ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯಿಂದ ವಿವಿಧ ಬೇಡಿಕೆ| ತಲೆನೋವಿಗೆ ಕಾರಣವಾದ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯ ಬೇಡಿಕೆ|
ಭಟ್ಕಳ(ಏ.06): ಕ್ವಾರಂಟೈನ್‌ನಲ್ಲಿ ಇರುವ ವ್ಯಕ್ತಿಯೊಬ್ಬ ಊಟ ಸೇರಿದಂತೆ ತನಗೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕೆಂದು ಪದೇ ಪದೇ ಆಗ್ರಹಿಸುತ್ತಿರುವುದಾಗಿ ತಿಳಿದು ಬಂದಿದೆ.
ಭಟ್ಕಳದಲ್ಲಿ ಹೋಂ ಕ್ವಾರಂಟೈನಲ್ಲಿದ್ದವರು 14 ದಿನಗಳ ಕಾಲ ಸರಿಯಾಗಿ ಮನೆಯಲ್ಲಿ ಇರದೇ ತಿರುಗಾಡುತ್ತಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ತಾಲೂಕು ಆಡಳಿತದ ವತಿಯಿಂದಲೇ ಕೆಲ ಕಟ್ಟಡಗಳಲ್ಲಿ ಇರಿಸಿ ನಿಗಾ ವಹಿಸಲಾಗುತ್ತಿದೆ.
COVID-19: ಧಾರವಾಡ ಜಿಲ್ಲೆ ಈಗ ಕೊರೋನಾ ವೈರಸ್ ಮುಕ್ತ
ಆದರೆ ದುಬೈನಲ್ಲಿದ್ದು ಐಷಾರಾಮಿ ಜೀವನ ನಡೆಸುತ್ತಿದ್ದನೆನ್ನಲಾದ ವ್ಯಕ್ತಿಯೊಬ್ಬ ತನಗೆ ಸರಿಯಾದ ವ್ಯವಸ್ಥೆ ಕಲ್ಪಿಸದೇ ಇದ್ದಲ್ಲಿ ಇಲ್ಲಿ ಉಳಿಯುವುದು ಕಷ್ಟವಾಗುತ್ತಿದೆ ಎಂದು ಪದೇ ಪದೇ ಆಗ್ರಹಿಸುತ್ತಿರುವುದು ಅಧಿಕಾರಿಗಳಿಗೂ ತಲೆನೋವು ತಂದಿದೆ. ಅಧಿಕಾರಿಗಳು ಆತನನ್ನು ಭೇಟಿ ಮಾಡಿ ಮಾತನಾಡಿರುವ ಬಗ್ಗೆಯೂ ತಿಳಿದು ಬಂದಿದೆ.