ಕೊರೋನಾ ಭೀತಿ: ಹೊಸಪೇಟೆ 5 ಕಿಮೀ ವ್ಯಾಪ್ತಿಯಲ್ಲಿ ವಾಹನ ಓಡಾಟ ನಿರ್ಬಂಧ

Kannadaprabha News   | Asianet News
Published : Apr 04, 2020, 10:20 AM IST
ಕೊರೋನಾ ಭೀತಿ: ಹೊಸಪೇಟೆ 5 ಕಿಮೀ ವ್ಯಾಪ್ತಿಯಲ್ಲಿ ವಾಹನ ಓಡಾಟ ನಿರ್ಬಂಧ

ಸಾರಾಂಶ

ಹೊಸಪೇಟೆಯ ಎಸ್‌.ಆರ್‌. ನಗರ ಪ್ರದೇಶವನ್ನು ಸೋಂಕು ಪೀಡಿತ ಪ್ರದೇಶ ಎಂದು ಪರಿಗಣನೆ| ಹೊಸಪೇಟೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ವಾಹನಗಳ ಓಡಾಟ ನಿರ್ಬಂಧ| ಸೋಂಕಿತರ 11 ಸಂಬಂಧಿಕರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ| ಸೋಂಕಿತರಿಂದ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಜನ ಹಾಗೂ 120 ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ|

ಹೊಸಪೇಟೆ(ಏ.04): ಕೊರೋನಾ 3 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿರುವ ಹೊಸಪೇಟೆಯ ಎಸ್‌.ಆರ್‌. ನಗರ ಪ್ರದೇಶವನ್ನು ಸೋಂಕು ಪೀಡಿತ ಪ್ರದೇಶ (ಕಂಟೈನ್ಮೆಂಟ್‌ ಝೋನ್‌)ಎಂದು ಪರಿಗಣಿಸಿದ್ದು, ಇದರ ಜೊತೆಗೆ 5 ಕಿ.ಮೀ ವ್ಯಾಪ್ತಿಯಲ್ಲಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಅಗತ್ಯ ದಿನನಿತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 8ರಿಂದ 10ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸಹಾಯಕ ಆಯುಕ್ತರಾದ ಶೇಖ್‌ ತನ್ವೀರ್‌ ಆಸೀಫ್‌ ತಿಳಿಸಿದ್ದಾರೆ. 

ನಗರದ ಡಿವೈಎಸ್ಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕೊರೋನಾ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

145 ಜನರಿಗೆ ತಪಾಸಣೆ:

ಹೊಸಪೇಟೆಯಲ್ಲಿ ಪತ್ತೆಯಾಗಿರುವ ಪ್ರಕರಣಗಳ ಸಂಚಾರದ ಮಾಹಿತಿಯನ್ನು ಆರೋಗ್ಯ ಇಲಾಖೆಯ ತಂಡಗಳು ಪಡೆಯುತ್ತಿದ್ದು, ಈಗಾಗಲೇ ಸೋಂಕಿತರ 11 ಸಂಬಂಧಿಕರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಸೋಂಕಿತರಿಂದ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಜನ ಹಾಗೂ 120 ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ ಎಂದರು.

ಭಾರತ್‌ ಲಾಕ್‌ಡೌನ್‌ ಎಫೆಕ್ಟ್‌: ಮದ್ಯವ್ಯಸನದಿಂದ ಖಿನ್ನತೆ; ವ್ಯಕ್ತಿ ಸಾವು

ಕೊರೋನಾ ಲಕ್ಷಣ ಹೊಂದಿದವರನ್ನು ಐಸೋಲೇಷನ್‌ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಲಕ್ಷಣ ಇಲ್ಲದವರನ್ನು ಗೃಹಬಂಧನದಲ್ಲಿರಿಸಲಾಗಿದೆ. ನಗರಸಭೆ ವತಿಯಿಂದ ಪ್ರತಿದಿನ 4-5 ಕಿಮೀ ರಸ್ತೆಗಳಿಗೆ ಡಿಸ್‌ ಇನ್ಫೆಕ್ಷನ್‌ ಮತ್ತು ಹೈಪೊಫ್ಲೊರೈಡ್‌ ಔಷಧಿ ಸಿಂಪರಣೆ ಕಾರ್ಯ ಮಾಡಲಾಗುತ್ತಿದೆ. ಮನೆ- ಮನೆಗೆ ಆರೋಗ್ಯ ಸಮೀಕ್ಷೆ ನಡೆಸಲು 209 ತಂಡವನ್ನು ರಚಿಸಲಾಗಿದೆ. ಪ್ರತಿ ತಂಡಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಪ್ರತಿ 15 ತಂಡಗಳಿಗೆ ಒಬ್ಬ ವೈದ್ಯರನ್ನು ನೇಮಿಸಲಾಗಿದ್ದು ಸಮೀಕ್ಷೆ ಹಾಗೂ ತಪಾಸಣೆಯಲ್ಲಿ ಗೊಂದಲಗಳಿದ್ದರೆ ಸೂಕ್ತ ಸಲಹೆಗಳನ್ನು ನೀಡಲಾಗುತ್ತದೆ ಎಂದರು.

ತಾಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆದಿದ್ದು 08394-224208ಗೆ ಯಾವುದೇ ಮಾಹಿತಿಯನ್ನು ಹಾಗೂ ತಮ್ಮ ಅನುಮಾನಗಳಿದ್ದರೆ ಪರಿಹರಿಸಿಕೊಳ್ಳಬಹುದು. ನಗರದಲ್ಲಿ ಅನಗತ್ಯವಾಗಿ ಸಂಚರಿಸಲಾಗುತ್ತಿದ್ದ 250 ಬೈಕ್‌ಗಳನ್ನು ಇದುವರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ರಘುಕುಮಾರ್‌ ತಿಳಿಸಿದರು.

ತಹಸೀಲ್ದಾರ್‌ ವಿಶ್ವನಾಥ್‌, ನಗರಸಭೆ ಆಯುಕ್ತೆ ಜಯಲಕ್ಷ್ಮೀ, ಸರ್ಜನ್‌ ಡಾ. ಸಲೀಂ ಸೇರಿದಂತೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಂದ್ರ, ಪರಮೇಶ್‌ ಇದ್ದರು.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?