ವೇತನವಿಲ್ಲದೆ ಪರದಾಟ: ಕೈಯಲ್ಲಿ ದುಡ್ಡಿಲ್ಲದೇ ಕಂಗಾಲಾದ ಅತಿಥಿ ಉಪನ್ಯಾಸಕರು

Kannadaprabha News   | Asianet News
Published : Apr 09, 2020, 07:39 AM IST
ವೇತನವಿಲ್ಲದೆ ಪರದಾಟ: ಕೈಯಲ್ಲಿ ದುಡ್ಡಿಲ್ಲದೇ ಕಂಗಾಲಾದ ಅತಿಥಿ ಉಪನ್ಯಾಸಕರು

ಸಾರಾಂಶ

ಅತಿಥಿ ಉಪನ್ಯಾಸಕರಿಗೆ ನೆರವು ನೀಡಿ|ಮುಖ್ಯಮಂತ್ರಿಗೆ ವಿಪ ಸದಸ್ಯ ಬಸವರಾಜ್‌ ಹೊರಟ್ಟಿ ಪತ್ರ| ಅತಿಥಿ ಉಪನ್ಯಾಸಕರಿಗೆ ಮನೆ ನಡೆಸುವುದು ಕಷ್ಟವಾಗಿದೆ| ಜೀವನೋಪಾಯಕ್ಕೆ ಸಿಎಂ ಸ್ಪಂದಿಸಬೇಕು|   

ಹುಬ್ಬಳ್ಳಿ(ಏ.09): ಲಾಕ್‌ಡೌನ್‌ ಮತ್ತು ನಾಲ್ಕು ತಿಂಗಳಿಂದ ವೇತನವಿಲ್ಲದೇ ಅತಿಥಿ ಉಪನ್ಯಾಸಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಅವರ ನೆರವಿಗೆ ಧಾವಿಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಡಿಗ್ರಿ ಕಾಲೇಜುಗಳಲ್ಲಿ 13 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ಸೇವಾ ಭದ್ರತೆ ಇಲ್ಲ. ಸಕಾಲಿಕ ವೇತನ ಸಿಗದೆ, ಕೈಯಲ್ಲಿ ದುಡ್ಡಿಲ್ಲದೇ ಕಂಗಾಲಾಗಿದ್ದಾರೆ. ಇದೀಗ ಲಾಕ್‌ಡೌನ್‌ ಆಗಿದ್ದರಿಂದ ಅಂಗಡಿಕಾರರು ಉದ್ರಿ ಕಿರಾಣಿ ಕೊಡುತ್ತಿಲ್ಲ. ಸಾಲ ಮಾಡೋಣ ಎಂದರೆ ಯಾರೂ ಕೈಗಡ ಕೊಡುತ್ತಿಲ್ಲ. ಹೀಗಾಗಿ ಮನೆ ನಡೆಸುವುದು ಕಷ್ಟವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್‌: ಹಸಿದ ಪ್ರಾಣಿಗಳಿಗೆ ಯುವಕರಿಂದ ಆಹಾರ

ಹೀಗೆ ಸಂಕಷ್ಟದಲ್ಲಿರುವ ಉಪನ್ಯಾಸಕರು ಇತರರಂತೆ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದು, ಅವರಿಗೆ ತಕ್ಷಣ ಸ್ಪಂದಿಸಿ ಜೀವನೋಪಾಯಕ್ಕೆ ಸ್ಪಂದಿಸಬೇಕು ಎಂದು ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?