ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಿದ ಯುವಕರ ತಂಡ| ಪೊಲೀಸರಷ್ಟೇ ಅಲ್ಲ ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೂ ಕೂಡ ಊಟದ ವ್ಯವಸ್ಥೆ| ಸಾಯಿ ಸುಜನ್ ಪ್ರಿಂಟರ್ಸ್‌ನ ಸಿಬ್ಬಂದಿ ಊಟದ ವ್ಯವಸ್ಥೆ|
ಹಾವೇರಿ(ಮಾ.26): ಕೊರೋನಾ ವೈರಸ್ ತಡೆಗಟ್ಟಲು ಇಡೀ ದೇಶವೇ ಏಪ್ರಿಲ್ 14 ರ ವರೆಗೆ ಲಾಕ್‌ಡೌನ್‌ನಲ್ಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಮನೆಯಿಂದ ಹೊರಗಡೆ ಬಾರದಂತೆ ದಿನದ 24 ಗಂಟೆಯೂ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ, ಹೀಗೆ ಕೆಲಸ ಮಾಡುವ ಪೊಲೀಸರಿಗೆ ನಗರದ ಸಾಯಿ ಸುಜನ್ ಪ್ರಿಂಟರ್ಸ್‌ನ ಸಿಬ್ಬಂದಿ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ. ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ರಿಗೆ ಊಟದ ವ್ಯವಸ್ಥೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊರೋನಾ ಪಾಸಿಟಿವ್ ವ್ಯಕ್ತಿಯ ಹೆಸರಿಗೆ ಪತ್ರಕರ್ತನ ಫೋಟೋ: ಇಬ್ಬರ ಬಂಧನ
ಪೊಲೀಸರಷ್ಟೇ ಅಲ್ಲ ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೂ ಕೂಡ ಊಟದ ವ್ಯವಸ್ಥೆ ಮಾಡಿದ್ದಾರೆ. ಇವರೆಲ್ಲರೂ ನಮ್ಮೆಲಲ್ರ ಸುರಕ್ಷತೆಗಾಗಿ ದಿನವಿಡೀ ಕೆಲಸ ಮಾಡುತ್ತಾರೆ. ಹೀಗಾಗಿ ಇಂತವರಿಗೆ ಆಹಾರದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯುವಕರ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳೂ ಕುಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.