ಕೊರೋನಾ ಆತಂಕ: 'ಜಮಾತ್‌ ಸಭೆಯಲ್ಲಿ ಭಾಗಿಯಾಗಿದ್ದ ಗಂಗಾವತಿ ವ್ಯಕ್ತಿಗೆ ಸೋಂಕು ಇಲ್ಲ'

Kannadaprabha News   | Asianet News
Published : Apr 02, 2020, 09:04 AM IST
ಕೊರೋನಾ ಆತಂಕ: 'ಜಮಾತ್‌ ಸಭೆಯಲ್ಲಿ ಭಾಗಿಯಾಗಿದ್ದ ಗಂಗಾವತಿ ವ್ಯಕ್ತಿಗೆ ಸೋಂಕು ಇಲ್ಲ'

ಸಾರಾಂಶ

ಹಜರತ್‌ ನಿಜಾಮುದ್ದೀನ್‌ ದರ್ಗಾ ತಬ್ಲಿಘಿ ಜಮಾತ್‌ ಪ್ರವಚನ ಸಭೆ| ಧರ್ಮಸಭೆಯಲ್ಲಿ ಭಾಗವಹಿಸಿದ್ದ ಗಂಗಾವತಿ ತಾಲೂಕಿನ ವ್ಯಕ್ತಿಗೆ ಕೊರೋನಾ ಸೋಂಕು ಇಲ್ಲ| ವ್ಯಕ್ತಿಯ ಮೇಲೆ ನಿಗಾ ವಹಿಸಿದ ಆರೋಗ್ಯ ಇಲಾಖೆ| 

ಗಂಗಾವತಿ(ಏ.02): ದೆಹಲಿಯಲ್ಲಿ ಈಚೆಗೆ ಜರುಗಿದ ಹಜರತ್‌ ನಿಜಾಮುದ್ದೀನ್‌ ದರ್ಗಾ ತಬ್ಲಿಘಿ ಜಮಾತ್‌ ಪ್ರವಚನ ಸಭೆಯಲ್ಲಿ ಭಾಗವಹಿಸಿದ್ದ ಗಂಗಾವತಿ ತಾಲೂಕಿನ ಸಿದ್ಧಾಪುರ ಗ್ರಾಮದ ಭಾಷ (30) ಎನ್ನುವ ವ್ಯಕ್ತಿಗೆ ಕೊರೋನಾ ವೈರಸ್‌ ಲಕ್ಷಣಗಳು ಇಲ್ಲ ಎಂದು ಇಲ್ಲಿಯ ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಪ್ಪ ಚೆಕೋಟಿ ದೃಢಪಡಿಸಿದ್ದಾರೆ.

ಸಿದ್ಧಾಪುರ ಭಾಷ ಎನ್ನುವ ವ್ಯಕ್ತಿ ಶ್ರೀರಾಮನರದಲ್ಲಿ ದನದ ವ್ಯಾಪಾರಿಯಾಗಿದ್ದು, ಈತನು ದೆಹಲಿಯಲ್ಲಿ ನಡೆದ ಪ್ರವಚನ ಸಭೆಯಲ್ಲಿ ಭಾಗವಹಿಸಿದ್ದ. 14 ದಿನದ ನಂತರ ಮಾಹಿತಿ ಬಂದಿದ್ದರಿಂದ ಭಾಷನನ್ನು ಪೊಲೀಸರು ವಿಚಾರಣೆ ನಡೆಸಿ ಬುಧವಾರ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಯಾವುದೇ ರೀತಿಯ ಕೊರೋನಾ ಸೋಂಕು ಲಕ್ಷಣಗಳು ಇಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.

ಕೊರೋನಾ ಮಧ್ಯೆಯೂ ಧರ್ಮಸಭೆ: ದೆಹಲಿ ನಿಜಾಮುದ್ದೀನ್‌ ವ್ಯಾಪ್ತಿಯಲ್ಲಿ ಕೊಪ್ಪಳದ 14 ಜನ

ಆದರೂ ಭಾಷಾನನ್ನು ಮನೆಯಿಂದ ಹೊರಗೆ ಬಾರದಂತೆ ನಿಗಾವಹಿಸಲಾಗಿದೆ ಎಂದು ತಹಸೀಲ್ದಾರ ಎಲ್‌.ಡಿ. ಚಂದ್ರಕಾಂತ್‌ ತಿಳಿಸಿದ್ದಾರೆ.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?