಎಫ್‌ಎಂ ವಾಂಗ್ ಇ ಭಾರತದ ಸ್ಥಿತಿಯ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದು, ನೆರವು ನೀಡುವ ಭರವಸೆ ನಿಡಿದ್ದಾರೆ.
undefined
ಕೊರೋನಾ ಭೀತಿ: ಗ್ರಾಮದ ರಕ್ಷಣೆಗೆ ಪಣ ತೊಟ್ಟ ಯುವಕರು!
ಚೀನಾ ತನಗಾದ ಅನುಭವವನ್ನು ಮುಕ್ತವಾಗಿ ಹಂಚಿಕೊಳ್ಳಲು ಸಿದ್ಧವಾಗಿದೆ. ನಮ್ಮ ಮಿತಿಯೊಳಗೆ ಎಲ್ಲ ಸಹಕಾರ ನೀಡಲೂ ಸಿದ್ಧರಿದ್ದೇವೆ ಎಂದು ಚೀನಾದ ಭಾರತ ರಾಯಭಾರಿ ತಿಳಿಸಿದ್ದಾರೆ. ಭಾರತ ಕೊರೋನಾ ವೈರಸ್ ವಿರುದ್ಧ ಹೋರಾಡಿ ಗೆಲುವು ಸಾಧಿಸುತ್ತದೆ ಎಂಬ ನಂಬಿಕೆ ನಮಗಿದೆ ಎಂದಿದ್ದಾರೆ.
ಭಾರತ ಹಾಗೂ ಚೀನಾ ಪರಸ್ಪರ ಸಹಕಾರ ನೀಡಿ ಜಾಗತಿಕ ಮಟ್ಟದಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಚೀನಾದ ಅನುಕಂಪ ಹಾಗೂ ವೈದ್ಯಕೀಯ ನೆರವಿಗಾಗಿ ಡಾ. ಜಯಶಂಕರ್ ಧನ್ಯವಾದ ತಿಳಿಸಿದ್ದಾರೆ. ವೈರಸ್ ಹರಡಿರುವುದಕ್ಕೆ ಚೀನಾವನ್ನು ದೂರುವುದು ಸರಿಯಲ್ಲ. ಭಾರತ ಇಂತಹ ಸಂಕುಚಿತ ಮನೋಭಾವವನ್ನು ತೋರಿಸುವುದಿಲ್ಲ ಎಂದು ನಂಬಿದ್ದೇವೆ ಎಂದು ತಿಳಿಸಿದ್ದಾರೆ.
ಕೊರೋನಾ ಸಮರಕ್ಕೆ 'ಪಾರ್ಲೆ-ಜಿ' ಸಾಥ್: ಬಡವರಿಗೆ ಫ್ರೀ ಬಿಸ್ಕೆಟ್!
ಕೊರೋನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಮಾತುಕತೆ ನಡೆಸಿದ್ದಾರೆ. ಈ ಇಬ್ಬರು ನಾಯಕರ ಮಾತುಕತೆ ಕೊರೋನಾ ವೈರಸ್ ಪೀಡಿತರ ಪಾಲಿಗೆ ಹೊಸ ಆಶಾಕಿರಣ ಹುಟ್ಟುಹಾಕಿದೆ. ಕೋವಿಡ್ 19 ವಿರುದ್ಧ ಭಾಗವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಟೆಲಿಪೋನ್ ಮಾತುಕತೆ ನಡೆಸಿದ್ದಾರೆ.