ಚಪ್ಪಾಳೆ, ದೀಪದಿಂದ ಕೊರೋನಾ ಹೋಗಲ್ಲ, ಪ್ರಧಾನಿ ಮೋದಿ ಕರೆಗೆ ಸತೀಶ್ ಜಾರಕಿಹೊಳಿ ವ್ಯಂಗ್ಯ!

By Suvarna NewsFirst Published Apr 6, 2020, 11:10 PM IST
Highlights

ದೇಶದಲ್ಲಿ  ಕೊರೋನಾ ವೈರಸ್ ವಿರುದ್ಧದ ಹೋರಾಟ ನಡೆಯುತ್ತಿದೆ. ಲಾಕ್‌ಡೌನ್‌ನಿಂದ ಮನೆಯಲ್ಲಿರುವ ಜನರಿಗೆ ಆತ್ಮಸ್ಥೈರ್ಯ ತುಂಬಲು, ಹೋರಾಟ ಮಾಡುತ್ತಿರುವರಿಗೆ ಧನ್ಯವಾದ ಹೇಳಲು ಪ್ರಧಾನಿ ಮೋದಿ ದೀಪ ಹಚ್ಚಲು ಹಾಗೂ ಚಪ್ಪಾಳೆ ತಟ್ಟಲು ಹೇಳಿದ್ದರು. ಇದನ್ನು ಹಲವರು ಅಪಾರ್ಥ ಮಾಡಿಕೊಂಡಿದ್ದಾರೆ. ಈ ಸಾಲಿಗೆ  ಸತೀಶ್ ಜಾರಕಿಹೊಳಿ ಕೂಡ ಸೇರಿಕೊಂಡಿದ್ದಾರೆ.

ಬೆಳಗಾವಿ(ಏ.06): ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಯಾವುದೇ ಕರೆ ವರ್ಕೌಟ್ ಆಗಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ. ದೀಪ ಹಚ್ಚುವುದು, ಚಪ್ಪಾಳೆ ತಟ್ಟುವುದರಿಂದ ಕೊರೋನಾ ತೊಲಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಪ್ರಧಾನಿ ದೇಶದ ಜನರನ್ನು ನಿಜವಾದ ದಾರಿಯಲ್ಲಿ ಕರೆದೊಯ್ಯಬೇಕು, ಬದಲಾಗಿ ಈ ರೀತಿಯಲ್ಲ ಎಂದಿದ್ದಾರೆ.

ದೇಶದ ಜನತೆ ಮೊದಲೇ ಸಂಕಷ್ಟದಲ್ಲಿದ್ದಾರೆ, ಲಾಕ್‌ಡೌನ್‌ನಿಂದ ಜನರು ಪರದಾಡುತ್ತಿದ್ದಾರೆ. ಅಂಗಡಿಗಳೆಲ್ಲಾ ಬಂದ್ ಆಗಿದೆ. ಈ ವೇಳೆ ದೀಪ ಹಚ್ಚಲು ಕರೆ ನೀಡಿದರೆ, ಜನರು ದೀಪ ತರಲು ಚೀನಾಗೆ ಹೋಗಬೇಕೆ ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದಿರು ಮೋದಿ, ಇದೀಗ ಚಪ್ಪಾಳೆ, ದೀಪ ಹಚ್ಚಲು ಹೇಳುತ್ತಿದ್ದಾರೆ. ಜನರನ್ನು ಒಟ್ಟು ಸೇರಿಸುವುದಾದರೆ ಲಾಕ್‌ಡೌನ್ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಮೋದಿ ಕರೆ ಸಮಂಜಸವಾಗಿಲ್ಲ. ಹೀಗಾಗಿ ನಾನು ಬುದ್ಧ, ಬಸವ ಅಂಬೇಡ್ಕರ್ ಭಾವಚಿತ್ರ ಪ್ರದರ್ಶಿಸಿದೆ. ಕೊರೋನಾ ವೈರಸ್ ವಿರುದ್ಧ ಮೋದಿಯ ಕ್ರಮಗಳು ಸರಿ ಇಲ್ಲ ಎಂದು ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಪ್ರಧಾನಿ ಮೋದಿ ಹೇಳಿಕೆಯನ್ನು ವ್ಯಂಗ್ಯವಾಡಿದ್ದಾರೆ.

click me!