ಕೊರೋನಾ ಮಧ್ಯೆಯೂ ಧರ್ಮಸಭೆ: ದೆಹಲಿ ನಿಜಾಮುದ್ದೀನ್‌ ವ್ಯಾಪ್ತಿಯಲ್ಲಿ ಕೊಪ್ಪಳದ 14 ಜನ

By Kannadaprabha News  |  First Published Apr 2, 2020, 8:41 AM IST

8 ಜನ ಕೊಪ್ಪಳ ಜಿಲ್ಲೆಯವರಾಗಿದ್ದು ಕೊರೋನಾ ಲಕ್ಷಣ ಇಲ್ಲ, 6 ಜನ ಅನ್ಯ ರಾಜ್ಯದವರು| ಈ ಕುರಿತು ಪೊಲೀಸರು ಶೋಧ ನಡೆಸಿದಾಗ ಅಘಾತಕಾರಿ ಅಂಶ ಬೆಳಕಿಗೆ| ಮಾರ್ಚ್ ತಿಂಗಳಲ್ಲಿ ಇವರು ಹಜರತ್‌ ನಿಜಾಮುದ್ದೀನ್‌ ಮಸೀದಿ ಇರುವ ವ್ಯಾಪ್ತಿಯಲ್ಲಿ ಸುತ್ತಾಡಿದ್ದಾರೆ ಎನ್ನಲಾಗಿದೆ|


ಕೊಪ್ಪಳ(ಏ.02): ದೇಶವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ಹಜರತ್‌ ನಿಜಾಮದ್ದೀನ್‌ ಮಸೀದಿ ತಬ್ಲಿಗಿ ಜಮಾತ್‌ನಲ್ಲಿ ಕೊಪ್ಪಳ ಜಿಲ್ಲೆಯವರು ಭಾಗವಹಿಸಿಲ್ಲವಾದರೂ ಇದೇ ವೇಳೆ 14 ಜನರು ಈ ಪ್ರದೇಶ ವ್ಯಾಪ್ತಿಯಲ್ಲಿ ಸಂಚರಿಸಿದ್ದಾರೆ ಎನ್ನುವ ಅಘಾತಕಾರಿ ಅಂಶ ಹೊರಬಿದ್ದಿದೆ.

ರಾಜ್ಯ ಸರ್ಕಾರ ಅಲ್ಲಿ ಸುತ್ತಾಡಿದವರ ಮೊಬೈಲ್‌ ಸಂಖ್ಯೆಯನ್ನು ನೋಂದಣಿಯಾಗಿರುವ ಆಧಾರದಲ್ಲಿ ಕೊಪ್ಪಳ ಜಿಲ್ಲೆಯ 14 ಜನರು ಭಾಗಿಯಾಗಿರುವ ಮಾಹಿತಿಯನ್ನು ನೀಡಿದ್ದು, ಅದನ್ನು ಕೊಪ್ಪಳ ಜಿಲ್ಲಾಡಳಿತ ಜಾಲಾಡಿದೆ.
ಕೊಪ್ಪಳ ಜಿಲ್ಲೆಯ ವಿಳಾಸದ ದೃಢೀಕರಣ ಇದ್ದರೂ ಆರು ಜನರು ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇನ್ನುಳಿದಂತೆ 8 ಜನರು ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕುಷ್ಟಗಿ ತಾಲೂಕಿನ ವ್ಯಾಪ್ತಿಯವರಾಗಿದ್ದಾರೆ. ಅವರು ದೆಹಲಿಗೆ ತೆರಳಿದ್ದರೂ ಮುಸ್ಲೀಮರ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ ಎನ್ನಲಾಗಿದೆ.

Tap to resize

Latest Videos

ಲಾಕ್‌ಡೌನ್‌ ಎಫೆಕ್ಟ್‌: ಮಾರ್ಕೆಟ್‌ನಲ್ಲಿ ರೈತರ ಉತ್ಪನ್ನ ಕೇಳುವವರೇ ಇಲ್ಲ, ಕಂಗಾಲಾದ ಅನ್ನದಾತ!

ಇವರು ಈಗಾಗಲೇ 14 ದಿನಗಳ ಹೋಮ್‌ ಕ್ವಾರೈಂಟ್‌ನ್‌ ಮುಗಿಸಿದ್ದರೂ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ 8 ಜನರು ಮತ್ತು ಅವರ ಕುಟುಂಬದವರನ್ನು ಮತ್ತೆ 14 ದಿನ ಹೋಮ್‌ಕ್ವಾರಂಟೈನ್‌ ಮಾಡಲಾಗಿದೆ. ಅವರ ಮನೆಗೆ ಮತ್ತು ಅವರಿಗೆ ಸ್ಟಿಕರ್‌ ಸಹ ಹಾಕಿ, ಕಟ್ಟೆಚ್ಚರ ವಹಿಸಲಾಗಿದೆ.

