ಮಂಗ್ಳೂರು ಬಳಿಕ ಮತ್ತೊಂದು ಜಿಲ್ಲೆಯತ್ತ ಸುಧಾಮ್ಮನ ಸಹಾಯ ಹಸ್ತ

By Suvarna NewsFirst Published Mar 28, 2020, 10:47 PM IST
Highlights

ಸುಧಾ ಮೂರ್ತಿ ಅಲ್ಲ ಇವರು ಧಾನ ಮೂರ್ತಿ ಅಂದ್ರೆ ತಪ್ಪಾಗಲಿಕಿಲ್ಲ. ಯಾಕಂದ್ರೆ ರಾಜ್ಯದಲ್ಲಿ ಸಮಸ್ಯೆಗಳು ಎದುರಾದಗೊಮ್ಮೆ ಮೊದಲಿಗೆ ಜನರ ಸಹಾಯಕ್ಕೆ ಬರುವುದೇ ಸುಧಾ ಮೂರ್ತಿ. ಇದೀಗ ಕೊರೋನಾ ವೈರಸ್‌ ವಿರುದ್ಧ ಹೋರಾಟದ ಅಖಾಡಕ್ಕಿಳಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 28 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಸರಬರಾಜು ಜಿಲ್ಲೆಗೆ ತಲುಪಿಸಿದ್ದಾರೆ. ಈಗ ಸುಧಾಮನ್ನ ಸಹಾಯ ಹಸ್ತ ಮತ್ತೊದು ಜೆಲ್ಲೆಗೆ.

ಬೆಂಗಳೂರು, (ಮಾ.28): ಮಂಗಳೂರು ಪೊಲೀಸರ ಕರೆಗೆ 36 ಗಂಟೆಗಳಲ್ಲಿ ಒಂದು ಟ್ರಕ್ ತುಂಬ ನಿರ್ಣಾಯಕ ವೈದ್ಯಕೀಯ ಸರಬರಾಜು ಮಾಡಿದ್ದರು  ಸುಧಾ ಮೂರ್ತಿ.

ಹೌದು..ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಕೊರೋನಾ ಸೋಂಕು ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಗೆ 28 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಸರಬರಾಜು ಜಿಲ್ಲೆಗೆ ತಲುಪಿಸಿದ್ದಾರೆ. ಇದೀಗ ಮತ್ತೊಂದು ಜಿಲ್ಲೆಗೆ ನೆರವು ನೀಡಲು ಮುಂದಾಗಿದ್ದಾರೆ.

ನಮ್ಮ ಸರಕಾರಿ ಶಾಲೆಗಳಿಗೋಸ್ಕರ 'ದಾನ' ಮೂರ್ತಿ ಮಹತ್ವದ ಹೆಜ್ಜೆ: ಭಲೇ ಭಲೇ

ಧಾರವಾಡದತ್ತ ಸುಧಾಮ್ಮನ ಸಹಾಯ ಹಸ್ತ
ಕೊರೋನಾದಿಂದ ಉಂಟಾಗಿರುವ ಸಂಕಷ್ಟ ಪರಿಹಾರೋಪಾಯ ಕಾರ್ಯಕ್ಕಾಗಿ ಈಗಾಗಲೇ ಸಾಕಷ್ಟು ನೆರವು ನೀಡಿರುವ ಇನ್ಫೋಸಿಸ್ ಪ್ರತಿಷ್ಠಾನವು ಈಗ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ 20 ಲಕ್ಷ ರೂ.ಗಳ ಪ್ರತ್ಯೇಕ ನೆರವು ಘೋಷಿಸಿದೆ.

ಧಾರವಾಡ ಜಿಲ್ಲೆ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕು ಒಳಗೊಂಡು ಪರಿಹಾರ ಕಾರ್ಯ ಕೈಗೊಳ್ಳುವುದಕ್ಕಾಗಿ ಸುಧಾಮೂರ್ತಿಯವರು ಈ ನೆರವು ನೀಡಿದ್ದು, ಸಾಫಲ್ಯ ಪ್ರತಿಷ್ಠಾನ ಮತ್ತು ಗ್ರಾಮ ವಿಕಾಸ ಸಂಸ್ಥೆಗಳ ಮೂಲಕ ಈ ಪರಿಹಾರ ಕಾರ್ಯಗಳು ನಡೆಯಲಿವೆ.

ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 12 ಕೊರೋನಾ: ಇಲ್ಲಿದೆ ಜಿಲ್ಲಾವಾರು ಮಾಹಿತಿ..!

ಮಂಗಳೂರು: ಮಾರಕ ಕೊರೋನಾ ಸೋಂಕು ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ನೆರವು ನೀಡಿದ್ದಾರೆ.

ಕೊರೋನಾ ಸೋಂಕು ನಿಗ್ರಹ ಹಾಗೂ ಪರೀಕ್ಷೆಗೆ ಅನುಕೂಲವಾಗುವಂತೆ 28 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸುಧಾ ಮೂರ್ತಿಯವರು ದೇಣಿಗೆಯಾಗಿ ನೀಡಿದ್ದಾರೆ. ಮಂಗಳೂರು ಪೊಲೀಸರ ಕರೆಗೆ ಮೂರ್ತಿ ಸ್ಪಂದಿಸಿದ್ದು, 36 ಗಂಟೆಗಳಲ್ಲಿ 28 ಲಕ್ಷ ರೂಪಾಯಿ ಮೌಲ್ಯದ ನಿರ್ಣಾಯಕ ವೈದ್ಯಕೀಯ ಸರಬರಾಜು ಜಿಲ್ಲೆಗೆ ತಲುಪಿದೆ.

ಈ ಹಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ಪೌರ ಕಾರ್ಮಿಕರಿಗೆ ವೈಯಕ್ತಿಕ ಸ್ಯಾನಿಟೈಜರ್ ವಿತರಣೆ, ಉತ್ತಮ ಗುಣಮಟ್ಟದ ವೈದ್ಯಕೀಯ ಮಾಸ್ಕ್ ವಿತರಣೆ ಮಾಡಲಾಗುತ್ತದೆ. ಜೊತೆಗೆ ಸಂಕಷ್ಟದಲ್ಲಿರುವ ಹುಬ್ಬಳ್ಳಿ ತಾಲೂಕಿನ ಗೋಕುಲ ಹಾಗೂ ಸುತ್ತಮುತ್ತಲಿನ ಗೋಸಾವಿ, ಹರಿಣಶಿಕಾರಿ, ಕುಂಚಿಕೊರವ ಸಮಾಜದ ಜನರಿಗೆ ಹತ್ತು ದಿನಗಳಿಗೆ ಆಗುವಷ್ಟು ದಿನಸಿ ವಿತರಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

click me!