ಕೊರೋನಾ ಯೋಧರಿಗೆ ಚಪ್ಪಾಳೆ ತಟ್ಟಿದ ಐರಾ ಯಶ್! ವಿಡಿಯೋ ನೋಡಿ..

Suvarna News   | Asianet News
Published : Mar 23, 2020, 06:18 PM ISTUpdated : Mar 23, 2020, 07:11 PM IST
ಕೊರೋನಾ ಯೋಧರಿಗೆ ಚಪ್ಪಾಳೆ ತಟ್ಟಿದ ಐರಾ ಯಶ್! ವಿಡಿಯೋ ನೋಡಿ..

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಪುತ್ರಿ ಐರಾ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಒಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದ್ದು ಹೀಗೆ..

ಸ್ಯಾಂಡಲ್‌ವುಡ್‌ ರಾಕಿಂಗ್ ಕಪಲ್‌ನ ಮುದ್ದಿನ ಪುತ್ರಿ ಐರಾ ಯಶ್ ತಾತ-ಅಜ್ಜಿ ಮತ್ತು ಅಮ್ಮನ ಜೊತೆ ಬಾಲ್ಕಾನಿಯಲ್ಲಿ ನಿಂತು, ಮೋದಿ ನೀಡಿದ ಅಭಿಯಾನಕ್ಕೆ ಕೈ ಜೋಡಿಸಿದ್ದಾಳೆ. ಕೊರೋನಾ ವೈರಸ್ ವಿರುದ್ಧ ಹೋರಾಡಲು ದೇಶವೇ ಸಜ್ಜಾಗಬೇಕಿದ್ದು, ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಅಲ್ಲದೇ ಸಂಜೆ 5 ಗಂಟೆಗೆ ಎಲ್ಲರೂ ಒಟ್ಟಾಗಿ ಚಪ್ಪಾಳೆ ತಟ್ಟಿ, ಒಗ್ಗಟನ್ನು ಪ್ರದರ್ಶಿಸೋಣ ಎಂದಿದ್ದರು. ಇದಕ್ಕೆ ಜತೆಗೂಡಿದ ಭಾರತೀಯ ಜನತೆಯೊಂದಿಗೆ ಐರಾ ಸಹ ಕೈ ಜೋಡಿಸಿದ್ದಾರೆ. ಅಜ್ಜ ಅಜ್ಜಿಯೊಂದಿಗೆ ಚಪ್ಪಾಳೆ ತಟ್ಟಿದ್ದಾಳೆ.  ಈ ವಿಡಿಯೋವನ್ನು ರಾಧಿಕಾ ಪಂಡಿತ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬೇಸಿಗೆಗೆ Summer Cut; ಇದೇನಪ್ಪಾ ಅಪ್ಪಂಗೆ ಹಿಂಗ್‌ ಕೇಳೋದಾ ಐರಾ?

ಕೊರೋನಾ ವೈರಸ್‌ ಹೋಗಲಾಡಿಸಲು ಸತತ 24/7 ಕಾರ್ಯ ನಿರ್ವಹಿಸುತ್ತಿರುವ ವಾರಿಯರ್ಸ್‌ಗೆ ಸಾಥ್‌ ನೀಡಲು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮಾರ್ಚ್‌ 22 ಸಂಜೆ 5 ಗಂಟೆಗೆ ಇರುವಲ್ಲಿಯೇ ಚಪ್ಪಾಳೆ ತಟ್ಟುವ ಮೂಲಕ ಗೌರವಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಈ ಕರೆಯಲ್ಲಿ ಸೆಲೆಬ್ರಿಟಿಗಳು ಹಾಗೂ ಸಾರ್ವಜನಿಕರೂ ಪಾಲ್ಗೊಂಡಿದ್ದರು. ಇದಕ್ಕೆ ದೇಶದೆಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತ್ತು. 

'kissable head' ಜೊತೆ ಮಿಸ್ಟರ್‌ ಆ್ಯಂಡ್ ಮಿಸಸ್‌ ರಾಮಚಾರಿ!

'ವಾರಿಯರ್ಸ್‌ಗೆ ಚಪ್ಪಾಳೆ ತಟ್ಟಲು ಈ ಪುಟ್ಟ ಕೈಗಳು ನಮ್ಮೊಂದಿಗೆ ಸೇರಿಕೊಂಡಿದೆ. ನಾವೆಲ್ಲರೂ ಒಂದು ರಾಷ್ಟ್ರವಾಗಿ ನಮಗಾಗಿ ಕೆಲಸ ಮಾಡುವ ಜನರಿಗೆ ಸಮಸ್ಕರಿಸೋಣ. ಜವಾಬ್ದಾರಿಯುತ ನಾಗರಿಕರಾಗಿರಿ. ಸ್ಟೇ ಸೇಫ್ ' ಎಂದು ರಾಧಿಕಾ ಬರೆದುಕೊಂಡಿದ್ದಾರೆ.

 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?