ಹಸುಗಳಿಗೂ ತಟ್ಟಿದ ಲಾಕ್‌ಡೌನ್‌ ಬಿಸಿ: ಮೂಕ ಪ್ರಾಣಿಗಳ ಹಸಿವು ನೀಗಿಸಲು ಮೇವು ಪೂರೈಕೆ

Kannadaprabha News   | Asianet News
Published : Apr 02, 2020, 09:19 AM IST
ಹಸುಗಳಿಗೂ ತಟ್ಟಿದ ಲಾಕ್‌ಡೌನ್‌ ಬಿಸಿ: ಮೂಕ ಪ್ರಾಣಿಗಳ ಹಸಿವು ನೀಗಿಸಲು ಮೇವು ಪೂರೈಕೆ

ಸಾರಾಂಶ

ಗೋಶಾಲೆಗೆ ಉಚಿತವಾಗಿ ಮೇವು ಪೂರೈಕೆ| ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಇನಾಂಲಕ್ಮಾಪುರ ಗ್ರಾಮದ ವಿಶ್ವಹಿಂದು ಪರಿಷತ್‌ ಗೋಶಾಲೆಗೆ ಒಣ ಮೇವು ರವಾನೆ|ರೈತರು ಹಾಗೂ ಸ್ಥಿತಿವಂತರು ಗೋವುಗಳಿಗೆ ಅವಶ್ಯವಾಗಿರುವ ಮೇವು ನೀಡಲು ಮುಂದಾಗಬೇಕು|

ಸವಣೂರು(ಏ.02): ಮಹಾಮಾರಿ ಕೊರೋನಾ ವೈರಸ್‌ ತಡೆಗಟ್ಟಲು ಸಾಕಷ್ಟು ಕಟ್ಟಳತೆಯಿಂದ ರಾಜ್ಯವನ್ನು ಲಾಕ್‌ ಡೌನ್‌ ಘೋಷಣೆಯ ಹಿನ್ನಲೆಯಲ್ಲಿ ಆಹಾರಕ್ಕಾಗಿ ಜನರೊಂದಿಗೆ ಹಸುಗಳು ಸಹ ಪರದಾಡುವಂತಾಗಿರುವ ಕಾರಣ ಹಾನಗಲ್ಲ ತಾಲೂಕಿನ ಇನಾಂಲಕ್ಮಾಪುರ ಗ್ರಾಮದ ವಿಶ್ವಹಿಂದು ಪರಿಷತ್‌ ಗೋಶಾಲೆಗೆ ಬುಧವಾರ ಸವಣೂರಿನಿಂದ ಒಂದು ಲೋಡ್‌ (ಟ್ರಾಕ್ಟರ್‌) ಒಣ ಮೇವು ಕಳುಹಿಸಲಾಯಿತು.

ಪಟ್ಟಣದ ಸವಣೂರ ಶಿವಲಾಲ ಖಾರಾ ಮಾಲೀಕ ಜಯಂತ ಕೋಟಕ್‌ ಅವರು ರೈತರಿಂದ ಖರೀದಿಸಿ ನೀಡಿದ ಒಂದು ಟ್ರಾಕ್ಟರ್‌ ಒಣ ಮೇವನ್ನು ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳು ತಾಲೂಕು ಆಡಳಿತ ಪರವಾನಗಿಯನ್ನು ಪಡೆದು ಉಚಿತವಾಗಿ ಕಳುಹಿಸಿದ್ದಾರೆ. 

ಭಾರತ್‌ ಲಾಕ್‌ಡೌನ್‌: 'ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ, ಊಟದ ವ್ಯವಸ್ಥೆ'

ಹಾನಗಲ್ಲ ತಾಲೂಕಿನ ಇನಾಂಲಕ್ಮಾಪುರ ಗ್ರಾಮದ ವಿಶ್ವಹಿಂದು ಪರಿಷತ್‌(ಭಾರತೀಯ ಗೋವಂಶ ರಕ್ಷಣ ಸಂವರ್ದನ ಪರಿಷದ್‌) ಗೋಶಾಲೆಯಲ್ಲಿರುವ ಹಸುಗಳಿಗೆ ಮೇವಿನ ಅವಶ್ಯಕತೆ ಇದೆ. ಆದ್ದರಿಂದ, ರೈತರು ಹಾಗೂ ಸ್ಥಿತಿವಂತರು ಗೋವುಗಳಿಗೆ ಅವಶ್ಯವಾಗಿರುವ ಮೇವು ನೀಡಲು ಮುಂದಾಗಬೇಕು ಎಂದು ಮನವಿಯನ್ನು ಮಾಡಿಕೊಂಡರು.

ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳಾದ ಜೆಸಿ ಗಣೇಶಗೌಡ ಪಾಟೀಲ, ಆನಂದ ಮತ್ತಿಗಟ್ಟಿ, ಹಯಾತಖಾನ್‌ ಸೌದಾಗರ, ಶಕೀಲ್‌ ಖಾನಜಾದೆ ಸೇರಿದಂತೆ ರೈತರು ಇದ್ದರು.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?