ತಬ್ಲಿಗ ಜಮಾತ್‌ನಲ್ಲಿ ಭಾಗವಹಿಸಿಲ್ಲ: 

ಇವರು ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿಲ್ಲ ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಇವರು ಹಜರತ್‌ ನಿಜಾಮುದ್ದೀನ್‌ ಮಸೀದಿ ಇರುವ ವ್ಯಾಪ್ತಿಯಲ್ಲಿ ಸುತ್ತಾಡಿದ್ದಾರೆ ಎನ್ನಲಾಗಿದೆ. ಹಾಗಾದರೇ ಅಲ್ಲಿಗೆ ಯಾಕೆ ಹೋಗಿದ್ದರು ಎನ್ನುವುದು ಸಹ ಅನೇಕ ಅನುಮಾನಕ್ಕೆ ದಾರಿಯಾಗಿದೆ.

ಲ್ಯಾಬ್‌ಗೆ ಕಳುಹಿಸಿಲ್ಲ:

ದೆಹಲಿಯಿಂದ ಬಂದು ಈಗಗಾಲೇ 14 ದಿನಗಳ ಹೋಮ್‌ ಕ್ವಾರಂಟೈನ್‌ ಪೂರ್ಣಗೊಳಿಸಿದ್ದರೂ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ, ಅವರ ಗಂಟಲು ದ್ರವವನ್ನು ಲ್ಯಾಬ್‌ಗೆ ಕಳುಹಿಸಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಅನುಮಾನಕ್ಕೆಡೆ:

ಕೊಪ್ಪಳ ವಿಳಾಸ ಇರುವ 14 ಮೊಬೈಲ್‌ ಸಂಖ್ಯೆಯನ್ನು ಪತ್ತೆ ಹಚ್ಚಿದಾಗ ಅಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಇವರಲ್ಲಿ 8 ಜನರ ವಿಳಾಸ ಪತ್ತೆಯಾಗಿದೆ. ಅವರು ಈಗಾಗಲೇ ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ. ಆದರೆ, ಉಳಿದ 6 ಮೊಬೈಲ್‌ ಸಂಖ್ಯೆಯ ಮಾಹಿತಿ ಬೆಚ್ಚಿಬೀಳಿಸುವಂತೆ ಇದೆ.

ಲಾಕ್‌ಡೌನ್‌: ಪುಟ್ಟ ಮಕ್ಕಳನ್ನ ನೋಡಲು 400 ಕಿ.ಮೀ. ಕಾಲ್ನಡಿಗೆಯಲ್ಲಿ ಹೊರಟ ದಂಪತಿ

ಮೂವರು ಇಲ್ಲಿಯ ವಿಳಾಸ ನೀಡಿ ಮೊಬೈಲ್‌ ಸಿಮ್‌ ಪಡೆದಿದ್ದು, ಅನ್ಯ ರಾಜ್ಯದಲ್ಲಿಯೇ ಇದ್ದು, ಇಲ್ಲಿಗೆ ಬಂದಿಲ್ಲ. ಇನ್ನು ಮೂವರಿಗೆ ಇಲ್ಲಿಯವರು ತಮ್ಮ ಹೆಸರಿನಲ್ಲಿ ಸಿಮ್‌ ಖರೀದಿಸಿ ಅವರಿಗೆ ಕೊಟ್ಟಿದ್ದಾರೆ. ಅವರು ಸಹ ಕೊಪ್ಪಳ ಜಿಲ್ಲೆಗೆ ಆಗಮಿಸಿಲ್ಲ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಇದ್ದಾರೆ.

ಹಾಗಾದರೇ ಈ ತಬ್ಲಿಗಿ ಜಮಾತ್‌ನೊಂದಿಗೆ ಜಿಲ್ಲೆಯ ಜನರು ನಂಟು ಇರುವುದು ಪಕ್ಕಾ ಆಗುತ್ತದೆ. ಎಲ್ಲಿಯೋ ವಾಸಿಸುವವರು ಕೊಪ್ಪಳ ವಿಳಾಸ ಮತ್ತು ಗುರುತಿನ ಚೀಟಿ ಧಕ್ಕಿಸಿಕೊಂಡಿರುವುದಾದರೂ ಹೇಗೆ? ಅವರು ಇಲ್ಲಿ ಯಾವ ಆಧಾರದಲ್ಲಿ ಗುರುತಿನ ಚೀಟಿ ಅಥವಾ ಆಧಾರ್‌ ಕಾರ್ಡ್‌ ಹೇಗೆ ಪಡೆದುಕೊಂಡಿದ್ದಾರೆ? ಇನ್ನು ಮೂವರು ಎಲ್ಲಿಯೋ ಇರುವವರಿಗೆ ಕೊಪ್ಪಳ ವಿಳಾಸವುಳ್ಳವರು ಮೊಬೈಲ್‌ ಸಿಮ್‌ ಕೊಡಿಸಿದ್ದು ಯಾಕೆ? ಅವರಿಗೂ ಇವರಿಗೂ ಇರುವ ಸಂಬಂಧ ಏನು? ಎನ್ನುವುದು ಮಾತ್ರ ಅನೇಕ ಅನುಮಾನಗಳಿಗೆ ಕಾರಣವಾಗಿದೆ.
 

click me!