ಹೆಣಗಳ ರಾಶಿಯೇ ಬಿದ್ದ ಇಟಲಿಯಲ್ಲಿ ಲಾಕ್‌ಡೌನ್‌ ನಂತ್ರ ಕೊರೋನಾ ಪ್ರಕರಣ ಇಳಿಕೆ

By Suvarna NewsFirst Published Mar 26, 2020, 9:41 AM IST
Highlights

ಕೊರೋನಾ ವೈರಸ್‌ ಭೀಕರ ಹಂತಕ್ಕೆ ತಲುಪಿ ಹೆಣಗಳ ರಾಶಿ ಬೀಳುವವರೆಗೂ ಇಟಲಿ ಎಚ್ಚೆತ್ತುಕೊಳ್ಳಲಿಲ್ಲ. ಬಹಳಷ್ಟು ತಡವಾಗಿ ಇಟಲಿಯಲ್ಲಿ ಲಾಕ್‌ಡೌನ್ ಘೋಷಿಸಿದರೂ ಈ ದಿನಗಳಲ್ಲಿ ಅಲ್ಲಿ ಹೊಸ ಕೊರೋನಾ ಪ್ರಕರಣಗಳು ಕಡಿಮೆಯಾಗಿದೆ. ಭಾರತದಲ್ಲಿ ಸ್ವಲ್ಪ ಮುಂಚಿತವಾಗಿಯೇ ಲಾಕ್‌ಡೌನ್ ಮಾಡಲಾಗಿದೆ. ಸ್ವಲ್ಪ ಎಚ್ಚೆತ್ತುಕೊಂಡರೆ ಕೊಂಡರೆ ಕೊರೋನಾ ಎಂಬ ಮಹಾಮಾರಿಯಿಂದ ಭಾರತ ಪಾರಾಗಬಹುದು.

ರೋಮ್‌(ಮಾ.26): ಕೊರೋನಾ ವೈರಸ್‌ ಭೀಕರ ಹಂತಕ್ಕೆ ತಲುಪಿ ಹೆಣಗಳ ರಾಶಿ ಬೀಳುವವರೆಗೂ ಇಟಲಿ ಎಚ್ಚೆತ್ತುಕೊಳ್ಳಲಿಲ್ಲ. ಬಹಳಷ್ಟು ತಡವಾಗಿ ಇಟಲಿಯಲ್ಲಿ ಲಾಕ್‌ಡೌನ್ ಘೋಷಿಸಿದರೂ ಈ ದಿನಗಳಲ್ಲಿ ಅಲ್ಲಿ ಹೊಸ ಕೊರೋನಾ ಪ್ರಕರಣಗಳು ಕಡಿಮೆಯಾಗಿದೆ. ಭಾರತದಲ್ಲಿ ಸ್ವಲ್ಪ ಮುಂಚಿತವಾಗಿಯೇ ಲಾಕ್‌ಡೌನ್ ಮಾಡಲಾಗಿದೆ. ಸ್ವಲ್ಪ ಎಚ್ಚೆತ್ತುಕೊಂಡರೆ ಕೊಂಡರೆ ಕೊರೋನಾ ಎಂಬ ಮಹಾಮಾರಿಯಿಂದ ಭಾರತ ಪಾರಾಗಬಹುದು.

ಇಟಲಿಯಲ್ಲಿ ಎರಡು ವಾರ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದ ನಂತರ ಹೊಸ ಕೊರೋನಾ ಪ್ರಕರಣಗಳು ಕಡಿಮೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಹೊಸ ಪ್ರಕರಣ ಹಾಗೂ ಮರಣ ಪ್ರಕರಣಗಳೂ ಕಡಿಮೆಯಾಗಿದೆ ಎಂದು ಇಟಲಿಯ ವೈದ್ಯಾಧಿಕಾರಿಗಳು ವರದಿ ಮಾಡಿದ್ದಾರೆ.

