ಕರ್ನಾಟಕದಲ್ಲಿ ಕೊರೋನಾ ವೈರಸ್ ಆತಂಕದ ನಡುವೆ ನೆಮ್ಮದಿಯ ಸುದ್ದಿ

By Suvarna NewsFirst Published Apr 6, 2020, 8:34 PM IST
Highlights

ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಸೇರಿದಂತೆ ಅನೇಕ ಕ್ರಮಕೈಗೊಳ್ಳಲಾಗಿದ್ದು, ಸೋಂಕಿತರ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಇಂತಹ ಆತಂಕದ ನಡುವೆಯೇ ನೆಮ್ಮದಿಯ ಸುದ್ದಿ ಸಿಕ್ಕಿದ್ದು, ಇದೊಂದು ಉತ್ತಮ ಬೆಳವಣಿಗೆ ಆಗಿದೆ.

ಮಂಗಳೂರು, (ಏ.6): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಭೀತಿ ನಡುವೆಯೂ ನಾಲ್ವರು ಸೋಂಕಿತರು ಗುಣಮುಖರಾಗಿದ್ದಾರೆ.

ಇಂದು (ಸೋಮವಾರ) ಆಸ್ಪತ್ರೆಯಿಂದ ನಾಲ್ವರು ಕೊರೋನಾ ಸೋಂಕಿತರು ಬಿಡುಗಡೆಯಾಗಿದ್ದು, ಸೋಂಕಿತರ 12 ಮಂದಿಯ ಪೈಕಿ ನಾಲ್ವರು ಗುಣಮುಖರಾಗಿ ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ ಮಧ್ಯೆ ಒಂದು ಗುಡ್‌ ನ್ಯೂಸ್

ಇನ್ನುಳಿದ 8 ಮಂದಿಯ ಚಿಕಿತ್ಸೆ ಮುಂದುವರಿದಿದ್ದು , ಇವರು ಕೂಡಾ ಶೀಘ್ರ ಗುಣಮುಖರಾಗುವ ವಿಶ್ವಾಸವಿದೆ ಎಂದು ಆಸ್ಪತ್ರೆಯ ವೈದ್ಯಕೀಯ ತಂಡ ತಿಳಿಸಿದೆ.

3 more positive patients recovered&have been discharged today. So far, 4 positive cases have recovered in Mangaluru. Total 12 positive cases have been reported in city till now: Deputy Commissioner & District Magistrate's Office, Dakshina Kannada, Mangaluru.

— ANI (@ANI)

ಸೋಂಕಿತರ ಪೈಕಿ ಒರ್ವ ಭಟ್ಕಳ, ಮೂವರು ಕಾಸರಗೋಡು ನಿವಾಸಿಗಳಾಗಿದ್ದಾರೆ. ಡಿಸ್ಚಾರ್ಜ್ ವೇಳೆ ಅವರ ಕೈಗೆ ಸೀಲ್ ಹಾಕಿ 28 ದಿನ ಕಡ್ಡಾಯ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

ಜಿಲ್ಲೆಯ ಜನತೆಯ ಮಟ್ಟಿಗೆ ಇದೊಂದು ಆಶಾದಾಯಕ ಬೆಳವಣಿಯಾಗಿದ್ದು, ಇಡೀ ಕರ್ನಾಟಕಕ್ಕೆ ಖುಷಿಯ ವಿಚಾರ.

ಸೋಮವಾರ ಸಂಜೆ ಆರೋಗ್ಯ ಇಲಾಖೆ ರಿಲೀಸ್ ಮಾಡಿದ ಹೆಲ್ತ್ ಬುಲೆಟಿನ್ ಪ್ರಕಾರ ಇದುವರೆಗೆ ರಾಜ್ಯದಲ್ಲಿ ಒಟ್ಟು 20 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದು ಉತ್ತಮ ಬೆಳವಣಿಗೆ.

ಹಂತ-ಹಂತವಾಗಿ ಕರ್ನಾಟಕದಲ್ಲಿ ಕೊರೋನಾ ಪೀಡಿತರು ಗುಣಮುಖರಾಗುತ್ತಿದ್ದಾರೆ. ಆದ್ರೆ ಜನರು ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲದಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ದಯವಿಟ್ಟು ಎಲ್ಲರೂ ಇನ್ನಷ್ಟು ದಿನ ಲಾಕ್‌ಡೌನ್ ಆದೇಶವನ್ನು ಪಾಲಿಸಿ ಕೊರೋನಾ ಮುಕ್ತ ರಾಜ್ಯವನ್ನಾಗಿ ಮಾಡೋಣ.

click me!