ಸ್ವಗ್ರಾಮದ ರಕ್ಷಣೆಗಾಗಿ ದಂಡ ವಿಧಿಸಲು ಮುಂದಾದ ಗ್ರಾಮಸ್ಥರು| ಬಾಗಲಕೋಡೆ ಬಾದಾಮಿ ತಾಲೂಕಿನ ಕೆಂದೂರು ತಾಂಡಾದಲ್ಲಿ ನಡೆದ ಘಟನೆ| ತಾಂಡಾದಲ್ಲಿ ಯಾರೇ ಮದ್ಯ ಮಾರಾಟ ಮಾಡಿದರೆ 10 ಸಾವಿರ ರೂಪಾಯಿ ದಂಡ|
ಬಾಗಲಕೋಟೆ(ಮಾ.27): ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಿದ ಬೆನ್ನಲ್ಲೆ ಸ್ವಗ್ರಾಮದ ರಕ್ಷಣೆಗಾಗಿ ದಂಡ ವಿಧಿಸಲು ಮುಂದಾದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆಂದೂರ ತಾಂಡಾದಲ್ಲಿ ನಡೆದಿದೆ. ತಾಂಡಾದಲ್ಲಿ ಯಾರೇ ಮದ್ಯ ಮಾರಾಟ ಮಾಡಿದರೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗವುದು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕೆಂದೂರ ತಾಂಡಾದ ಜನರಿಂದ ತಮಗೆ ತಾವೇ ಸ್ವಯಂ ಘೋಷಿತ ದಂಡ ಹಾಕಿಕೊಂಡಿದ್ದಾರೆ. ನಿನ್ನೆ(ಬುಧವಾರ)ದಿಂದ ಊರ ಮುಖ್ಯ ರಸ್ತೆಗೆ ಬೇಲಿ ಹಾಕಿದ ಗ್ರಾಮಸ್ತರು ಊರೊಳಗೆ ಯಾರೂ ಬರದಂತೆ ಕ್ರಮ ಕೈಗೊಂಡಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಯುವಕರು ಮನೆಮನೆಗೆ ಅಲೆದಾಡಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
undefined
ಬಾಗಲಕೋಟೆಯಲ್ಲಿ ಮಾರ್ಕೆಟ್ ಓಪನ್: ಬೆಳ್ಳಂಬೆಳಿಗ್ಗೆ ಲಾಠಿ ಚಾರ್ಜ್!
ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಯುವಕರು ಕೊರೋನಾ ಬಗ್ಗೆ ಜಾಗೃತಿ ನೀಡುತ್ತಿದ್ದಾರೆ.ಯುವಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.