ಕೊರೋನಾ ವೈರಸ್ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಟಲಿಯಲ್ಲಿ ಮಾರ್ಚ್ 9ರಿಂದ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿತ್ತು. ಭಾನುವಾರ ಹಾಗೂ ಸೋಮವಾರ 997ರಷ್ಟು ಹೊಸ ಕೊರೋನಾ ಪ್ರಕರಣಗಳು ಇಳಿಕೆಯಾಗಿದೆ. 6,557 ರಿಂದ 5,560 ರಷ್ಟು ಪ್ರಕರಣಗಳು ಕಡಿಮೆಯಾಗಿದ್ದು, ಲಾಕ್‌ಡೌನ್‌ ನಂತವೇ.

ಇಟಲಿಯಲ್ಲಿ ಮೊದಲು ಕೊರೋನಾ ಕಾಣಿಸಿಕೊಂಡ ಉತ್ತರ ಇಟಲಿಯ ಲೊಂಬಾರ್ಡಿಯಲ್ಲಿ ಕೊರೋನಾ ವೈರಸ್‌ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು  9,266 ರಿಂದ 9,439 ಕಡಿಮೆಯಾಗಿದೆ.

ಇಂದು ಮೊದಲ ಪಾಸಿಟಿವ್ ಡೇ ಎಂದು ಅಲ್ಲಿನ ಪ್ರಮುಖ ವೈದ್ಯಾಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಸಂಭ್ರಮಿಸುವ ಸಮಯವಲ್ಲ, ಕತ್ತಲಿನ ಸುರಂಗದಲ್ಲಿ ಕೊನೆಗೂ ಬೆಳಕನ್ನು ಕಂಡಿದ್ದೇವೆ ಎಂದು ಅವರು ವಿಶೇಷಿಸಿದ್ದಾರೆ.

ಯುಗಾದಿ ದಿನ ಚಾಮುಂಡೇಶ್ವರಿಗೆ ಭಕ್ತೆಯ ವಿಶೇಷ ಪ್ರಾರ್ಥನೆ, ವೈರಲ್ ಆಯ್ತು ವಿಡಿಯೋ

ಇಡೀ ವಿಶ್ವದಲ್ಲೇ ಇಟಲಿ ಕೊರೋನಾ ವೈರಸ್‌ನಿಂದ ಬಹಳಷ್ಟು ನರಳಿದ ರಾಷ್ಟ್ರ ಇಟಲಿ. ಕೊರೋನಾ ಹುಟ್ಟಿಕೊಂಡ ಚೀನಾದಲ್ಲಿ ಆದ ಸಾವುಗಳ ದುಪ್ಪಟ್ಟು ಸಾವು ಇಟಲಿಯಲ್ಲಿ ಸಂಭವಿಸಿದೆ. ಚೀನಾದಲ್ಲಿ 3,277 ಸಾವಾಗಿದ್ದರೆ, ಇಟಲಿಯಲ್ಲಿ 6,077 ಸಾವು ಸಂಭವಿಸಿದೆ.

ವೆಂಟಿಲೇಟರ್‌ಗಳ ಕೊರತೆಯಿಂದಾಗಿ ವೈದ್ಯರು ಬದುಕುವ ಸಾಧ್ಯತೆ ಇರುವ ರೋಗಿಗೆ ಆದ್ಯತೆ ನೀಡುವ ಪರಿಸ್ಥಿತಿ ಇಟಲಿಯಲ್ಲಿದೆ. ಅದೃಷ್ಟವಶಾತ್ ಇಲ್ಲಿಯವರೆಗೆ ರೋಗಿಯನ್ನು ಆಯ್ಕೆ ಮಾಡುವ ಕಷ್ಟದ ಸ್ಥಿತಿ ನನಗೆ ಬರಲಿಲ್ಲ. ಮುಖ್ಯವಾಗಿ ಅಂತಹ ಪರಿಸ್ಥಿತಿ ಯಾವ ವೈದ್ಯರಿಗೂ ಬಾರದಿರಲಿ. ಯಾರು ಬದುಕಬೇಕು, ದೇವರ ಹಾಗೆ ಯಾರು ಸಾಯಬೇಕು ಎಂದು ನಿರ್ಧರಿಸುವ ಸ್ಥಿತಿ ಯಾರಿಗೂ ಬೇಡ ಎಂದು ನಿಟ್ಟುಸಿರು ಬಿಡುತ್ತಾರೆ ಲೊಂಬಾರ್ಡಿಯ ವೈದ್ಯ.

click me!