ಕುಡ್ಲ ಮಂದಿಗೆ ಶಹಬ್ಬಾಸ್..! ಲಾಕ್‌ಡೌನ್‌ ಸೂಚನೆ ಸ್ಟ್ರಿಕ್ಟ್ ಪಾಲನೆ

By Suvarna News  |  First Published Mar 26, 2020, 11:42 AM IST

ಬುದ್ಧಿವಂತರ ನಾಡು ಎನ್ನುವುದಕ್ಕೆ ಸಾರ್ಥಕತೆ ತೋರಿಸಿದ್ದಾರೆ ಮಂಗಳೂರಿನ ಜನ. ಲಾಕ್‌ಡೌನ್‌ ನಡುವೆ ದಿಸನಿ ಸಾಮಾಗ್ರಿಗಳಿಗಾಗಿ ಹೊರ ಬಂದ ಜನ ನೂಕು ನುಗ್ಗಲು ಮಾಡದೆ ಬಹಳ ಶಿಸ್ತಿನಿಂದ ಸಾಮಾಗ್ರಿ ಖರೀದಿಕೊಂಡು ಹೋಗಿದ್ದಾರೆ.


ಮಂಗಳೂರು(ಮಾ.26): ಬುದ್ಧಿವಂತರ ನಾಡು ಎನ್ನುವುದಕ್ಕೆ ಸಾರ್ಥಕತೆ ತೋರಿಸಿದ್ದಾರೆ ಮಂಗಳೂರಿನ ಜನ. ಲಾಕ್‌ಡೌನ್‌ ನಡುವೆ ದಿಸನಿ ಸಾಮಾಗ್ರಿಗಳಿಗಾಗಿ ಹೊರ ಬಂದ ಜನ ನೂಕು ನುಗ್ಗಲು ಮಾಡದೆ ಬಹಳ ಶಿಸ್ತಿನಿಂದ ಸಾಮಾಗ್ರಿ ಖರೀದಿಕೊಂಡು ಹೋಗಿದ್ದಾರೆ.

ಸರ್ಕಾರದ ಸೂಚನೆಗೆ ಕೊನೆಗೂ ಎಚ್ಚೆತ್ತ ಮಂಗಳೂರಿನ ಜನ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಮಂಗಳೂರಿನ ನಾಗರಿಕರು ನಗರದ ಮಲ್ಲಿಕಟ್ಟೆ ಮಾರ್ಕೆಟ್‌ನಲ್ಲಿ ಶಿಸ್ತಿನ ಕ್ರಮ ಅನುಸರಿಸಿದ್ದಾರೆ.

Latest Videos

ಅಪ್ಪಾ.. ಹೊರಗೋಗ್ಬೇಡಾ ಕೊರೋನಾವಿದೆ: ಪೊಲೀಸಪ್ಪ ಮಗಳ ಮಾತ ಕೇಳಿಯೊಮ್ಮೆ!

ಸೇಫ್ಟಿ ಲೈನ್ ಇಲ್ಲದಿದ್ದರೂ ಎರಡು ಫೀಟ್ ಅಂತರ ಕಾಯ್ದುಕೊಂಡ ನಾಗರಿಕರು ಜವಾಬ್ದಾರಿ ಮೆರೆದಿದ್ದಾರೆ. ವರ್ತಕರೂ ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸೂಚನೆ ನೀಡುತ್ತಿದ್ದಾರೆ.

ಕೊರೋನಾ ವೈರಸ್ ದಿಟ್ಟ ಹೆಜ್ಜೆ ಇಟ್ಟ ಡಿಸಿಪಿ ಇಶಾ ಪಂತ್..!

ಗ್ರಾಹಕರು ಖರೀದಿಗೆ ಬರುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕೆಂದು ಪಾಲಿಕೆ ಅಂಗಡಿ ಮಾಲಕರಿಗೆ ಸೂಚನೆ ಕೊಟ್ಟಿತ್ತು. ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಇದ್ದಲ್ಲಿ ಮಾಲಕರ ವಿರುದ್ಧ ಕ್ರಮ ವಹಿಸಲು ಎಚ್ಚರಿಕೆ ನೀಡಲಾಗಿತ್ತು.

ಭಾರತದ ಋಣ ತೀರಿಸಲು ನಾವು ಸಿದ್ಧ: ಕೊರೋನಾ ಹೋರಾಟಕ್ಕೆ ಚೀನಾ ಸಹಾಯ ಹಸ್ತ

ಮಂಗಳೂರಿನ ಮೆಡಿಕಲ್, ಸೂಪರ್ ಮಾರ್ಕೆಟ್ ಸೇರಿ ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಂಡ ಜನರು ಜಾಗೃತೆ ವಹಿಸಿದ್ದಾರೆ. ಇಂದು ಸೆಂಟ್ರಲ್ ಮಾರ್ಕೆಟ್ ಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿರೋ ಜಿಲ್ಲಾಡಳಿತ ಸಾರ್ವಜನಿಕರಿಗೆ ಸ್ಥಳೀಯ ಅಂಗಡಿಗಳಲ್ಲಿ ಮಾತ್ರ ಖರೀದಿಗೆ ಅನುಮತಿ ನೀಡಿದೆ. ಬೆಳಗ್ಗೆ 6 ರಿಂದ 12ಗಂಟೆವರೆಗೆ ಖರೀದಿಗೆ ಅನುಮತಿ ಇದೆ.

click me!