'ಮನೆ ಮನೆಗೆ ಬರುತ್ತೆ ತರಕಾರಿ: ನೀವು ಮಾತ್ರ ಹೊರಗೆ ಬರಬೇಡಿ'

By Kannadaprabha NewsFirst Published Mar 25, 2020, 1:38 PM IST
Highlights

ಸಿರುಗುಪ್ಪ ನಗರದ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಬಂದ್‌ ಮಾಡುಂತೆ ಒತ್ತಾಯ|ನೀವು ಮೊದಲೇ ತಿಳಿಸಿದ್ದರೆ ನಾವು ತರಕಾರಿಯನ್ನೇ ಕೊಳ್ಳುತ್ತಿದ್ದಿಲ್ಲ: ತರಕಾರಿ ವ್ಯಾಪಾರಿ| ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಇತರೆ ಅಂಗಡಿಗಳು ಬಂದ್| 

ಸಿರುಗುಪ್ಪ(ಮಾ.25): ನಗರದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಬಂದ್‌ ಮಾಡುವಂತೆ ನಗರಸಭೆ ಹಾಗೂ ಪೊಲೀಸ್‌ ಸಿಬ್ಬಂದಿ ವತ್ತಾಯಿಸಿ ಮಾರುಕಟ್ಟೆಯನ್ನು ಮುಚ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಈ ಮುಂಚೆ ನಮಗೆ ಸರಿಯಾದ ಮಾಹಿತಿ ನೀಡಿದ್ದರೆ ನಾವು ಸಾವಿರಾರು ರೂಪಾಯಿ ಖರ್ಚು ಮಾಡಿ ತರಕಾರಿಗಳನ್ನು ಕೊಳ್ಳುತ್ತಿರಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ನಗರದಲ್ಲಿ ತಾಲೂಕು ಆಡಳಿತ ವತಿಯಿಂದ ಕೊರೋನಾ ವೈರಸ್‌ ತಡೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಏ. 14 ರವರೆಗೂ 144ನೇ ಸೆಕ್ಷನ್‌ ವಿಧಿಸಿ ನಗರದ ಅಂಗಡಿಗಳನ್ನು ಮುಚ್ಚಿಸಲಾಗಿದ್ದು, ಮುಚ್ಚದೆ ಹೋದವರನ್ನು ಪೊಲೀಸ್‌ ಇಲಾಖೆ ಸಿಬ್ಬಂದಿ ಮನವೊಲಿಸಿ ಮುಚ್ಚಿಸುತ್ತಿರುವುದು ಕಂಡುಬಂತು.

ಇಲ್ಲಿ ಕೊರೋನಾ ಬರಲ್ವಾ? ಜಿಂದಾಲ್‌ನಲ್ಲಿ ಸಾವಿರಾರು ಜನರು ಕೆಲ್ಸ ಮಾಡೋದು ಎಷ್ಟು ಸರಿ?

ತರಕಾರಿ ಮಾರುವ ಮಾರೆಮ್ಮ ಮಾತನಾಡಿ, ನೀವು ಒಂದು ದಿನ ಮುಂಚಿತವಾಗಿ ತಿಳಿಸದೇ ಏಕಾಏಕಿ ನಮ್ಮ ಆಂಗಡಿ ಮುಚ್ಚಿಸಲು ಬಂದಿದ್ದೀರಿ. ನಾವು ಸವಾಲಿನಲ್ಲಿ 20 ಸಾವಿರಕ್ಕೂ ಹೆಚ್ಚು ಬೆಲೆಯ ತರಕಾರಿ ಖರಿದಿಸಿದ್ದೇವೆ. ಅವುಗಳನ್ನು ಮಾರಾಟ ಮಾಡಿ ಹಣ ಕಟ್ಟಬೇಕಾಗಿದೆ. ನೀವು ಮೊದಲೇ ತಿಳಿಸಿದ್ದರೆ ನಾವು ತರಕಾರಿಯನ್ನೇ ಕೊಳ್ಳುತ್ತಿದ್ದಿಲ್ಲ. ಏಕಾಏಕಿ ಈ ರೀತಿ ಕ್ರಮ ಕೈಗೊಂಡಿದ್ದರಿಂದ ಸಾವಿರಾರು ರುಪಾಯಿ ನಷ್ಟಉಂಟಾಗಿದೆ ಎಂದು ಅವಲತ್ತುಕೊಂಡರು.
ನಗರಸಭೆಯ ಪೌರಾಯುಕ್ತ ಪ್ರೇಮ್‌ ಚಾರ್ಲ್ಸ್ ಮಾತನಾಡಿ, ತರಕಾರಿ ಮಾರುಕಟ್ಟೆಗೆ ಪ್ರತಿನಿತ್ಯ ಸಾವಿರಾರು ಜನರು ತರಕಾರಿ ಕೊಳ್ಳಲು ಬರುತ್ತಾರೆ. ಆಗ ಒಬ್ಬರಿಂದ ಒಬ್ಬರಿಗೆ ಕೊರೋನಾ ವೈರಸ್‌ ಹರಡುತ್ತದೆ. ತರಕಾರಿ ಮಾರುವವರು ಮನೆ ಮನೆಗೆ ತೆರಳಿ ಮಾರಾಟ ಮಾಡಿದಲ್ಲಿ ಕೊರೋನಾ ವೈರಸ್‌ನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ವಿದ್ಯಾವಂತರಿಗೆ ಮಾದರಿಯಾದ ಅನಕ್ಷರಸ್ಥ: ರೈತನಿಗೆ ಬಿಗ್ ಸೆಲ್ಯೂಟ್ ಹೊಡೆದ PSI!

ನಗರದಲ್ಲಿ 144 ಸೆಕ್ಷನ್‌ ವಿಧಿಸಿದ್ದು, ಬಸ್‌, ಆಟೋ ಸೇರಿದಂತೆ ಯಾವುದೇ ವಾಹನಗಳ ಓಡಾಟ ಇರಲಿಲ್ಲ. ಹಣ್ಣಿನ ಅಂಗಡಿಗಳು, ಬಂಡಿಗಳು, ಹೋಟೆಲ್‌ಗಳನ್ನು ಮುಚ್ಚಿಸಲಾಗಿದ್ದು, ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಇತರೆ ಅಂಗಡಿಗಳನ್ನು ಮುಚ್ಚಿದ್ದರಿಂದ ಜನರ ಸಂಚಾರ ಇರಲಿಲ್ಲ.
 

click me!