ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ: ಮೂವರ ಬಂಧನ

Suvarna News   | Asianet News
Published : Apr 06, 2020, 08:49 AM IST
ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ: ಮೂವರ ಬಂಧನ

ಸಾರಾಂಶ

ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ ಮಾಡಲು ಯತ್ನ ಆರೋಪ| ಮೂವರನ್ನ ಬಂಧಿಸಿಸ ಹಾಸನ ನಗರದ ಪೊಲೀಸರು| ಯುವಕರು ದ್ರಾಕ್ಷಿ ಹಣ್ಣುಗಳಿಗೆ ಎಂಜಲು ಹಚ್ಚುತ್ತಿದ್ದಾರೆಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್| 

ಹಾಸನ(ಏ.06): ಮಾರಕ ಕೊರೋನಾ ಮಧ್ಯೆ ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ ಮಾಡಲು ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರು ಯುವಕರನ್ನ ಪೊಲೀಸರು ಬಂಧಿಸಿದ್ದಾರೆ. ನಗರದ ಉತ್ತರ ಬಡಾವಣೆಯಲ್ಲಿ ಈ ಘಟನೆ ನಡೆದಿತ್ತು. ಘಟನೆ ಬಳಿಕ ನಗರದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.

"

ಯುವಕರು ದ್ರಾಕ್ಷಿ ಹಣ್ಣುಗಳಿಗೆ ಎಂಜಲು ಹಚ್ಚುತ್ತಿದ್ದಾರೆಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ವ್ಯಾಪಾರ ಮುಗಿಸಿ ವಾಪಸ್ ಮನೆಗೆ ಹೊರಡುವ ವೇಳೆ ಹಸಿವಿನಿಂದ ಹಣ್ಣು ತಿಂದಿದ್ದೇವೆ ಎಂದು ಪೊಲೀಸರಿಗೆ ಯುವಕರ ಸ್ಪಷ್ಟನೆ ನೀಡಿದ್ದಾರೆ. 

ತಬ್ಲೀಘಿಗಳ ಪತ್ತೆಗೆ ಕೇಂದ್ರದ ಹೊಸ ಅಸ್ತ್ರ!

ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮೂವರು ಯುವಕರಿಗೆ ಅರೋಗ್ಯ ತಪಾಸಣೆ ಮಾಡಲಾಗಿದೆ. ಹಣ್ಣುಗಳನ್ನೂ ಸಹ  ಪರೀಕ್ಷೆಗೊಳಪಡಿಸಲು ಕ್ರಮ ಕೈಗೊಳ್ಳಲಾಗಿದೆ.ಮುಂಜಾಗ್ರತಾ ಕ್ರಮವಾಗಿ ಯುವಕರಿಗೆ ಮನೆಯಲ್ಲೇ ಇರುವಂತೆ ಪೊಲೀಸರು ಸೂಚಿಸಿದ್ದಾರೆ. 
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?