ಭಾರತ್‌ ಲಾಕ್‌ಡೌನ್‌ ಎಫೆಕ್ಟ್‌: ಮದ್ಯವ್ಯಸನದಿಂದ ಖಿನ್ನತೆ; ವ್ಯಕ್ತಿ ಸಾವು

By Kannadaprabha News  |  First Published Apr 4, 2020, 10:08 AM IST

ಮದ್ಯ ಸಿಗದಿದ್ದಕ್ಕೆ ವ್ಯಕ್ತಿ ಸಾವು| ಬಳ್ಳಾರಿಯಲ್ಲಿ ನಡೆದ ಘಟನೆ| ಮದ್ಯ ಸಿಗದೆ ಹಿನೆನಲೆಯಲ್ಲಿ ಊಟ, ಉಪಾಹಾರ ತ್ಯಜಿಸಿದ್ದ ಮೃತ ವ್ಯಕ್ತಿ| ಮದ್ಯವ್ಯಸನದಿಂದ ಈತ ಮೃತಪಟ್ಟಿರಬಹುದು ಎಂಬ ಪೊಲೀಸರ ಶಂಕೆ| 


ಬಳ್ಳಾರಿ(ಏ.04): ಮದ್ಯವ್ಯಸನಿಯೊಬ್ಬ ಖಿನ್ನತೆಯಿಂದ ಮೃತಪಟ್ಟ ಘಟನೆ ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಬಳಿ ಸಂಭವಿಸಿದೆ. ಮೃತನು ತೆಕ್ಕಲಕೋಟೆ ಗ್ರಾಮದ ನಿವಾಸಿ ಶಶಿಧರ (43) ಎಂದು ತಿಳಿದು ಬಂದಿದೆ. 

ಯುಗಾದಿ ಹಬ್ಬಕ್ಕಾಗಿ ಶಶಿಧರ್‌ ಬಳ್ಳಾರಿಯ ಸಂಬಂಧಿಕರ ಮನೆಗೆ ಬಂದಿದ್ದ. ಲಾಕ್‌ಡೌನ್‌ ಆಗುತ್ತಿದ್ದಂತೆಯೇ ಮದ್ಯಕ್ಕಾಗಿ ಈತ ಪರಿತಪಿಸುತ್ತಿದ್ದ. ಮದ್ಯ ಸಿಗದೆ ಊಟ, ಉಪಾಹಾರಗಳನ್ನು ತ್ಯಜಿಸಿದ್ದ. ಇದರಿಂದ ಬಳಲಿ ಹೋಗಿದ್ದ ಈತ ಮನೆಯಿಂದ ಹೊರಗಡೆ ಓಡಾಡಿಕೊಂಡಿದ್ದನಂತೆ. 

Tap to resize

Latest Videos

ಮದ್ಯದಂಗಡಿ ಬಿಟ್ಟು ಮಾನಸಿಕ ಆಸ್ಪತ್ರೆಗೆ ವ್ಯಸನಿಗಳ ದೌಡು!

ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಬಳಿ ಶುಕ್ರವಾರ ಶಶಿಧರ್‌ನ ಮೃತದೇಹ ಪತ್ತೆಯಾಗಿದೆ. ಮದ್ಯವ್ಯಸನದಿಂದ ಈತ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹದಲ್ಲಿ ನಾಯಿಗಳು ಕಚ್ಚಿರುವ ಗುರುತುಗಳು ಕಂಡು ಬಂದಿವೆ. ಈ ಸಂಬಂಧ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!
 

click me!