ಕಾಲುವೆಗೆ ಮೃತ ತಂದೆಯ ಪಿಂಡ ಬಿಡಲು ಹೋಗಿದ್ದ ಪುತ್ರ ನಾಪತ್ತೆ

Kannadaprabha News   | Asianet News
Published : Apr 09, 2020, 08:05 AM IST
ಕಾಲುವೆಗೆ ಮೃತ ತಂದೆಯ ಪಿಂಡ ಬಿಡಲು ಹೋಗಿದ್ದ ಪುತ್ರ ನಾಪತ್ತೆ

ಸಾರಾಂಶ

ಪಿಂಡದ ತಟ್ಟೆ ಕಾಲುವೆಯಲ್ಲಿ ಮುಳಗಿರುವುದನ್ನು ತರಲು ಹೋಗಿ ನಾಪತ್ತೆ|ಪಾಪಾಯ್‌ ಟನಾಲ್‌ ಬಳಿಯ ತುಂಗಭದ್ರಾ ಕಾಲುವೆ ಬಳಿ ನಡೆದ ಘಟನೆ| ಪೊಲೀಸರಿಂದ ವ್ಯಕ್ತಿಯ ಪತ್ತೆಗೆ ಕಾರ್ಯ ಆರಂಭ|  

ಗಂಗಾವತಿ(ಏ.09): ತನ್ನ ತಂದೆಯ ಪಿಂಡವನ್ನು ಕಾಲುವೆಗೆ ಬಿಡಲು ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ. ಜಯನಗರದ ಪ್ರಹ್ಲಾದ ಗೊರೆಬಾಳ್‌ (54) ನಾಪತ್ತೆಯಾದ ವ್ಯಕ್ತಿ. 

ಈತನು ತನ್ನ ತಂದೆ ಗೋವಿಂದಚಾರ ಗೊರೆಬಾಳ್‌ ಅವರು ನಿಧನರಾಗಿ 11 ದಿನ ಕಳೆದಿದ್ದವು. ತನ್ನಮಿತ್ತ 11 ನೇ ದಿನದ ಕಾರ್ಯಕ್ರಮ ಮುಗಿಸಿ ತಂದೆಯ ಪಿಂಡವನ್ನು ಪಾಪಾಯ್‌ ಟನಾಲ್‌ ಬಳಿಯ ತುಂಗಭದ್ರಾ ಕಾಲುವೆಗೆ ಬಿಡಲು ಹೋಗಿದ್ದ. 

ಲಾಕ್‌ಡೌನ್‌ ಎಫೆಕ್ಟ್‌: ರಕ್ತದ ಕೊರತೆ ನೀಗಿಸುತ್ತಿದೆ ಯುವಕರ ಪಡೆ

ಈ ಸಂದರ್ಭದಲ್ಲಿ ಪಿಂಡದ ತಟ್ಟೆ ಕಾಲುವೆಯಲ್ಲಿ ಮುಳಗಿರುವುದನ್ನು ತರಲು ಹೋಗಿ ನಾಪತ್ತೆಯಾಗಿದ್ದಾನೆ. ಈಜಿನಲ್ಲಿ ಪರಿಣಿತನಾಗಿದ್ದ ಪ್ರಹ್ಲಾದ ಶವಾಸನ ಸಹ ಹಾಕುತಿದ್ದ. ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ವರ್ಗ ಇದೆ. ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವ್ಯಕ್ತಿಯ ಪತ್ತೆ ಕಾರ್ಯ ನಡೆದಿದೆ.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?