ಮಾರಕ ಕೊರೋನಾ ವೈರಸ್‌ಗೆ ಹೆದರಿ ವ್ಯಕ್ತಿ ಆತ್ಮಹತ್ಯೆಗೆ ಶರಣು

Suvarna News   | Asianet News
Published : Apr 01, 2020, 02:27 PM IST
ಮಾರಕ ಕೊರೋನಾ ವೈರಸ್‌ಗೆ ಹೆದರಿ ವ್ಯಕ್ತಿ ಆತ್ಮಹತ್ಯೆಗೆ ಶರಣು

ಸಾರಾಂಶ

ಕೊರೋನಾ ಬರುತ್ತೇ ಎಂದು ಭಯಗೊಂಡ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ| ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದಲ್ಲಿ ಘಟನೆ| ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ| ಪರೀಕ್ಷಿಸಿದ ವೈದ್ಯರು ಕೊರೋನಾ ವೈರಸ್ ಇಲ್ಲ ಅಂತ ಹೇಳಿದ್ದರು|

ಗದಗ(ಏ.01): ಮಹಾಮಾರಿ ಕೊರೋನಾ ವೈರಸ್ ಬರುತ್ತೆ ಅಂತ ಭಯಗೊಂಡ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಗುರುಸಂಗಪ್ಪ ಜಂಗಣ್ಣವರ(40) ಮೃತ ದುರ್ದೈವಿಯಾಗಿದ್ದಾನೆ. 

ಮೃತ ಗುರುಸಂಗಪ್ಪ ಜಂಗಣ್ಣವರ ಮಂಗಳೂರಲ್ಲಿ ಕೂಲಿ ಕೆಲಸಕ್ಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮೂರು ದಿನಗಳ ಹಿಂದಷ್ಟೇ ಮಂಗಳೂರಿನಿಂದ ಕಲ್ಲಿಗನೂರು ಗ್ರಾಮಕ್ಕೆ ವಾಪಾಸ್‌ ಆಗಿದ್ದ. ಅನಾರೋಗ್ಯ ಹಿನ್ನೆಲೆಯಲ್ಲಿ ಶಾಂತಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. 

ಭಾರತದಲ್ಲಿ ಕೊರೋನಾ ಅಟ್ಟಹಾಸ: ಸೂಕ್ಷ್ಮ ಕ್ಷೇತ್ರಗಳಲ್ಲಿ ಕರ್ನಾಟಕದ 2 ಜಿಲ್ಲೆಗಳು..!

ಮೃತ ಗುರುಸಂಗಪ್ಪನನ್ನ ಪರೀಕ್ಷಿಸಿದ ವೈದ್ಯರು ಕೊರೋನಾ ವೈರಸ್ ಇಲ್ಲ ಅಂತ ಹೇಳಿದ್ದರು. ಆದರೆ ಕೊರೋನಾ ವೈರಸ್ ಬರುತ್ತದೆ ಎಂದು ಭಯಗೊಂಡು ಗ್ರಾಮದ ಹೊರವಲಯದ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಗಜೇಂದ್ರಗಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ. 
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?