ಎಲುಬಿಲ್ಲದ ನಾಲಿಗೆಯ ಜಮೀರ್‌: ರೇಣುಕಾಚಾರ್ಯ ಆಕ್ರೋಶ

Kannadaprabha News   | Asianet News
Published : Apr 04, 2020, 09:56 AM ISTUpdated : Apr 04, 2020, 04:28 PM IST
ಎಲುಬಿಲ್ಲದ ನಾಲಿಗೆಯ ಜಮೀರ್‌: ರೇಣುಕಾಚಾರ್ಯ ಆಕ್ರೋಶ

ಸಾರಾಂಶ

ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲುಬಿಲ್ಲದ ನಾಲಿಗೆಯ ಜಮೀರ್‌ ಅಹಮ್ಮದ್‌ ನಿನ್ನೆಯೊಂದು, ಇವತ್ತು ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.  

ದಾವಣಗೆರೆ(ಏ.04): ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲುಬಿಲ್ಲದ ನಾಲಿಗೆಯ ಜಮೀರ್‌ ಅಹಮ್ಮದ್‌ ನಿನ್ನೆಯೊಂದು, ಇವತ್ತು ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ಬೆಂಗಳೂರಿನ ಸಾರಾಯಿ ಪಾಳ್ಯದಲ್ಲಿ ನಿನ್ನೆ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಇತರರು ಪೌರತ್ವ ಕಾಯ್ದೆ ವಿಚಾರವಾಗಿ ಜನಸಂಖ್ಯೆ ನೋಂದಣಿಗೆ ಹೋಗಿರಲಿಲ್ಲ. ಯಾರಾರ‍ಯರು ಎಲ್ಲಿಂದ ಬಂದಿದ್ದಾರೆಂಬ ಬಗ್ಗೆ ಹಾಗೂ ಸ್ವಚ್ಛತೆ ಮೂಡಿಸಲು ಹೋಗಿದ್ದರು ಎಂದು ಅವರು ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಕೊರೋನಾ ವಿರುದ್ಧ ಹೋರಾಟ: ಸಿಎಂ ಪರಿಹಾರ ನಿಧಿಗೆ ಸಚಿವ ಪಾಟೀಲ ಒಂದು ವರ್ಷದ ವೇತನ

ಅಲ್ಲದೇ, ಆಶಾ, ಅಂಗನವಾಡಿ, ಅಧಿಕಾರಿ, ಸಿಬ್ಬಂದಿ, ಪೌರ ಕಾರ್ಮಿಕರು, ವೈದ್ಯರು, ಪೊಲೀಸರ ಆತ್ಮಸ್ಥೈರ್ಯ ತುಂಬಿಸುವ ಕೆಲಸ ಮಾಡಿ. ಅದನ್ನು ಬಿಟ್ಟು, ಕ್ಷುಲ್ಲಕ ಮಾತುಗಳನ್ನಾಡಿದರೆ ಅದು ದೇಶದ್ರೋಹ ಎಂಬುದಾಗಿ ಜಮೀರ್‌ ಅಹಮ್ಮದ್‌ಗೆ ವೀಡಿಯೋ ಸಂದೇಶದಲ್ಲಿ ರೇಣುಕಾಚಾರ್ಯ ನೀತಿಪಾಠ ಮಾಡಿದ್ದಾರೆ.

ದೆಹಲಿಯ ನಿಜಾಮುದ್ದೀನ್‌ನಲ್ಲಿ ತಬ್ಲಿಘಿ ಜಮಾತ್‌ ಸಮಾವೇಶಕ್ಕೆ ಸಾವಿರಾರು ಜನ ಸೇರಲು ಅನುಮತಿ ನೀಡಿದ್ದು ಯಾರೆಂಬುದನ್ನೂ ಜಮೀರ್‌ ಕೇಳಬೇಕಲ್ಲವೇ? ರಾಜ್ಯದಿಂದ 1,500ಕ್ಕೂ ಹೆಚ್ಚು ಜನರು ಅಲ್ಲಿಗೆ ಹೋಗಿದ್ದ ಬಗ್ಗೆ ರಕ್ಷಣಾ ಇಲಾಖೆ ಮಾಹಿತಿ ಇದೆ. ಕೆಲವರು ಸ್ವಪ್ರೇರಣೆಯಿಂದ ತಪಾಸಣೆ ಮಾಡಿಸಿಕೊಳ್ಳುತ್ತಿದ್ದು, ಉಳಿದವರಿಗೂ ಜಮೀರ್‌ ಅರಿವು ಮೂಡಿಸಲಿ ಎಂದು ಸಲಹೆ ನೀಡಿದ್ದಾರೆ.

ಸಾಮೂಹಿಕ ನಮಾಜ್‌: 15 ಜನರ ಬಂಧನ

ಆಶಾ ಕಾರ್ಯಕರ್ತೆಯರು ಪೌರತ್ವ ನೋಂದಣಿ ಕಾಯ್ದೆಗೆ ಮಾಹಿತಿ ಕಲೆ ಹಾಕಲು ಹೋಗಿಲ್ಲ ಎಂಬುದನ್ನು ಜಮೀರ್‌ ಅರಿಯಲಿ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಪೌರ ಕಾರ್ಮಿಕರಿಗೆ ದೇಶದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. 9 ದಿನದಿಂದಲೂ ಕ್ಷೇತ್ರದಲ್ಲಿ ಪ್ರವಾಸ ಮಾಡಿ, ಜನರ ಅರಿವು ಮೂಡಿಸುತಿದ್ದೇವೆ. ನಿಮ್ಮ ಕ್ಷೇತ್ರದಲ್ಲಿ ಪ್ರವಾಸ ಮಾಡಿ, ಸ್ವಚ್ಛತೆ, ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಿ ಎಂದು ಜಮೀರ್‌ಗೆ ಅವರು ಹೇಳಿದ್ದಾರೆ.

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?