ಫೇಸ್‌ಬುಕ್, ವ್ಯಾಟ್ಸಾಪ್‌ನಲ್ಲಿ ನಿರ್ದಿಷ್ಟ ಸಮುದಾಯವನ್ನು ನಿಂದಿಸಿದ್ರೆ ಕಠಿಣ ಕ್ರಮ!

By Suvarna NewsFirst Published Apr 6, 2020, 10:50 PM IST
Highlights

ಕೊರೋನಾ ವೈರಸ್ ವಿರುದ್ಧಧ ಹೋರಾಟ ವೇಳೆ ಯಾವುದೇ ಒಂದು ಕೋಮು ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದರೆ ಕೇಸ್ ಮಾತ್ರವಲ್ಲ, ಕಠಿಣ ಶಿಕ್ಷೆ ಎದುರಾಗಲಿದೆ. ಈ ಕುರಿತು ಪೊಲೀಸ್ ಖಡಕ್ ವಾರ್ನಿಂಗ್ ನೀಡಿದೆ. 

ಮಂಗಳೂರು(ಏ06): ಕೊರೋನಾ ವೈರಸ್ ತಡೆಯಲು ಹೋರಾಟ ನಡೆಯುತ್ತಿದೆ. ಸಂಘಟಿತ ಹೋರಾಟದ ವೇಳೆ ಕೆಲ ವ್ಯಕ್ತಿಗಳು ತಪ್ಪು ಮಾಡಿದರೆ ಇಡೀ ಸಮುದಾಯವನ್ನು ದೂಷಿಸುವ ಕೆಲಸ ನಡೆಯುತ್ತಿದೆ. ಇದೀಗ ನಿರ್ದಿಷ್ಟ ಕೋಮು ಗುರಿಯಾಗಿಸಿ ಫೇಸ್‌ಬುಕ್, ವ್ಯಾಟ್ಸಾಪ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದರೆ ಶಿಕ್ಷೆ ತಪ್ಪಿದ್ದಲ್ಲ.

ಯಾವುದೇ ಕೋಮು ಗುರಿಯಾಗಿಸಿ ನಿಂದನೆ ಕಾನೂನು ವಿರುದ್ಧವಾಗಿದೆ. ಜೊತೆಗೆ ಸಮಾಜ ಸ್ವಾಸ್ಥ್ಯ ಕೆಡಲಿದೆ. ಹೀಗಾಗಿ ನಿಂದನೆ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 4 ಪ್ರಕರಣ ದಾಖಲಾಗಿದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುವವರ ಮೊಬೈಲ್ ವಶಕ್ಕೆ ಪಡೆಯಲಾಗುವುದು. ಜೊತೆಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುವುದು. ಇನ್ನು ಹೋಮಮ್ ಕ್ವಾರಂಟೈನ್‌ನಲ್ಲಿರುವವರು, ಚಿಕಿತ್ಸೆ ಪಡೆಯುತ್ತಿರುವವರು ನಿಯಮ ಉಲ್ಲಂಘಿಸಿದರೆ ಕ್ವಾರಂಟೈನ್ ಮುಗಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ.
 

click me!