ಕೊರೋನಾ ಹಾವಳಿಗೆ ಜಗತ್ತೇ ತಲ್ಲಣ| ನೆಮ್ಮದಿಯಿಣದಿದ್ದ ಈ ಪುಟ್ಟ ರಾಷ್ಟ್ರಕ್ಕೂ ಮಹಾಮಾರಿ ಎಂಟ್ರಿ| ನೋಡ ನೋಡುತ್ತಿದ್ದಂತೆ ದಾಖಲಾಯ್ತು ಮೊದಲ ಪ್ರಕರಣ
ಲೋಗನ್(ಮಾ.26): ಇಡೀ ವಿಶ್ವವೇ ಕೊರೋನಾ ಪ್ರಕೋಪಕ್ಕೆ ನಲುಗಿದೆ. 190ಕ್ಕೂ ಅಧಿಕ ರಾಷ್ಟ್ರಗಳು ಅಪಾರ ಸಾವು, ನೋವು ಅನುಭವಿಸುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ನಾನಾ ಕ್ರಮ ಅನುಸರಿಸುತ್ತಿದೆ. ಹೀಗಿರುವಾಗ ಕೊರೋನಾ ಆತಂಕವಿಲ್ಲದೇ ನೆಮ್ಮದಿಯಾಗಿದ್ದ ಈ ಪುಟ್ಟ ರಾಷ್ಟ್ರಕ್ಕೂ ಮಹಾಮಾರಿ ಲಗ್ಗೆ ಇಟ್ಟಿದ್ದು, ಮೊದಲ ಪ್ರಕರಣ ದಾಖಖಲಾಗಿದೆ.
ಹೌದು ಲೋಗನ್ ಎಂಬ ದೇಶದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ದಾಖಲಾಗಿದೆ. ಈ ಮಾಹಿತಿಇಯನ್ನು ಇಲ್ಲಿನ ಆರೋಗ್ಯ ಇಲಾಖೆ ದೃಢಪಡಿಸಿದೆ.
undefined
ಹೆಣಗಳ ರಾಶಿಯೇ ಬಿದ್ದ ಇಟಲಿಯಲ್ಲಿ ಲಾಕ್‌ಡೌನ್ ನಂತ್ರ ಕೊರೋನಾ ಪ್ರಕರಣ ಇಳಿಕೆ
ಲೋಗನ್ ಆರೋಗ್ಯ ಇಲಾಖೆಯ ನಿರ್ದೇಶಕ ಸ್ಟೀವ್ ಬ್ರೌನಿಂಗ್ ಈ ಸಂಬಂಧ ಮಾಹಿತಿ ನೀಡುತ್ತಾ ವೃದ್ಧನೊಬ್ಬನಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಇವರು ಕಳೆದೊಂದು ವಾರದ ಹಿಂದೆ ವಿದೇಶದಿಂದ ಲೋಗನ್‌ಗೆ ಮರಳಿದ್ದರು. ನಾಣು ಖುದ್ದು ಆ ವ್ಯಕ್ತಿಯನ್ನು ಭೇಟಿಯಾಗಿ ವಿಚಾರಿಸಿದ್ದೇನೆ. ಇವರಲ್ಲಿ ಕೊರೋನಾ ಲಕ್ಷಣಗಳು ಇವರನ್ನು ಹೆಚ್ಚು ಬಾಧಿಸಿಲ್ಲ, ಅಲ್ಲದೇ ತನ್ನ ಆರೋಗ್ಯ ಸುಧಾರಿಸುತ್ತಿದೆ ಎಂದು ಅವರು ತಿಳಿಸಿರುವುದಾಗಿ ಹೇಳಿದ್ದಾರೆ.
ಈಗಾಗಲೇ ಇಲ್ಲಿನ ಸರ್ಕಾರ ಸಾರ್ವಜನಿಕರನ್ನು ಜಾಗೃತೆಯಿಂದಿರಲು ಸೂಚಿಸಿದ್ದು, ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲಿಸುವವಂತೆ ಆದೇಶಿಸಿದೆ.
ಯಾವುದಾದರೂ ಒಂದು ಸಂದರ್ಭದಲ್ಲಿ ಇದು ನಡೆಯುವಂತದ್ದೇ, ಈ ಸಂಬಂಧ ಹೆಚ್ಚಿನ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ. ಇದು ಸಮುದಾಯಕ್ಕೆ ಹರಡುವ ಸೋಂಕು ಅಲ್ಲ. ಅಲ್ಲದೇ ಸೋಂಕಿತ ವ್ಯಕ್ತಿ ಯಾರನ್ನೂ ಭೇಟಿಯಾಗಿಲ್ಲ. ಲಕ್ಷಣಗಳು ಗೋಚರವಾದಾಗಿನಿಂದಲೂ ಅವರು ಪ್ರತ್ಯೇಕವಾಗೇ ಇದ್ದಾರೆ. ಹೀಗಿದ್ದರೂ ಅವರು ಯಾರನ್ನಾದರೂ ಸಂಪರ್ಕಿಸಿದ್ದಲ್ಲಿ, ಅವರನ್ನು ಹುಡುಕಾಡುವ ಪ್ರಯತ್ನ ಮಾಡುತ್ತೇವೆ. ಅಲ್ಲದೇ ಸೋಂಕು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಅಂತರ ಕಾಪಾಡಿಕೊಳ್ಳಿ ಎಂದು ಸ್ಟೀವ್ ತಿಳಿಸಿದ್ದಾರೆ.
ಈವರಗೂ ಲೋಗನ್‌ನಲ್ಲಿ ಒಟ್ಟು 16 ಮಂದಿಗೆ ಕೊರೋನಾ ವೈರಸ್ ಪರೀಕ್ಷೆ ನಡೆಸಲಾಗಿದೆ.
ಕೊರೋನಾ ಕೇಂದ್ರ ವುಹಾನ್ ಸಂಪೂರ್ಣ ಗುಣಮುಖ, ಏ.8ಕ್ಕೆ ಲಾಕ್‌ಡೌನ್ ಅಂತ್ಯ!
ಎಲ್ಲಿದೆ ಈ ಪುಟ್ಟ ರಾಷ್ಟ್ರ?
ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಈ ಪುಟ್ಟ ದೇಶ ಲೋಗನ್‌ನ ಜನಸಂಖ್ಯೆ ಕೇವಲ 45,858. ಇನ್ನು 1,210 ಸ್ಕ್ವೇರ್ ಕಿಲೋ ಮೀಟರ್ ವಿಸ್ತೀರ್ಣವುಳ್ಳ ಈ ದೇಶ ಕೊರೋನಾ ಅಪಾಯವಿಲ್ಲದೇ ನೆಮ್ಮದಿಯಾಗಿತ್ತು. ಆದರೀಗ ಇಲ್ಲಿಗೂ ಈ ಮಹಾಮಾರಿ ಎಂಟ್ರಿ ಕೊಟ್ಟಿದ್ದು, ಸರ್ಕಾರದ ನಿದ್ದೆಗೆಡಿಸಿದೆ.