ಕೊರೋನಾ ಹೋಂ ಕ್ವಾರೆಂಟೈನ್ ಉಲ್ಲಂಘಿಸಿ ಕ್ರಿಕೆಟ್ ಆಡಿದವರ ವಿರುದ್ಧ FIR

By Suvarna NewsFirst Published Mar 26, 2020, 4:03 PM IST
Highlights

ಕೊರೋನಾ ಹಬ್ಬುತ್ತೆ ಮನೇಲಿರಿ ಅಂತ ಹೋಂ ಕ್ವಾರೆಂಟೈನ್ ಹಾಕಿದ್ರೆ ಹೊರಗೆ ಬಂದು ಕ್ರಿಕೆಟ್ ಆಡಿದ ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ(ಮಾ.26): ಕೊರೋನಾ ಹಬ್ಬುತ್ತೆ ಮನೇಲಿರಿ ಅಂತ ಹೋಂ ಕ್ವಾರೆಂಟೈನ್ ಹಾಕಿದ್ರೆ ಹೊರಗೆ ಬಂದು ಕ್ರಿಕೆಟ್ ಆಡಿದ ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಹೋಂ ಕ್ವಾರೆಂಟೈನ್ ಆದೇಶ ಉಲ್ಲಂಘಿಸಿ ಮನೆಯಲ್ಲಿರದೆ, ಹೊರಗಡೆ ಸುತ್ತಾಡಿ ಮತ್ತು ಕ್ರಿಕೆಟ್‌ ಆಡಿದವರ ವಿರುದ್ಧ ಮಾಳೂರು ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

ಕೊರೋನಾ ವೈರಸ್‌ ಕಾಟಕ್ಕಿಂತ ಸುಳ್ಳು ಸುದ್ದಿ ಕಾಟವೇ ಹೆಚ್ಚು!

ದೇಶಾದ್ಯಂತ Covid-19 ವೈರಾಣು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ವೈರಾಣು ಬಾಧಿತ ದೇಶದಿಂದ ಭಾರತಕ್ಕೆ ಹಿಂದಿರುಗುವ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ 14 ದಿನಗಳು ಯಾರ ಸಂಪರ್ಕಕ್ಕೂ ಬಾರದೆ, ಮನೆಯಲ್ಲಿಯೇ ಉಳಿಯಬೇಕೆಂಬ ಆದೇಶವನ್ನು ಉಲ್ಲಂಘಿಸಲಾಗಿದೆ.

ತೀರ್ಥಹಳ್ಳಿ  ತಾಲೂಕು ಆರೋಗ್ಯಾಧಿಕಾರಿ ಜಗದೀಶ್,  ತೀರ್ಥಹಳ್ಳಿ ಸಿಪಿಐ  ಗಣೇಶಪ್ಪ ಹೋಂ ಕ್ವಾರೆಂಟೈನ್‌ನಲ್ಲಿರುವವರನ್ನು ಚೆಕ್‌ ಮಾಡುವಾಗ ಪ್ರಕರಣ ಬೆಳಕಿಗೆ ಬಂದಿದೆ. ಇದೇ 12 ರಂದು ಅಬುದಾಬಿಯಿಂದ ಸ್ವ-ಗ್ರಾಮ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿಗೆ ಹಿಂದಿರುಗಿ ಬಂದಿದ್ದವರ ಮೇಲೆ ಕೇಸ್ ದಾಖಲಾಗಿದೆ.

ಕೊರೋನಾ ಆತಂಕ: ಫೇಸ್‌ಬುಕ್‌ನಲ್ಲಿ ಫೇಕ್‌ ಸುದ್ದಿ ಹರಿಬಿಟ್ಟವನ ವಿರುದ್ಧ ಕೇಸ್‌!

ಮಹಮ್ಮದ್‌ ಸುಯಬ್‌ ಖಾನ್ ಬಿನ್ ಮಸ್ತಾನ್ ಖಾನ್ (30) ಹಾಗೂ ಮಹಮ್ಮದ್‌ ಹುಸೇನ್ ಖಾನ್ ಬಿನ್ ಮಸ್ತಾನ್ ಖಾನ್ (28)  ಆದೇಶವನ್ನು ಉಲ್ಲಂಘಿಸಿ ಮನೆಯಿಂದ ಹೊರಬಂದು ಸುತ್ತಾಡಿ ಕ್ರಿಕೆಟ್ ಆಡಿದ್ದಾರೆ. ಹೋಂ ಕ್ವಾರೆಂಟೈನ್‌ನಲ್ಲಿ ಹೊರಗೆ ಹೋಗಲು ಅವಕಾಶ ನೀಡಿದ ಪೋಷಕರಾದ ಮಸ್ತಾನ್‌ ಖಾನ್‌ ( 65 ) ಹಾಗೂ ಖತೀಜಾ ಬೀ (56 ) ರವರುಗಳ ವಿರುದ್ದ ಕೂಡ ಕೇಸ್ ದಾಖಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸ್‌ ಠಾಣೆ ಗುನ್ನೆ ನಂ 38/2020 ಕಲಂ 188, 269, 270, 271 ಐಪಿಸಿ ರೀತಿ ಪ್ರಕರಣ  ದಾಖಲಿಸಲಾಗಿದ್ದು, ಇಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಕೊವಿಡ್ ಚಿಕಿತ್ಸಾ ವಾರ್ಡ್ ನಲ್ಲಿ ದಾಖಲಿಸಲಾಗಿದೆ.

click me!