ಏಷ್ಯಾದ ಈ ರಾಷ್ಟ್ರದಲ್ಲಿ ಫಲ ಕೊಡ್ತಿದೆ ಕೊರೋನಾ ನಿಯಂತ್ರಣ ಕ್ರಮ!

By Suvarna News  |  First Published Mar 26, 2020, 1:04 PM IST

ಕೊರೋನಾ ವಿರುದ್ಧ ಹೋರಾಡುತ್ತಿವೆ ಜಗತ್ತಿನ ಎಲ್ಲಾ ರಾಷ್ಟ್ರಗಳು| ಚೀನಾದ ನೆರೆ ರಾಷ್ಟ್ರದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಇಳಿಮುಖ| ಫಲ ಕೊಡುತ್ತಿದೆ ಸರ್ಕಾರದ ಈ ಕ್ರಮ


ಹನೋಯ್(ಮಾ.26): ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೋನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಹುತೇಕ ಎಲ್ಲಾ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ವಹಿಸುತ್ತಿವೆ. ಭಾರತ 21 ದಿನಗಳ ಸಂಪೂರ್ಣ ಲಾಕ್‌ಡೌನ್ ಆಗಿದೆ. ನಾನಾ ರಾಷ್ಟ್ರಗಳು ಇದನ್ನು ಹೊಡೆದೋಡಿಸುವ ಲಸಿಕೆ, ಔಷಧ ಹುಡುಕಾಡುವ ಯತ್ನದಲ್ಲಿದ್ದಾರೆ. ಹೀಗಿರುವಾಗ ಏಷ್ಯಾ ಖಂಡದ ಅದರಲ್ಲೂ ವಿಶೇಷವಾಗಿ ಚೀನಾದ ನೆರೆ ರಾಷ್ಟ್ರದಲ್ಲಿ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮ ಫಲ ಕೊಡುತ್ತಿದೆ. 

ಹೌದು ಚೀನಾ ನೆರೆ ರಾಷ್ಟ್ರ ವಿಯೆಟ್ನಾಂನಲ್ಲಿ ಈವರೆಗೆ 148 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಹೀಗಿದ್ದರೂ ಸರ್ಕಾರ ವಹಿಸಿರುವ ಕ್ರಮದಿಂದ ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅಲ್ಲದೇ ಇವರಲ್ಲಿ 17 ಮಂದಿ ಸಂಪೂರ್ಣ ಗುಣಮುಖರಾಗಿ ತಮ್ಮ ಮನೆ ಸೇರಿದ್ದಾರೆ. ಇನ್ನು ಇಲ್ಲಿ ಈವರೆಗೆ ಕೊರೋನಾದಿಂದಾಗಿ ಸಾವು ಸಂಭವಿಸಿಲ್ಲ ಎಂಬುವುದು ಮತ್ತೊಂದು ಖುಷಿಯ ವಿಚಾರ. ಅಲ್ಲದೇ ಇಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಲಾರಂಭಿಸಿದೆ. 

Latest Videos

undefined

ಅಪ್ಪಾ.. ಹೊರಗೋಗ್ಬೇಡಾ ಕೊರೋನಾವಿದೆ: ಪೊಲೀಸಪ್ಪ ಮಗಳ ಮಾತ ಕೇಳಿಯೊಮ್ಮೆ!

ಇನ್ನು 1,643 ಮಂದಿ ಕೊರೋನಾ ಶಂಕಿತರಿದ್ದು, ಈ ಸಂಬಂಧ ಸುಮಾರು 45,000 ಮಂದಿಯ ಮೇಲೆ ವಿಶೇಷ ನಿಗಾ ಇಡಲಾಗಿದೆ. ಇವರನ್ನು ಪ್ರತ್ಯೇಕವಾಗಿರಿಸಲಾಗಿದ್ದು, ವೈದ್ಯಕೀಯ ಸಿಬ್ಬಂದಿ ಕಾಳಜಿ ವಹಿಸುತ್ತಿದ್ದಾರೆ. 

ಇನ್ನು ಫೆಬಬ್ರವರಿ 13ರಂದು ಇಲ್ಲಿ ಮೊದಲ ಕೊರೋನಾ ಪ್ರಕರಣ ವರದಿಯಾಗಿತ್ತು. ವುಹಾನ್‌ನಿಂದ ಮರಳಿದ್ದ ವ್ಯಕ್ತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಎಚ್ಚೆತ್ತಿದ್ದ ಸರ್ಕಾರ ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮ ವಹಿಸಿತ್ತು. ಸೋಂಕಿತ ವ್ಯಕ್ತಿ ಭೇಟಿಯಾದವರನ್ನೆಲ್ಲಾ ಪತ್ತೆ ಹಚ್ಚಿ ನಿಗಾ ಇರಿಸಿತ್ತು. ಇದರ ಪರಿಣಾಮವಾಗಿ 16 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಕೂಡಲೇ ಇವರಿಗೆ ಚಿಕಿತ್ಸೆ ಆರಂಭಿಸಲಾಗಿತ್ತು. ಹೀಗಾಗಿ ಫೆ. 26 ರಂದು ಎಲ್ಲರೂ ಗುಣಮುಖರಾಗಿ ಮನೆ ಸೇರಿದ್ದರು. 

ನೆಮ್ಮದಿಯಾಗಿದ್ದ ಈ ಪುಟ್ಟ ರಾಷ್ಟ್ರಕ್ಕೂ ಲಗ್ಗೆಯಿಟ್ಟ ಕೊರೋನಾ: ದಾಖಲಾಯ್ತು ಮೊದಲ ಪ್ರಕರಣ!

ಕೈಗೊಂಡ ಕ್ರಮವೇನು?

ಆದರೆ ಇದಾದ ಬಳಿಕ ಮತ್ತೆ ಇಲ್ಲಿ ಸೋಂಕು ಕಾಣಿಸಿಕೊಂಡಿದ್ದು,, ಸರ್ಕಾರ ಮತ್ತಷ್ಟು ಕಠಿಣ ಕ್ರಮ ವಹಿಸಿತ್ತು ಹಾಗೂ ಪೀಡಿತರಿಗೆ ಪರಿಣಾಮಕಾರಿ ಚಿಕಿತ್ಸೆ ಆರಂಭಿಸಿತ್ತು. ಅಲ್ಲದೇ ಕೊರೋನಾ ಬಾಧಿತ ವಿಶ್ವದ ಯಾವುದೇ ರಾಷ್ಟ್ರಗಳಿಗೆ ಭೇಟಿ ನೀಡದಂತೆ ತನ್ನ ನಾಗರಿಕರಿಗೆ ಆದೇಶಿಸಿತ್ತು. ವಿದೇಶದಿಂದ ಬಂದವರಿಗೆ 14 ದಿನ ಕ್ವಾರಂಟೈನ್‌ನಲ್ಲಿ ಇರುವುದು ಖಡ್ಡಾಯ ಮಾಡಿತ್ತು.

click me!